ತುಮಕೂರು: ಮಕ್ಕಳಿಗೋಸ್ಕರ ಬೇರೆಯವರ ಕುತ್ತಿಗೆ ಕೊಯ್ತಾರೆ. ಇವರು ಎಷ್ಟೋ ಜನರನ್ನು ಕೊಂದಾಕವ್ರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಅಭ್ಯರ್ಥಿ ದೇವೇಗೌಡರ ಬಗ್ಗೆ ಬಿಜೆಪಿ ಅಭ್ಯರ್ಥಿ ಜಿ. ಎಸ್ ಬಸವರಾಜು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ದೇವರ ದರ್ಶನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವರು ಎಷ್ಟು ಜನರನ್ನು ಕೊಂದು ಹಾಕಿದ್ದಾರೆ. ಅವರ ಜಾತಿಯವರನ್ನು ಕೊಂದು ಹಾಕಿದ್ದಾರೆ. ಅವರಿಗೆ ಬೇರೆ ಜಾತಿಗೆ ಕೈ ಹಾಕುವುದಕ್ಕೆ ಆಗಲ್ಲ. ದೇವೇಗೌಡರು ತಮ್ಮ ಮಕ್ಕಳಿಗೋಸ್ಕರ ಬೇರೆಯವರ ಕುತ್ತಿಗೆ ಕೊಯ್ತಾರೆ. ಅವರ ಜಿಲ್ಲೆಯಲ್ಲಿ ಮರ್ಡರ್ ಗಳು ಆಗಿದ್ದು ಲೆಕ್ಕ ಹಾಕಿಕೊಂಡು ಬರಲಿ ಎಂದರು.
ಕುಮ್ಮಕ್ಕು ಇಲ್ಲದೆ ಊರಲ್ಲಿ ಮರ್ಡರ್ ಆಗುತ್ತಾ. ರಾಜಕಾರಣಿ ಹೋಗಿ ಮರ್ಡರ್ ಮಾಡ್ತಾನಾ?. ಅವರ ಜನಾಂಗದ ಮೇಲೆ ಯಾರನ್ನು ಬಿಟ್ಟು ಕೊಟ್ಟಿಲ್ಲ. ದೇವೇಗೌಡರು ಒಂದು ರೀತಿಯಲ್ಲಿ ಹೆಗಲ ಮೇಲೆ ಕೈ ಇಟ್ಟರೆ 7 ವರ್ಷ ಭವಿಷ್ಯ ಇರಲ್ಲ, ಬಹಳ ಕಷ್ಟ. ಹುಷಾರಾಗಿರಬೇಕು ಅಷ್ಟೇ ಎಂದು ದೇವೇಗೌಡರ ವಿರುದ್ಧ ಬಿಜೆಪಿ ಅಭ್ಯರ್ಥಿ ಗುಡುಗಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ ಚುನಾವಣೆಯಲ್ಲಿ ಮೈತ್ರಿ ಪಕ್ಷ- ಬಿಜೆಪಿ ನಡುವೆ ಟಾಕ್ ಫೈಟ್ ಹೆಚ್ಚಾಗಿದೆ. ವಿರೋಧ ಪಕ್ಷದವರು ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ.