ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಆಶೀರ್ವಾದ ಸಿಕ್ಕಿಲ್ಲ. ಆದ್ದರಿಂದ ಬನಶಂಕರಿ ದೇವಿಯ ಆಶೀರ್ವಾದ ಪಡೆಯಲು ಬರುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಲೇವಡಿ ಮಾಡಿದರು.
ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಬನಶಂಕರಿ ಆಶೀರ್ವಾದ ಪಡೆಯೋಕೆ ಬರುತ್ತಿದ್ದಾರೆ. ಆದರೆ ಬನಶಂಕರಿ ದೇವಿ ಆಶೀರ್ವಾದ ಕೂಡ ಸಿದ್ದರಾಮಯ್ಯಗೆ ದಕ್ಕೋದಿಲ್ಲ. ಬಾದಾಮಿ ಮತ್ತು ಚಾಮುಂಡೇಶ್ವರಿ ಎರಡು ಕ್ಷೇತ್ರದಲ್ಲಿ ಸಿಎಂಗೆ ಸೋಲು ಖಚಿತ ಎಂದರು.
Advertisement
Advertisement
ಬಿಎಸ್ ವೈ ಮತ್ತು ಸಿದ್ದರಾಮಯ್ಯ ಮುಂದಿನ ಸಿಎಂ ನಾನೇ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ನಾನು ಸಿಎಂ ಆಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ನಿಮ್ಮ ಸಮಸ್ಯೆಗೆ ಸ್ಪಂದಿಸಲು ನನ್ನ ಸಿಎಂ ಮಾಡಿ ಜನರ ಮುಂದೆ ಮನವಿ ಮಾಡಿದ್ದೇನೆ. ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದೇನೆ ಎಂದರು.
Advertisement
ನಮ್ಮ ಅಭ್ಯರ್ಥಿ ಹನುಮಂತ ಮಾವಿನಮರದ ಜನಸಾಮಾನ್ಯರ ಮನಸ್ಸಿನಲ್ಲಿದ್ದಾರೆ ಎಂದ ಹೆಚ್ ಡಿ ಕೆ, ಕಾಂಗ್ರೆಸ್, ಬಿಜೆಪಿಯಲ್ಲಿ ಯಾರೆ ಬಂದರೂ ನಮ್ಮ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಬಾದಾಮಿ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ ಕೆಂಪಯ್ಯ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಚ್‍ಡಿಕೆ, ನಮ್ಮ ಅಭ್ಯರ್ಥಿ ಕೆಂಪಯ್ಯ ಜೊತೆ ಸಂಪರ್ಕ ಹೊಂದಿಲ್ಲ. ಹಾಗೇನಾದರೂ ಸಂಪರ್ಕ ಹೊಂದಿದ್ದೆ ಆದರೆ ಅದು ಸಿದ್ದರಾಮಯ್ಯನವರನ್ನು ಮುಗಿಸೋದಕ್ಕೆ ಕೆಂಪಯ್ಯ ಮಾಡಿದ ಪ್ಲಾನ್ ಆಗಿರಬಹುದು. ಕೆಂಪಯ್ಯ ಬಹಳ ಜನರ ಕಥೆ ಮುಗಿಸಿದ್ದಾರೆ ಎಂದು ಖಾರವಾಗಿ ನುಡಿದ್ರು.