ನವದೆಹಲಿ: ವಿರಾಟ್ ಕೊಹ್ಲಿ ಅವರು ಯಾವುದೇ ರೀತಿಯ ವಿವಾದದಲ್ಲಿರಲು ಬಯಸುವುದಿಲ್ಲ ಎಂದು ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್‍ಕುಮಾರ್ ಶರ್ಮಾ ಹೇಳಿದ್ದಾರೆ.
Advertisement
ಟೆಸ್ಟ್ ನಾಯಕತ್ವವನ್ನು ಕೊಹ್ಲಿ ತ್ಯಜಿಸುವುದಾಗಿ ಹೇಳಿದ ಬಳಿಕ ಹಲವು ಸೆಲೆಬ್ರೆಟಿಗಳು ಸೇರಿ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಕೊಹ್ಲಿಯ ಬಾಲ್ಯದ ಕೋಚ್ ರಾಜ್‍ಕುಮಾರ್ ಶರ್ಮಾ ಅವರು ಸಹ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಅವರು, ಟೆಸ್ಟ್ ನಾಯಕತ್ವವನ್ನು ತ್ಯಜಿಸುವ ಸ್ಟಾರ್ ಕ್ರಿಕೆಟಿಗ ಕೊಹ್ಲಿ ನಿರ್ಧಾರವು ಆತುರದ ನಿರ್ಧಾರವಲ್ಲ. 33 ವರ್ಷದ ಅವರು ಈ ರೀತಿಯ ನಿರ್ಧಾರಕ್ಕೆ ಬರುವ ಮೊದಲು ಸಾಕಷ್ಟು ಯೋಚಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಟೀಂ ಇಂಡಿಯಾದ ಟೆಸ್ಟ್ ನಾಯಕತ್ವ ತೊರೆದ ವಿರಾಟ್ ಕೊಹ್ಲಿ
Advertisement
Advertisement
ವಿರಾಟ್ ವಿವಾದ, ರಾಜಕೀಯ ವಿಚಾರದಿಂದಲೂ ದೂರವಿರಲು ಬಯಸುತ್ತಾರೆ. ಇನ್ನು ಮುಂದೆ ಅವರು ತಂಡದ ಯಶಸ್ಸಿಗೆ ಕೊಡುಗೆ ನೀಡುವುದಕ್ಕೆ ಹೆಚ್ಚು ಗಮನ ಕೊಡುತ್ತಾರೆ ಎಂದರು.
Advertisement
View this post on Instagram
ವಿರಾಟ್ ರಾಜೀನಾಮೆಯನ್ನು ಯಾರೂ ತಡೆಯಲಿಲ್ಲ. ಸ್ಥಾನದಿಂದ ಕೆಳಗಿಳಿಯುವುದು ಅವರ ವೈಯಕ್ತಿಕ ಆಯ್ಕೆ ಎಂದು ಪರಿಗಣಿಸಿ ಎಲ್ಲರೂ ಅವರ ನಿರ್ಧಾರವನ್ನು ಒಪ್ಪಿಕೊಂಡರು. ಆ ಸ್ಥಾನದಲ್ಲಿಯೇ ಅವರು ಮುಂದುವರೆಯಿರಿ ಎಂದು ಕೇಳುವ ಅಗತ್ಯ ಯಾರಿಗೂ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
Virat Kohli has the most away wins for India in Tests as a captain ????#India #TeamIndia pic.twitter.com/v1cA5Fc9gP
— Sportskeeda (@Sportskeeda) January 16, 2022
ವಿರಾಟ್ ರಿಲಾಕ್ಸ್ ಆಗಿದ್ದಾರೆ. ಹೆಚ್ಚು ಆಟದ ಮೇಲೆ ತಮ್ಮ ಗಮನ ಕೇಂದ್ರೀಕರಿಸಲು ಬಯಸುತ್ತಿದ್ದಾರೆ. ವಿರಾಟ್ ರಿಲಾಕ್ಸ್ ನಲ್ಲಿ ಇದ್ರೆ ತಂಡಕ್ಕೆ ಒಳ್ಳೆಯದು. ಆಗ ಅವರು ಆಟಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: 12 ಕೋಟಿ ರೂ. ಬಂಪರ್ ಲಾಟರಿ ಗೆದ್ದ ಪೇಂಟರ್!
ಈ ಹಿಂದೆ ಟೀಂ ಇಂಡಿಯಾದ ಟಿ20 ಮತ್ತು ಏಕದಿನ ತಂಡದ ನಾಯಕತ್ವವವನ್ನು ತೊರೆದಿದ್ದ ಕೊಹ್ಲಿ ಇದೀಗ ದಕ್ಷಿಣ ಆಫ್ರಿಕಾ ಸರಣಿ ಸೋಲಿನ ಬಳಿಕ ಟೆಸ್ಟ್ ನಾಯಕತ್ವಕ್ಕೂ ಗುಡ್ ಬೈ ಹೇಳಿದ್ದಾರೆ. ನನ್ನ ತಂಡಕ್ಕಾಗಿ ಯೋಚನೆ ಮಾಡಿ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸುತ್ತಿದ್ದೇನೆ ಎಂದು ಕೊಹ್ಲಿ 2 ದಿನಗಳ ಹಿಂದೆ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು.