ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮರಾಗಿದ್ದು, ಇದೀಗ ಜಿಲ್ಲೆಯಲ್ಲಿ ನೀರವ ಮೌನ ಆವರಿಸಿದೆ. ಗುರು ಪೋಷಕರು, ಪತ್ನಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ರೆ, ಇತ್ತ ಗೆಳೆಯರು ಕಣ್ಣೀರು ಹಾಕುತ್ತಿದ್ದಾರೆ.
ಗುರು ಗೆಳೆಯರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಉಗ್ರ ಕೃತ್ಯವನ್ನು ಖಂಡಿಸಿ, ಪ್ರತೀಕಾರ ತೀರಿಸಿಕೊಳ್ಳಲೇ ಬೇಕು ಎಂದು ಆಗ್ರಹಿಸಿದ್ದಾರೆ. ಗೆಳೆಯರಾಗಿದ್ದ ಯೋಧರೊಬ್ಬರು ಮಾತನಾಡಿ, ಗುರು ಭಾಯ್ ಓರ್ವ ಯೋಧ. ಅವನು ತುಂಬಾ ನಿಯತ್ತಿನಿಂದ ಕೆಲಸ ಮಾಡುತ್ತಿದ್ದನು. ಒಳ್ಳೆಯ ವ್ಯಕ್ತಿತ್ವ ಹೊಂದಿದ್ದನು. ಆದ್ರೆ ಉಗ್ರರು ಈ ರೀತಿ ಮಾಡಿರುವುದು ತುಂಬಾನೇ ನೋವಾಗಿದೆ. ನಾನು ಕೂಡ ಓರ್ವ ಯೋಧನಾಗಿದ್ದೇನೆ. ಉಗ್ರರು ಈ ರೀತಿ ಮಾಡಿದ್ದಕ್ಕೆ ತಕ್ಕ ಉತ್ತರ ಕೊಡುತ್ತೇವೆ. ಬುಧವಾರವಷ್ಟೇ ಗುರು ನನ್ನ ಜೊತೆ ಫೋನಿನಲ್ಲಿ ಮಾತನಾಡಿ, ಡ್ಯೂಟಿಗೆ ಹೋಗ್ತಾ ಇದ್ದೀನಿ. 2 ನಿಮಿಷದ ಬಳಿಕ ಕರೆ ಮಾಡ್ತೀನಿ ಎಂದು ಹೇಳಿದ್ದನು. ಆದ್ರೆ ಮತ್ತೆ ಆತನ ಕರೆ ಬಂದೇ ಇಲ್ಲ ಎಂದು ಗುರವಿನ ಗೆಳೆಯ ಯೋದರೊಬ್ಬರು ಬೇಸರ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ
Advertisement
Advertisement
ಒಂದು ವಾರದ ಹಿಂದೆಯಷ್ಟೇ ಗುರು ಊರಿಗೆ ಬಂದು ಮೂರು ದಿನಗಳ ಹಿಂದೆಯಷ್ಟೇ ತೆರಳಿ ಮತ್ತೆ ಕೆಲಸಕ್ಕೆ ಸೇರಿಕೊಂಡಿದ್ದರು. ಆದ್ರೆ ಇದೀಗ ಅವರು ಉಗ್ರನ ಕೃತ್ಯದಿಂದ ಹುತಾತ್ಮರಾಗಿದ್ದಾರೆ. ಈ ವಿಚಾರ ಸ್ನೇಹಿತರ ಬಳಗಕ್ಕೆ ತುಂಬಾ ಬೇಸರವಾಗುತ್ತದೆ. ಇದಕ್ಕೆ ಪ್ರತಿಫಲವಾಗಿ ನಮ್ಮ ಸರ್ಕಾರ ಸೇಡು ತೀರಿಸಿಕೊಳ್ಳಲೇ ಬೇಕು ಎಂದು ಗೆಳೆಯರೊಬ್ಬರು ಒತ್ತಾಯಿಸಿದ್ರು. ಇದನ್ನೂ ಓದಿ: 44 ಯೋಧರನ್ನು ಬಲಿ ಪಡೆದುಕೊಂಡ ಉಗ್ರನೂ ಭಾರತೀಯ..!
Advertisement
Advertisement
ನನ್ನ ಗೆಳೆಯ ನಂದೀಶ್ ಎಂಬವರು ಜಾರ್ಖಂಡ್ ನಲ್ಲಿ ಸಿಆರ್‍ಪಿಎಫ್ ಯೋಧರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ನನಗೆ ಕರೆ ಮಾಡಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪಟ್ಟಿಯಲ್ಲಿ ಗುರು ಹೆಸರಿದೆ ಎಂಬ ಮಾಹಿತಿ ನೀಡಿದ್ರು. ಆದ್ರೆ ಈ ಬಗ್ಗೆ ಇನ್ನೂ ನಿಖರ ಮಾಹಿತಿಯಿಲ್ಲ. ಹೀಗಾಗಿ ªಅವರ ಮನೆಯವರಿಗೆ ವಿಷಯ ತಿಳಿಸಬೇಡ ಎಂದಿದ್ದರು. ಇನ್ನೊಬ್ಬರು ಚೆಲುರಾಜು ಎಂಬವರು ಕೂಡ ಅಲ್ಲೇ ಕೆಲಸ ನಿರ್ವಹಿಸುತ್ತಿಒದ್ದರು. ಅವರು ಕೂಡ 12 ಗಂಟೆ ಸುಮಾರಿಗೆ ಅದೇ ರಸ್ತೆಯಲ್ಲಿ ಪಾಸ್ ಆಗಿದ್ದರು. ಅವರು ಕೂಡ ಗುರು ಹುತಾತ್ಮರಾಗಿದ್ದಾರೆ ಎಂದು ಹೇಳಿದ್ರು ಎಂದು ಮತ್ತೋರ್ವ ಗೆಳೆಯ ಕಣ್ಣೀರು ಹಾಕಿದ್ರು. ಇದನ್ನೂ ಓದಿ: ಪುಲ್ವಾಮಾದಲ್ಲಿ ಮಂಡ್ಯದ ಯೋಧ ಹುತಾತ್ಮ – ಫೆ.10ಕ್ಕೆ ರಜೆ ಮುಗಿಸಿ ಊರಿಂದ ಹೊರಟಿದ್ದರು
https://www.youtube.com/watch?v=5JqTWRx0JWA
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv