Connect with us

Districts

ಪಂಚಮಿಯನ್ನ ಸಂಪ್ರದಾಯಬದ್ಧವಾಗೇ ಮದ್ವೆಯಾಗಿದ್ದಾರೆ- ಇಕ್ಬಾಲ್ ಅನ್ಸಾರಿ ತಾಯಿ

Published

on

ಕೊಪ್ಪಳ: ಇದು ಅಣ್ಣತಮ್ಮಂದಿರ ಜಗಳ. ಅವನು ಎರಡು ಮದುವೆನೂ ಆಗ್ತಾನೆ, ನಾಲ್ಕೂ ಆಗ್ತಾನೆ. ಯಾರು ಕೇಳ್ತಾರೆ? ಅವನು ಸಂಪಾದನೆ ಮಾಡಿ ಹೆಂಡತಿ- ಮಕ್ಕಳನ್ನ ಸಾಕ್ತಾನೆ. ಹೀಗಾಗಿ ಆ ಹುಡ್ಗಿಯನ್ನು ಮದ್ವೆ ಆಗಿರೋದು ತಪ್ಪೇನಿಲ್ಲ. ಪಂಚಮಿಯನ್ನು ಅನ್ಸಾರಿ ಸಂಪ್ರದಾಯಸ್ಥವಾಗಿ ಮದ್ವೆಯಾಗಿದ್ದಾರೆ ಅಂತಾ ಗಂಗಾವತಿ ಜೆಡಿಎಸ್ ಶಾಸಕ ಇಕ್ಬಾಲ್ ಅನ್ಸಾರಿ ತಾಯಿ ಅಹಮದಿ ಬೇಗಂ ಮಗನ ಪರವಾಗಿ ಹೇಳಿಕೆ ನೀಡಿದ್ದಾರೆ.

ಶಾಸಕ ಇಕ್ಬಾಲ್ ಅನ್ಸಾರಿ ನಟಿ ಪಂಚಮಿಯೊಂದಿಗಿನ 2ನೇ ಸಂಬಂಧದ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಎರಡೂ ಕುಟುಂಬ ಒಪ್ಪಿಗೆ ಸೂಚಿಸಿ ಮದ್ವೆ ಮಾಡ್ಕೊಂಡಿದ್ದಾರೆ. ಪಂಚಮಿ ಒಪ್ಪಿಗೆಯಂತೆಯೇ ಮದ್ವೆ ಮಾಡಿಕೊಂಡು ಜೀವನ ನಡೆಸ್ತಾ ಇದ್ದಾರೆ. ತಾವು ಸಂಪಾದನೆ ಮಾಡಿದ ಆಸ್ತಿಯನ್ನು ಕೊಟ್ಟಿದ್ದಾರೆ. ಪಿತ್ರಾರ್ಜಿತ ಆಸ್ತಿಯನ್ನು ಕೊಟ್ಟಿಲ್ಲ ಅಂತಾ ಹೇಳಿದ್ದಾರೆ.

ಅನ್ಸಾರಿಯವರನ್ನು ರಾಜಕೀಯವಾಗಿ ತುಳಿಯಲು ಯತ್ನ ಮಾಡ್ತಿದ್ದಾರೆ. ಬೇರೆ ಬೇರೆ ಚಟುವಟಿಕೆಗೆ ಬಿದ್ದು ಆಸ್ತಿ ಹಾಳು ಮಾಡಿಕೊಂಡು ಬಳಿಕ ಈಗ ಹಣ ಕೇಳ್ತಿದ್ದಾರೆ. ನ್ಯಾಯಾಲಯದ ಮುಂದೆ ಹೋಗಿ ಪದೇ ಪದೇ ಗಲಾಟೆ ಮಾಡ್ತಾರೆ. ತಂದೆಯವರು ಜೀವಂತವಾಗಿದ್ದಾಗ ಸಮಾನವಾಗಿ ಹಂಚಿಕೆ ಮಾಡಿದ್ರು. ಆದ್ರೂ ಕೂಡ ಅನ್ಸಾರಿ ಅವರಿಗೆಲ್ಲ ಹಣವನ್ನು ನೀಡಿ ಆಸ್ತಿ ಮಾಡಿಕೊಟ್ಟಿದ್ರು. ಸಹೋದರರು ದಾರಿ ತಪ್ಪಿ ತಮ್ಮ ಆಸ್ತಿಯನ್ನು ಕಳೆದುಕೊಂಡು ಆರೋಪ ಮಾಡ್ತಾ ಇದ್ದಾರೆ. ಆದ್ರೂ ಅನ್ಸಾರಿ ತಿಂಗಳಿಗೆ 75 ಸಾವಿರ ಜೀವನಾಂಶ ಕೊಡ್ತಾ ಇದ್ರು. ತಮ್ಮಂದಿರ ಕುಟುಂಬಕ್ಕೆ ಅನ್ಯಾಯ ಆಗದೇ ಇರಲಿ ಅಂತ ಹಣ ಕೊಡ್ತಿದ್ದಾರೆ. ರಾಜಕೀಯ ಪ್ರೇರಿತವಾಗಿ ಈ ಆರೋಪ ಮಾಡ್ತಿದ್ದಾರೆ ಅಂತಾ ಹೇಳಿದ್ರು.

https://www.youtube.com/watch?v=OKRdXeGYwnk

ಜೆಡಿಎಸ್ ಶಾಸಕ ಇಕ್ಬಾಲ್ ಅನ್ಸಾರಿ ಮನೆಯಲ್ಲಿದ್ದುಕೊಂಡೇ ಮಾಧ್ಯಮದ ಮುಂದೆ ಬರಲ್ಲ. ನನ್ನ ಪರವಾಗಿ ತನ್ನ ತಾಯಿ ಹೇಳಿಕೆ ನೀಡುತ್ತಾರೆ ಅಂತಾ ಮನೆಯ ಕೋಣೆಯಲ್ಲಿಯೇ ಕುಳಿತು ತಾಯಿಯನ್ನು ಮಾಧ್ಯಮಗಳಿಗೆ ಹೇಳಿಕೆ ಕೊಡಲು ಕಳುಹಿಸಿದ್ದಾರೆ ಎನ್ನಲಾಗಿದೆ.

ಎರಡನೇ ಮದುವೆ ಬಯಲಾಗಿದ್ದು ಹೇಗೆ?: ಶಾಸಕ ಇಕ್ಬಾಲ್ ಅನ್ಸಾರಿ ಮೊದಲ ಹೆಂಡತಿಗೆ ಗೊತ್ತಿಲ್ಲದಂತೆ ನಟಿ ಜೊತೆ ಸಂಸಾರ ನಡೆಸಿದ್ದು, ಅಣ್ಣ-ತಮ್ಮಂದಿರ ಆಸ್ತಿ ಜಗಳದಲ್ಲಿ ಶಾಸಕರ ಎರಡನೇ ಮದುವೆ ಬಯಲಾಗಿದೆ. ಇಕ್ಬಾಲ್ ಅನ್ಸಾರಿಗೆ ಇಡೀ ಜಿಲ್ಲೆಯಾದ್ಯಂತ 30ಕ್ಕೂ ಹೆಚ್ಚು ಬಾರ್‍ಗಳು ಹಾಗೂ ವೈನ್ ಶಾಪ್‍ಗಳಿವೆ. ಆಸ್ತಿಯನ್ನ ಸಹೋದರರಿಗೆ ಹಂಚದೆ ಇಬ್ಬರು ಹೆಂಡತಿಯ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿದಾಗ 2ನೇ ಸಂಬಂಧ ಬಯಲಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ವಿರುದ್ಧ ಇಬ್ಬರು ಸಹೋದರರು ಸಿಟ್ಟಿಗೆದ್ದಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಇಕ್ಬಾಲ್ ಅನ್ಸಾರಿಯವರ ಬಾರ್‍ಗಳಲ್ಲಿ ಡಬಲ್ ರೇಟ್ ತೆಗೆದುಕೊಳ್ತಾರೆ. ಎಂಆರ್‍ಪಿಗಿಂತ ಡಬಲ್ ವಸೂಲಿ ಮಾಡ್ತಾರೆ ಅಂತ ಪಬ್ಲಿಕ್ ಟಿವಿ ಸುದ್ದಿ ಬಿತ್ತರಿಸಿತ್ತು. ಆ ಸಮಯದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತು ಪತ್ನಿ ತಬಸುಮಾ ಅವರ ಒಡೆತನದ ಬಾರ್‍ಗಳ ಪಟ್ಟಿ ಮಾಡ್ತಿದ್ದಾಗಲೇ ಪಂಚಮಿಗೂ ಬಾರ್ ಲೈಸೆನ್ಸ್ ವರ್ಗಾಯಿಸಿರೋದು ಬೆಳಕಿಗೆ ಬಂತು. ಇದರ ಜಾಡು ಹಿಡಿದಾಗ ಶಾಸಕ ಇಕ್ಬಾಲ್ ಅನ್ಸಾರಿ ಅವರ ಅಸಲಿ ಬಣ್ಣ ಬಯಲಾಗಿದೆ. 2016 ಅಂದ್ರೆ ಕಳೆದ ವರ್ಷ ಜೂನ್ 27ರಂದು ಶ್ರೀಮತಿ ಪಂಚಮಿ, ದಿವಂಗತ ತಂದೆ ಗುರುಸ್ವಾಮಿ ಅನ್ನೋರಿಗೆ ಬಾರ್ ಮಾಲಿಕತ್ವವನ್ನ ಕೊಟ್ಟಿರೋ ದಾಖಲೆ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

https://www.youtube.com/watch?v=GVuQKk9L0VA

2013ರ ಚುನಾವಣಾ ಪ್ರಚಾರದಲ್ಲೇ ಅನ್ಸಾರಿ ಬಣ್ಣ ಬಯಲಾಗಿ ಈಗ ಮೊದಲ ಪತ್ನಿ ಸಿಟ್ಟಿಗೆದ್ದಿದ್ದಾರೆ. ನಟಿ ಪಂಚಮಿ ಶಾಸಕ ಇಕ್ಬಾಲ್ ಅನ್ಸಾರಿ ಪರವಾಗಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ರು. ಗಂಡನ ಎರಡನೇ ಸಂಬಂಧದ ಬಗ್ಗೆ ಗೊತ್ತಾಗಿ ನಟಿಗೆ ಅನ್ಸಾರಿ ಪತ್ನಿ ತಬಸುಮಾ ಮನೆಯಲ್ಲೇ ಥಳಿಸಿದ್ರು ಎನ್ನಲಾಗಿದೆ. ಮೊದಲ ಹೆಂಡತಿ ಹಲ್ಲೆ ಬಳಿಕ 2ನೇ ಹೆಂಡತಿ ಪಂಚಮಿಗೆ ಇಕ್ಬಾಲ್ ಅನ್ಸಾರಿ ಬಾರ್ ಬರೆದುಕೊಟ್ಟಿದ್ದಾರೆ.

Click to comment

Leave a Reply

Your email address will not be published. Required fields are marked *