ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಪ್ರೇಯಸಿಯನ್ನು ಚಾಕುವಿನಿಂದ ಇರಿದ ಪ್ರೇಮಿಯೊಬ್ಬ ಪೊಲೀಸರಿಗೆ ಶರಣಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದಲ್ಲಿ ಮತ್ತೆ ನೆತ್ತರು ಹರಿದಿದ್ದು, ಪ್ರಿಯಕರ ವಿಜಯ್ ಕದಂ ತನ್ನ ಪ್ರೇಯಸಿ ಪದ್ಮಾಳನ್ನು ಚಾಕುವಿನಿಂದ ಇರಿದಿದ್ದಾನೆ. ಆದರೆ ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಈ ನಡುವೆ ಉಪನಗರ ಠಾಣೆಗೆ ವಿಜಯ್ ತಾನೇ ಹೋಗಿ ಶರಣಾಗಿದ್ದಾನೆ.
Advertisement
Advertisement
ನಡೆದಿದ್ದೇನು?
ರಾಮಸೇನಾ ಸಂಘಟನೆ ಧಾರವಾಡ ಜಿಲ್ಲಾಧ್ಯಕ್ಷನಾಗಿ ವಿಜಯ್ ಕೆಲಸ ಮಾಡುತ್ತಿದ್ದ. ಪದ್ಮಾ ಮತ್ತು ವಿಜಯ್ ಇಬ್ಬರು ಪ್ರೀತಿಸುತ್ತಿದ್ದು ಕಳೆದ 7 ವರ್ಷಗಳಿಂದ ಇಬ್ಬರು ಸಂಸಾರ ನಡೆಸುತ್ತಿದ್ದರು. ಆದರೆ ಇಬ್ಬರ ಮಧ್ಯೆ ಸಣ್ಣಪುಟ್ಟ ಜಗಳ ನಡೆಯುತ್ತಿತ್ತು. ಇದನ್ನೂ ಓದಿ: ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಲು RSS, SDPIನಿಂದ ಸಾಧ್ಯವಿಲ್ಲ: ಪಿಣರಾಯಿ ವಿಜಯನ್
Advertisement
ಈ ಹಿನ್ನೆಲೆ ವಿಜಯ್ ಜಗಳದ ವೀಡಿಯೋ ಸಹ ಮಾಡಿದ್ದು, ಇಬ್ಬರು ವಾದ-ಪ್ರತಿವಾದ ಮಾಡುತ್ತಿರುವುದು ಸೆರೆಯಾಗಿದೆ. ಈ ವೇಳೆ ಪದ್ಮಾ ಕೈ ನರ ಕಟ್ ಮಾಡಿಕೊಳ್ಳುವ ಧಮಕಿ ಹಾಕಿದ್ದು, ಜಗಳ ತಾರಕಕ್ಕೇರಿ ಅದೇ ಚಾಕುದಿಂದ ವಿಜಯ್ ಚುಚ್ಚಿದ್ದಾನೆ.
Advertisement
ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಪದ್ಮಾಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಪೊಲೀಸರು ರವಾನೆ ಮಾಡಿದ್ದಾರೆ.