ಬೆಂಗಳೂರು: ಸಮ್ಮಿಶ್ರ ಸರ್ಕಾರ ಬಸ್ ಇದ್ದ ಹಾಗೇ. ಸಿದ್ದರಾಮಯ್ಯ ಕಂಡೆಕ್ಟರ್, ಕುಮಾರಸ್ವಾಮಿ ಡ್ರೈವರ್ ಎಂದು ವಿಧಾನ ಪರಿಷತ್ ನಲ್ಲಿ ಆಯನೂರು ಮಂಜುನಾಥ್ ಲೇವಡಿ ಮಾಡಿದ್ದಾರೆ.
ರಾಜ್ಯಪಾಲ ಭಾಷಣದ ಮೇಲೆ ಚರ್ಚೆ ಮಾತನಾಡಿದ ಅವರು, ಮಂಜುನಾಥ್ ಅವರು, ಸಮ್ಮಿಶ್ರ ಸರ್ಕಾರ ಬಸ್ ಇದ್ದ ಹಾಗೇ. ಸಿದ್ದರಾಮಯ್ಯ ಕಂಡೆಕ್ಟರ್, ಕುಮಾರಸ್ವಾಮಿ ಡ್ರೈವರ್. ಸಿದ್ದರಾಮಯ್ಯ ಓಕೆ ಅಂದ ಮೇಲೆ ಸರ್ಕಾರ ರಚನೆ ಆಯ್ತು ಎಂದು ಕುಟುಕಿದರು.
Advertisement
ಇದೇ ವೇಳೆ ಮಂಜುನಾಥ್ ಅವರ ಮಾತಿಗೆ ತಿರುಗೇಟು ಕೊಟ್ಟ ಧರ್ಮಸೇನಾ, ಬಸ್ ಅಲ್ಲ ನಮ್ಮದು ಟ್ರೇನ್ ಎಂದರು. ಅದಕ್ಕೆ ಮತ್ತೊಮ್ಮೆ ನಗುತ್ತಲೇ ಟಾಂಗ್ ಕೊಟ್ಟ ಮಂಜುನಾಥ್ ಅವರು ಟ್ರೇನ್ ಡಬಲ್ ಎಂಜಿನ್ ಹುಷಾರು. ಒಂದು ಎಂಜಿನ್ ಯಾವಾಗ ಬೇಕಾದರು ನಮ್ಮ ಕಡೆ ಬರಬಹುದು. ಎರಡು ಮೂರು ಬಾರಿ ಮೋದಿ ಭೇಟಿ ಆಗಿದ್ದಾರೆ ಹುಷಾರ್ ಎಂದರು.
Advertisement
Advertisement
ಬಳಿಕ ಸಾಲಮನ್ನಾ ವಿಚಾರವಾಗಿ ಸಿಎಂ ವಿರುದ್ಧ ಕಿಡಿಕಾರಿದ ಮಂಜುನಾಥ್ ಅವರು, ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ವಿಚಾರವಾಗಿ ನಾನು ಕಮೀಷನ್ ಪಡೆಯೋದಿಲ್ಲ ಅಂತ ಹೇಳಿದ್ದಾರೆ. ಹಾಗಾದ್ರೆ ಹಿಂದಿನ ಸರ್ಕಾರದಲ್ಲಿ ಕಮೀಷನ್ ಪಡೆದವರು ಯಾರು ಎಂದು ಸಿಎಂ ಹೇಳಬೇಕು. ಪ್ರಾಮಾಣಿಕ ಮುಖ್ಯಮಂತ್ರಿ ಆದರೆ ಯಾರು ಕಮೀಷನ್ ಪಡೆದಿದ್ದಾರೆ ಹೇಳಬೇಕು. ಕುಮಾರಸ್ವಾಮಿ ರಾಜ್ಯದ ಜನರ ಪರವಾಗಿ ಕೆಲಸ ಮಾಡಲು ಆಗಿಲ್ಲ. ಏಕೆಂದರೆ ರಾಹುಲ್ ಗಾಂಧಿಯಿಂದ ಸಿಎಂ ಆಗಿದ್ದೇನೆ ಎಂದು ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಗೆ ಮಾತ್ರ ಸಿಎಂ ಒಳ್ಳೆ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದರು.
Advertisement
ಯುವಕರ ಮೇಲೆ ಸರ್ಕಾರಕ್ಕೆ ಹೆಚ್ಚು ಆಸಕ್ತಿ ಇದ್ದರೆ ಶೈಕ್ಷಣಿಕ ಸಾಲಮನ್ನಾ ಮಾಡಿ. ಬಡ ಮಕ್ಕಳು ಓದೋದಕ್ಕೆ ಸಾಲ ಮಾಡಿದ್ದಾರೆ. ಬ್ಯಾಂಕ್ ಗಳಿಂದ ನೋಟಿಸ್ ಬರುತ್ತಿದೆ. ಸರ್ಕಾರಕ್ಕೆ ಯುವಕರಿಗೆ ಅನುಕೂಲ ಮಾಡಬೇಕಾದರೆ ಶೈಕ್ಷಣಿಕ ಸಾಲಮನ್ನಾ ಮಾಡಿ. ಇಲ್ಲವೇ ಬಡ್ಡಿಯನ್ನು ಮನ್ನ ಮಾಡಿ ಎಂದು ಆಗ್ರಹಿಸಿದರು.