ಬೆಂಗಳೂರು: ಹೋಟೆಲ್, ಆಸ್ಪತ್ರೆ ಸೇರಿದಂತೆ ಪ್ರವೇಶ ದ್ವಾರದ ಬಳಿ ದೇವವ ವಿಗ್ರಹವನ್ನು ಅಥವಾ ಸುಂದರವಾದ ಮೂರ್ತಿ ಅಥವಾ ಹೂ ಕುಂಡವನ್ನು ಇರಿಸಲಾಗುತ್ತದೆ. ಸಾಮಾನ್ಯವಾಗಿ ಪ್ರವೇಶ ದ್ವಾರದಲ್ಲಿ ವಿಘ್ನ ನಿವಾರಕ ಗಣೇಶ್ ಮೂರ್ತಿಗಳನ್ನು ನೋಡಿರುತ್ತೇವೆ. ಸಿಲಿಕಾನ್ ಸಿಟಿಯ ಪ್ರತಿಷ್ಟಿತ ಹೋಟೆಲ್ ಪ್ರವೇಶ ದ್ವಾರದಲ್ಲಿ ಸ್ವಾಮಿ ನಿತ್ಯಾನಂದ ಫೋಟೋ ಕಟೌಟ್ ಇರಿಸಲಾಗಿದ್ದು, ಇದಕ್ಕೆ ಇಲ್ಲಿ ದಿನನಿತ್ಯ ಪೂಜೆ ನಡೆಯುತ್ತದೆ.
ಬಿಡದಿಯ ನಿತ್ಯಾನಂದ ಸ್ವಾಮಿ ಅಧ್ಯಾತ್ಮಿಕ ವಿಚಾರಗಳಿಗಿಂತ ಬೇರೆ ಸುದ್ದಿಗಳಿಗೆ ಹೆಚ್ಚು ಸುದ್ದಿಯಾದಂತಹ ವ್ಯಕ್ತಿ. ಈಗಲೂ ಹಲವು ಪ್ರಕರಣಗಳು ಸ್ವಾಮಿಯ ಮೇಲಿವೆ. ಬೆಂಗಳೂರಿನ ಹೆಚ್‍ಎಎಲ್ ಬಳಿ ಇರುವ ಸ್ಟೆರ್ಲಿಂಗ್ ಮ್ಯಾಕ್ ಹೋಟೆಲ್‍ನಲ್ಲಿ ನಿತ್ಯಾನಂದ ಸ್ವಾಮಿ ಕಟೌಟ್ ಎರಡು ತ್ರಿಶೂಲದ ಮಧ್ಯೆ ದೊಡ್ಡ ಆಸನದಲ್ಲಿ ಪ್ರತಿಷ್ಟಾಪನೆ ಮಾಡಲಾಗಿದೆ.
ಹೋಟೆಲ್ ಗೆ ಆಗಮಿಸುವ ಜನರು ನಿತ್ಯಾನಂದ ಸ್ವಾಮೀಜಿ ಕಟೌಟ್ ನೋಡಿ ಒಂದು ಕ್ಷಣ ಗಲಿಬಿಲಿಯಾಗುವುದುಂಟು. ಹೋಟೆಲ್ ಮಾಲೀಕರು ನಿತ್ಯಾನಂದ ಸ್ವಾಮಿಯ ಭಕ್ತರು ಎಂದು ಹೇಳಲಾಗುತ್ತಿದೆ. ಹೋಟೆಲ್ ಗೆ ತೆರಳಿದ ಗ್ರಾಹಕರೊಬ್ಬರು ನಿತ್ಯಾನಂದ ಸ್ವಾಮೀಜಿ ಕಟೌಟ್ ನೋಡಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv