
ಮಡಿಕೇರಿ: ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣಕ್ಕೆ ಶಿಕ್ಷಣ ಇಲಾಖೆಯ ಹಣ ದುರ್ಬಳಕೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿರುಗೇಟು ನೀಡಿದ್ದಾರೆ.
ಮಡಿಕೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಬಿ.ಸಿ ನಾಗೇಶ್, ಬಿ.ಕೆ ಹರಿಪ್ರಸಾದ್ ಅವರ ಅವಾಂತರ ನಿಮಗೂ ಗೊತ್ತಿದೆ. ಅವರು ಯಾವಾಗಲೂ ಪೂರ್ಣ ಮಾಹಿತಿ ಇಲ್ಲದೆ ಮಾತನಾಡುತ್ತಾರೆ. ಅವರಿಗೂ ಎಕ್ಸ್‌ಕ್ಲ್ಯೂಸಿವ್ ಆಗಿ ಟ್ವೀಟ್ ಮಾಡಬೇಕೆಂಬ ಹುಚ್ಚು ಇರಬಹುದು. ಆದ್ದರಿಂದ ಹೀಗೆ ಟ್ವೀಟ್ ಮಾಡಿದ್ದಾರೆ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಅಗ್ನಿಪಥ್ ಪ್ರತಿಭಟನೆಯಲ್ಲಿ ಮೈಕ್ ಭಾಷಣಕ್ಕೆ ಬ್ರೇಕ್ ಹಾಕಿದ ಪೊಲೀಸರು
ಸಚಿವ @BCNagesh_bjp ಅವ್ರು ತನ್ನ ವಯಕ್ತಿಕ ಸಾಮಾಜಿಕ ಜಾಲತಾಣ ನಿರ್ವಹಣೆಗೂ ಶಿಕ್ಷಣ ಇಲಾಖೆಯ ಬೊಕ್ಕಸಕ್ಕೆ ಕತ್ತರಿ ಹಾಕಿದ್ದಾರೆ. ಈ ಸರ್ಕಾರಕ್ಕೆ 40%ಕಮಿಷನ್ ಸಾಲದಾಗುತ್ತಿಲ್ಲವೇ?
ಸುಳ್ಳಿನ ವಾಟ್ಸಪ್ ಯುನಿವರ್ಸಿಟಿಯ ಸಂದೇಶಗಳನ್ನ ಫಾರ್ವರ್ಡ್ ಮಾಡಲು ಲಕ್ಷಾಂತರ ರೂಪಾಯಿ ಶಿಕ್ಷಣ ಇಲಾಖೆಯ ಹಣ ಖರ್ಚು ಮಾಡುತ್ತಿರುವುದು ನಾಚಿಕೆಗೇಡು. pic.twitter.com/JOfPukZqOC
— Hariprasad.B.K. (@HariprasadBK2) June 27, 2022
ಅವರೊಬ್ಬ ವಿರೋಧ ಪಕ್ಷದ ನಾಯಕನಾಗಿ ತಾಳ್ಮೆ ವಹಿಸಬೇಕು. ಅದು ಇಲಾಖೆಯ ಸಾಮಾಜಿಕ ಜಾಲತಾಣ. ಅದರ ನಿರ್ವಹಣೆಗೆ ಸಂಬಂಧಿಸಿದಂತೆ ಯಾವ ಒಪ್ಪಂದವೂ ಆಗಿಲ್ಲ. ಯಾರಿಗೂ ಹಣವನ್ನೂ ಕೊಟ್ಟಿಲ್ಲ. ಹರಿಪ್ರಸಾದ್ ಅವರು ದೆಹಲಿಯಲ್ಲಿ ಇದ್ದವರು, ಈಗ ರಾಜ್ಯದಲ್ಲಿ ಎಲ್ಲರಿಗಿಂತ ಮೊದಲು ಟ್ವೀಟ್ ಮಾಡಬೇಕು ಎಂದು ಹೀಗೆ ಅವಾಂತರ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಬಂಡಾಯ ಶಿವಸೇನೆ ಶಾಸಕರಿಗೆ ಬಿಗ್ ರಿಲೀಫ್ – ಜುಲೈ 12 ವರೆಗೂ ಅನರ್ಹತೆ ಅಸ್ತ್ರದಿಂದ ಅತೃಪ್ತರು ಸೇಫ್