ಬೆಂಗಳೂರು: ಆ್ಯಸಿಡ್ ದಾಳಿಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಯುವತಿ ತಮ್ಮ ಕುಟುಂಬಸ್ಥರ ಮುಂದೆ ಕಣ್ಣೀರು ಹಾಕಿದ್ದಾಳೆ. ನನ್ನ ಕಣ್ಣು ಮುಂದೆನೇ ಅವನಿಗೆ ಶಿಕ್ಷೆ ಆಗಬೇಕು ಎಂದು ಹೇಳಿರುವುದಾಗಿ ಪೋಷಕರು ತಿಳಿಸಿದ್ದಾರೆ.
Advertisement
ನಾಗೇಶ್‍ನನ್ನು ಅರೆಸ್ಟ್ ಮಾಡಿದ್ದಾರೆ. ಶಿಕ್ಷೆ ಕೊಡುತ್ತಾರೆ ಎಂದು ಪೋಷಕರು ಯುವತಿಗೆ ತಿಳಿಸಿದ್ದರು. ನೀನು ಹುಷಾರಾಗಮ್ಮ ಅವನನ್ನು ಅರೆಸ್ಟ್ ಮಾಡಿದ್ದಾರೆ. ಶಿಕ್ಷೆ ಕೊಡುತ್ತಾರೆ ಅಂತ ದೊಡ್ಡಮ್ಮ ಸುಶೀಲಮ್ಮ ಯುವತಿಗೆ ಸಮಾಧಾನದ ಮಾತುಗಳನ್ನು ಹೇಳಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ನಾಗನನ್ನು ಹಿಡಿಯಲು ಸ್ವತಃ ಖಾವಿ ಧರಿಸಿದ್ದ ಪೊಲೀಸರು
Advertisement
Advertisement
ಈಗ ಅರೆಸ್ಟ್ ಆಗಿದ್ದಾನೆ ಅಂತಾ ನಾವು ಹೇಳಲ್ಲ. ಈ ಮುನ್ನವೇ ನನ್ನ ಮಗಳಿಗೆ ಮೊದಲ ದಿನವೇ ಅರೆಸ್ಟ್ ಆಗಿದ್ದಾನೆ ಅಂತಾ ಹೇಳಿದ್ದೇವೆ. ಈಗ ಅರೆಸ್ಟ್ ಆದ ಅಂತಾ ಹೇಳಿದರೆ ಅವಳು ನೊಂದುಕೊಳ್ಳುತ್ತಾಳೆ ಅಂತಾ ಸುಶೀಲಮ್ಮ ಅಳಲು ತೊಡಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಕರೆತರುವಾಗ ಎಸ್ಕೇಪ್ ಆಗಲು ಯತ್ನ- ಆ್ಯಸಿಡ್ ನಾಗನ ಕಾಲಿಗೆ ಗುಂಡೇಟು
Advertisement
ಸದ್ಯ ಆ್ಯಸಿಡ್ ದಾಳಿಗೆ ಒಳಗಾದ ಯುವತಿ ನಗರದ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೆಲವು ದಿನಗಳಿಂದ ಐಸಿಯುನಲ್ಲಿದ್ದ ಯುವತಿ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇದೀಗ ಆಕೆಯನ್ನು ಸ್ಪೆಷಲ್ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ. ಸಂತ್ರಸ್ತೆಯನ್ನು ಆಸ್ಪತ್ರೆಯಲ್ಲಿಯೇ ಇದ್ದುಕೊಂಡು ಆಕೆಯ ದೊಡ್ಡಮ್ಮ ಸುಶೀಲಮ್ಮ ನೋಡಿಕೊಳ್ಳುತ್ತಿದ್ದಾರೆ.