ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ (Mohammed bin Salman) ಅವರ ಬಗ್ಗೆ ಅಸಭ್ಯ ವಾಕ್ಯವನ್ನು ಬಳಸಿ ವ್ಯಂಗ್ಯವಾಡಿದ್ದಾರೆ.
ಮಿಯಾಮಿಯಲ್ಲಿ ಸೌದಿ (Saudi Arabia) ಬೆಂಬಲಿತ ಹೂಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ಮೊಹಮ್ಮದ್ ಬಿನ್ ಸಲ್ಮಾನ್ Didn’t think he’d be kissing my ass. He really didn’t ಎನ್ನುವ ನುಡಿಗಟ್ಟನ್ನು ಬಳಸಿ ವ್ಯಂಗ್ಯ ಮಾಡಿದ್ದಾರೆ.
ನನ್ನನ್ನು ಅವರು ಅಮೆರಿಕದ ಸೋತ ಅಧ್ಯಕ್ಷ ಎಂದು ಭಾವಿಸಿದ್ದರು. ಈ ಯುದ್ಧ ರೀತಿ ಸಂಭವಿಸುತ್ತದೆ ಎಂದು ತಿಳಿದುಕೊಂಡಿರಲಿಲ್ಲ. ಈಗ ಅವರು ನನಗೆ ಒಳ್ಳೆಯರಾಗಬೇಕು ಎಂದರು.
🇺🇸🇸🇦 Trump said Saudi Crown Prince Mohammed Bin Salman wasn’t expecting to be kissing his ass.
“He has to be nice to me, he better be nice to me, he’s gotta be.”
Trump’s art of diplomacy; subtle as usual 😂pic.twitter.com/VsYd5zijk4 https://t.co/yz5Mi0sLDQ
— Mario Nawfal (@MarioNawfal) March 28, 2026
ಬುಧವಾರ ಟ್ರಂಪ್ ಸೌದಿಯ ರಾಜಕುಮಾರ ಯುದ್ಧಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದ್ದರು. ಅಮೆರಿಕದ ಜೊತೆಗೆ ಹೋರಾಡುತ್ತಿರುವ ಅವರನ್ನು ʻಯೋಧʼ ಎಂದು ಬಣ್ಣಿಸಿದ್ದರು. ಅವರೊಬ್ಬ ಯೋಧ, ಅವರೂ ನಮ್ಮ ಜೊತೆ ಹೋರಾಡುತ್ತಿದ್ದಾರೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಇರಾನ್ ಮೇಲೆ ದಾಳಿ ನಡೆಸಿ – ಟ್ರಂಪ್‌ಗೆ ಹಲವು ಬಾರಿ ಫೋನ್ ಮಾಡಿ ಒತ್ತಡ ಹೇರಿದ್ದ ಸೌದಿ
ಮೊಹಮ್ಮದ್ ಬಿನ್ ಸಲ್ಮಾನ್ ಸಾರ್ವಜನಿಕವಾಗಿ ಇರಾನ್ ಮೇಲಿನ ದಾಳಿಗೆ ಸೌದಿ ವಾಯುಸೀಮೆಯನ್ನು ಬಳಸಲು ಬಿಡುವುದಿಲ್ಲ. ರಾಜತಾಂತ್ರಿಕವಾಗಿ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸುವಂತೆ ಹೇಳಿದ್ದರೂ ದಾಳಿ ನಡೆಸುವಂತೆ ಅಮೆರಿಕಕ್ಕೆ ಒತ್ತಡ ಹೇರಿದ್ದರು.
ಟ್ರಂಪ್ ಭಾಷಣದಲ್ಲಿ Kissing my ass ಪದವನ್ನು ಬಳಸುವುದು ಹೊಸದೆನಲ್ಲ. ಈ ಹಿಂದೆ ಸುಂಕ ಸಮರ ಆರಂಭಿಸಿದ ಬಳಿಕ ಹಲವು ದೇಶಗಳು ತನ್ನ ಜೊತೆ ಮನವಿ ಮಾಡಿ ಬದಲಾವಣೆ ಮಾಡುವಂತೆ ಬೇಡಿಕೊಳ್ಳುತ್ತಿವೆ ಎಂದು ಹೇಳುವಾಗಲೂ ಟ್ರಂಪ್ ಈ ನುಡಿಗಟ್ಟನ್ನು ಬಳಸಿ ಆ ದೇಶಗಳನ್ನು ಅವಮಾನ ಮಾಡಿ ವ್ಯಂಗ್ಯ ಮಾಡುತ್ತಿದ್ದರು.

