ಸೈಟ್ ಕೊಡ್ತೀನೆಂದು ಮೋಸ ಮಾಡಿದ್ದಾರೆ ಅಂತಾ ಪತ್ನಿಗೆ ಕಿರುಕುಳ ಕೊಟ್ಟು ಕೊಲೆಗೈದ!

Public TV
1 Min Read
MURDER 1

ಬೆಂಗಳೂರು: ಪತಿಯೇ ತನ್ನ ಪತ್ನಿಯನ್ನು ಕೊಲೆಗೈದು ಬಳಿಕ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹತ್ಯೆಗೆ ಕಾರಣ ರಿವೀಲ್ ಆಗಿದೆ.

ಯಲಹಂಕ (Yalahanka) ಉಪನಗರ 3 ನೇ ಹಂತದಲ್ಲಿ ಈ ಘಟನೆ ನಡೆದಿದೆ. ರೇಖಾ ಮನೆಯವರು ಸೈಟ್ ಕೊಡ್ತಿನಿ ಅಂತಾ ಮೋಸ ಮಾಡಿದ್ದಾರೆ ಎಂದು ಪತಿ ಸಂತೋಷ್ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದನು ಎಂಬ ಆರೋಪ ಕೇಳಿ ಬಂದಿದೆ.

WIFE MURDER

ಬುಧವಾರ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ರೇಖಾ ಪತ್ತೆಯಾಗಿದ್ದರು. ಇದೀಗ ರೇಖಾ ಪೋಷಕರು ಕತ್ತು ಹಿಸುಕಿ ಕೊಲೆ ಮಾಡಿ ನೇಣು ಬಿಗಿರೋ ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಯಲಹಂಕ ನ್ಯೂ ಟೌನ್ ಪೊಲೀಸರಿಂದ ಪತಿ ಸಂತೋಷ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪತ್ನಿ ಕೊಲೆಗೈದು ಸೀರೆಯಿಂದ ಫ್ಯಾನಿಗೆ ನೇತಾಕಿದ ಕಿರಾತಕ!

ಲವ್ ಮ್ಯಾರೇಜ್: ಕಳೆದ ನಾಲ್ಕು ವರ್ಷಗಳಿಂದ ರೇಖಾ ಮತ್ತು ಸಂತೋಷ್ ಪರಸ್ಪರ ಪ್ರೀತಿಸುತ್ತಿದ್ದರು. ಕಾಲೇಜು ದಿನಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದ ಈ ಜೊಡಿ ಎರಡೂ ಮನೆಯವರನ್ನು ಒಪ್ಪಿಸಿ ಒಂದೂವರೆ ವರ್ಷದ ಹಿಂದೆ ಮದುವೆಯಾಗಿತ್ತು. ಮೂಲತಃ ತಮಿಳುನಾಡು ಮೂಲದವರಾಗಿರುವ ಇವರು ಮದುವೆ ಆದ ನಂತರ ಬೆಂಗಳೂರಿನ ಯಲಹಂಕಗೆ ಶಿಫ್ಟ್ ಆಗಿದ್ದರು. ಈ ದಂಪತಿಗೆ 6 ತಿಂಗಳ ಹೆಣ್ಣು ಮಗು ಇದೆ.

Web Stories

Share This Article