ನವದೆಹಲಿ: ಯುದ್ಧ ಪೀಡಿತ ಉಕ್ರೇನ್‍ನಿಂದ ಮಗ ವಾಪಸ್ಸಾಗುತ್ತಿದ್ದಂತೆ ಭಾವುಕರಾದ ಪೋಷಕರೊಬ್ಬರು ಇವನು ನನ್ನ ಮಗ ಅಲ್ಲ, ಮೋದಿಯವರ ಮಗ ಎಂದು ಹೇಳುತ್ತಾ ಭಾವುಕರಾಗಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ತನ್ನ ಮಗನನ್ನು ಯುದ್ಧ ಪೀಡಿತ ಉಕ್ರೇನ್‍ನಿಂದ ಸ್ಥಳಾಂತರಿಸಿದ ಸರ್ಕಾರಕ್ಕೆ ಭಾವನಾತ್ಮಕವಾಗಿ ಧನ್ಯವಾದ ಅರ್ಪಿಸಿದರು. ಅವನು ಮೋದಿಯವರ ಮಗ, ನನ್ನ ಮಗ ಅಲ್ಲ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಎಂಟು ವರ್ಷಗಳ ನಂತರ ಒಂದಾದ ನೀನಾಸಂ ಸತೀಶ್ ಮತ್ತು ಸಿಂಧು
Advertisement
Advertisement
ವೀಡಿಯೋದಲ್ಲಿ ಏನಿದೆ?: ಕಾಶ್ಮೀರದ ಸಂಜಯ್ ಪಂಡಿತ್ ಕಣ್ಣೀರಿಡುತ್ತಾ ಉಕ್ರೇನ್‍ನ ಸುಮಿಯಲ್ಲಿ ಸಿಲುಕಿರುವ ತನ್ನ ಮಗನನ್ನು ಸ್ಥಳಾಂತರಿಸಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದಗಳು. ಮರಳಿ ಬಂದಿರುವುದು ಮೋದಿಯವರ ಮಗನೇ ಹೊರತು ನನ್ನ ಮಗನಲ್ಲ ಎಂದು ನಾನು ಹೇಳಬಯಸುತ್ತೇನೆ. ಸುಮಿಯಲ್ಲಿನ ಸಂಘರ್ಷದ ಪರಿಸ್ಥಿತಿಯಿಂದ ಮಗನ ಮರಳುವಿಕೆಯ ಭರವಸೆಯೇ ಇರಲಿಲ್ಲ. ಸರ್ಕಾರಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳುತ್ತಾ ಭಾವುಕರಾಗಿದ್ದಾರೆ. ಇದನ್ನೂ ಓದಿ: ಉಪೇಂದ್ರ ಹೊಸ ಸಿನಿಮಾ ಮಾಡಲು ಸ್ಟಾರ್ ನಟಿ ನಯನತಾರಾ ಕಾರಣ : ಏನಿದು ಅಸಲಿ ಗುಟ್ಟು?
Advertisement
#WATCH A tearful Sanjay Pandita from Srinagar, Kashmir welcomes his son Dhruv on his return from Sumy, #Ukraine, says, “I want to say that it’s Modiji’s son who has returned, not my son. We had no hopes given the circumstances in Sumy. I am thankful to GoI for evacuating my son.” pic.twitter.com/ygqOVk5PGm
— ANI (@ANI) March 11, 2022
Advertisement
ಉಕ್ರೇನ್‍ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದ ತಮ್ಮ ಮಕ್ಕಳನ್ನು ನೋಡಲು ಪೋಷಕರು ಐದು-ಆರು ಗಂಟೆಗಳ ಕಾಲ ಅಲ್ಲಿಯೇ ಕಾಯುತ್ತಿದ್ದರು. ಕಣ್ಣೀರು ಸುರಿಸುತ್ತಾ ಅನೇಕ ಪಾಲಕರು ಮತ್ತು ಕುಟುಂಬ ಸದಸ್ಯರು ತಮ್ಮ ಮಕ್ಕಳಿಗೆ ಸಿಹಿ ಹಂಚಿ, ಹಾರ ಹಾಕಿ ಸ್ವಾಗತಿಸಿದ್ದಾರೆ.