ಹಾಸನ: ಗುಬ್ಬಿ ಶ್ರೀನಿವಾಸ್ ಅವರನ್ನು ಮತ್ತೆ ಜೆಡಿಎಸ್‌ಗೆ (JDS) ಆಹ್ವಾನ ಮಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (C.M.Ibrahim) ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (H.D.Kumaraswamy) ಗರಂ ಆಗಿದ್ದಾರೆ.
ಹಾಸನ (Hassan) ಜಿಲ್ಲೆ ಚನ್ನರಾಯಪಟ್ಟಣ (Channarayapatna) ತಾಲೂಕಿನ ವಡ್ಡರಹಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಗುಬ್ಬಿ (Gubbi) ಕ್ಷೇತ್ರದಲ್ಲಿ ಕುಮಾರಸ್ವಾಮಿನೇ ಅಲ್ಟಿಮೇಟ್ ಎಂದು ಯಾರಾದರೂ ಹೇಳಿದ್ದರೆ ಬಾಯಿತಪ್ಪಿ ಹೇಳಿರಬೇಕು. ನನ್ನ ಅರಿವಿಲ್ಲದೆ ಯಾರಿಗೂ ನಾನು ಪವರ್ ಕೊಡಲಿಲ್ಲ. ಈಗಾಗಲೇ ನಮ್ಮ ಅಭ್ಯರ್ಥಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ನಾಗರಾಜ್ ಅಭ್ಯರ್ಥಿ ಎಂದು ಘೋಷಣೆ ಆಗಿದೆ. ಇಲ್ಲಿ ಯಾರೂ ಇಂತಹ ಹೇಳಿಕೆಗಳನ್ನು ಕೊಟ್ಟು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಬಾರದು. ಈ ತರಹದ ಹೇಳಿಕೆ ಕೊಟ್ಟಿದ್ದರೆ ಅದು ತಪ್ಪು. ಈ ರೀತಿಯ ಹುಡುಗಾಟದ ಹೇಳಿಕೆ ಕೊಡುವುದಲ್ಲ ಎಂದು ವಾರ್ನಿಂಗ್ ಮಾಡಿದರು. ಇದನ್ನೂ ಓದಿ: Jaggesh@60- ಮೋದಿ ಭೇಟಿ ಮಾಡಿ, ನನ್ನ ಬದುಕಿನ ಶ್ರೇಷ್ಠ ದಿನ ಎಂದ ನಟ ಜಗ್ಗೇಶ್
Advertisement
Advertisement
ಆ ವ್ಯಕ್ತಿ ಪಕ್ಷದಿಂದ ದೂರ ಹೋಗಿ 2 ವರ್ಷಗಳಾಗಿವೆ. ಆ ವ್ಯಕ್ತಿಯನ್ನು ಬಾರಪ್ಪ ಎಂದು ಕರೆಯಲು ನಾವೇನು ಇಲ್ಲಿ ಅರ್ಜಿ ಹಾಕಿದ್ದೇವಾ? ಇಲ್ಲಿ ಯಾವುದೇ ಗೊಂದಲವಿಲ್ಲ. ಗುಬ್ಬಿದಾಗಲಿ, ಮತ್ತೊಂದಾಗಲಿ ತೀರ್ಮಾನ ಆಗಿಹೋಗಿದೆ. ನಮ್ಮ ನಾಯಕರಿಗೆ ಯಾರೂ ಗೊಂದಲ ಮಾಡಬಾರದು. ಈಗಾಗಲೇ ಒಂದು ಬಾರಿ ಮೈಸೂರು (Mysuru) ಜಿಲ್ಲೆ ನಾಯಕರು, ಮಂಡ್ಯ (Mandya) ಜಿಲ್ಲೆಗೆ ಹೋಗಿ ಅದೊಂದು ನಗೆಪಾಟಲಾಯಿತು. ಆ ರೀತಿಯಾದ ನಗೆಪಾಟಲು ಯಾಕೆ ಮಾಡಿಕೊಳ್ಳಬೇಕು? ನಮ್ಮಲ್ಲಿ ಸಮರ್ಥ ಅಭ್ಯರ್ಥಿಗಳು ಇದ್ದಾರೆ ಹಾಗೂ ಕೆಲಸ ಮಾಡುತ್ತಿದ್ದಾರೆ. ಎಲ್ಲಿಯೂ ಅಷ್ಟೇ, ಯಾವುದೇ ಕ್ಷೇತ್ರದಲ್ಲಿಯೂ ಗೊಂದಲಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದರು. ಇದನ್ನೂ ಓದಿ: ಬಡವರಿಗೆ ಮನೆ, ಅನಾಥಾಶ್ರಮಗಳಿಗೆ ಮಧ್ಯಾಹ್ನದ ಭೋಜನ – ಇದು ದಿನಗೂಲಿ ನೌಕರರಿಂದಲೇ ರಚನೆಯಾದ ಟ್ರಸ್ಟ್
Advertisement