ಲಕ್ನೋ: ಆರನೇ ಮಹಡಿಯಿಂದ ಬಿದ್ದು ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಇಂದಿರಾಪುರಂನಲ್ಲಿ ನಡೆದಿದೆ.
14 ವರ್ಷದ ಬಾಲಕಿ ಅಗ್ರಿಮಾ ಮೃತ ದುರ್ದೈವಿ. ಈ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ತಂದೆ ರಾಹುಲ್ ಶರ್ಮಾ ಮಗಳಿಗೆ ಗುಡ್ ನೈಟ್ ಹೇಳಿ ಹೋದ 10 ನಿಮಿಷಗಳ ನಂತರ ಕಟ್ಟಡದಿಂದ ಬಿದ್ದು ಅಗ್ರಿಮಾ ಮೃತಪಟ್ಟಿದ್ದಾಳೆ. ಅಗ್ರಿಮಾ ತನ್ನ ಪೋಷಕರೊಂದಿಗೆ ಇಂದಿರಾಪುರಂನ ಶಿಪ್ರಾ ಕೃಷ್ಣ ವಿಸ್ಟಾ ಅಪಾರ್ಟ್‍ಮೆಂಟ್‍ನ 6ನೇ ಮಹಡಿಯಲ್ಲಿ ವಾಸಿಸುತ್ತಿದ್ದಳು.
ನಡೆದಿದ್ದೇನು?: ಮಂಗಳವಾರ ರಾತ್ರಿ ತಂದೆ ಮಗಳಿಗೆ ಗುಡ್ ನೈಟ್ ಹೇಳಿ ಹೋಗಿದ್ದಾರೆ. ಆದರೆ 10 ನಿಮಿಷಗಳ ನಂತರ ನಿಮ್ಮ ಮಗಳು ಬಾಲ್ಕನಿಯಿಂದ ಬಿದ್ದಿದ್ದಾಳೆ ಎಂದು ಅವರಿಗೆ ಕಟ್ಟಡದ ಭದ್ರತಾ ಸಿಬ್ಬಂದಿಯಿಂದ ಕರೆ ಬಂದಿದೆ. ತಕ್ಷಣ ಶರ್ಮಾ ಹೋಗಿ ನೋಡಿದಾಗ ಮಗಳು ಬಾಲ್ಕನಿಯಿಂದ ಕೆಳಗೆ ಬಿದ್ದು ರಕ್ತದ ಮಡುವಿನಲ್ಲಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ.
6ನೇ ಮಹಡಿಯಿಂದ ಬಿದ್ದಿದ್ದರಿಂದ ಅಗ್ರಿಮಾಳ ಅಂಗಗಳಿಗೆ ಗಂಭೀರವಾಗಿ ಪೆಟ್ಟಾಗಿತ್ತು. ಆಕೆಯ ತಲೆ, ಭುಜ ಹಾಗೂ ಪಕ್ಕೆಲುಬುಗಳ ಮೂಳೆ ಮುರಿದಿತ್ತು. ಶಸ್ತ್ರಚಿಕಿತ್ಸೆಗಾಗಿ 34 ಯೂನಿಟ್ ರಕ್ತವನ್ನು ನೀಡಲಾಗಿತ್ತು. ಆದರೂ ಅಗ್ರಿಮಾ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾಳೆ.
ಆಗ್ರಿಮಾ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಓದಲೆಂದು ತಡರಾತ್ರಿವರೆಗೂ ಎಚ್ಚರವಾಗಿರುತ್ತಿದ್ದಳು. ಆದ್ರೆ ಬಾಲ್ಕನಿಯ ಎತ್ತರ ಹಾಗೂ ಬಾಲಕಿ ಬಿದ್ದ ಸ್ಥಳವನ್ನ ನೋಡಿದ್ರೆ ಆಕೆ ಆಕಸ್ಮಿಕವಾಗಿ ಬಿದ್ದಿರುವುದಲ್ಲ ಎಂದು ಕಾಣಿಸುತ್ತದೆ. ಅಗ್ರಿಮಾ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ.
ಅಗ್ರಿಮಾ ಓದುವುದರಲ್ಲಿ ತರಗತಿಯಲ್ಲಿ ಮುಂದಿದ್ದಳು. ಅಷ್ಟೇ ಅಲ್ಲದೇ ಚೆಸ್ ಚಾಂಪಿಯನ್ ಕೂಡ ಆಗಿದ್ದಳು. ಕಟ್ಟಡದಿಂದ ಬಿದ್ದ ನಂತರ ವೈಶಾಲಿಯ ಮ್ಯಾಕ್ಸ್ ಆಸ್ಪತ್ರೆಗೆ ಆಕೆಯನ್ನ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾಳೆ. ಇದನ್ನು ಓದಿ: ಆರುಷಿ ಕೊಲೆ ಮಾಡಿದವರು ಯಾರು: ದೇಶಾದ್ಯಂತ ಕೇಳೋ ಪ್ರಶ್ನೆಗೆ ಉತ್ತರ ಸಿಗುತ್ತಾ?