ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಲೋಕಸಭಾ ಅಖಾಡದಲ್ಲಿ ಗೆಲುವು ಸಾಧಿಸಲು ಮೈತ್ರಿ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಇಂದಿನಿಂದ ಅಖಾಡಕ್ಕೆ ಧುಮುಕುತ್ತಿದ್ದಾರೆ. ಇಂದಿನಿಂದ ಮಂಡ್ಯದಲ್ಲಿ ಪ್ರಚಾರ ಸಭೆಗಳನ್ನು ಮಾಡುವ ಮೂಲಕ ಮತ ಬೇಟೆಗೆ ಹೆಚ್‌ಡಿಕೆ ಮುಂದಾಗಿದ್ದಾರೆ.
ಇಷ್ಟು ದಿನ ರಣರಣ ಬಿಸಿಲಿನ ನಡುವೆಯೂ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಉರುಫ್ ಸ್ಟಾರ್ ಚಂದ್ರು (Star Chandru) ಸಚಿವರು ಹಾಗೂ ಶಾಸಕರ ಜೊತೆಗೂಡಿ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಳ್ಳಿಗಳಲ್ಲಿ ಭರ್ಜರಿ ಕ್ಯಾಂಪೇನ್ ಮಾಡಿದ್ದರು. ಈ ನಡುವೆ ಇಷ್ಟು ದಿನಗಳ ಕಾಲ ಸೈಲೆಂಟ್ ಆಗಿಯೇ ಇದ್ದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ ಇಂದಿನಿಂದ ಮಂಡ್ಯ ಅಖಾಡದಲ್ಲಿ ಮತ ಶಿಕಾರಿಗೆ ಧುಮುಕಿದ್ದಾರೆ. ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಬಿಜೆಪಿ-ಜೆಡಿಎಸ್ ನಾಯಕರೊಂದಿಗೆ ಸಮಾವೇಶ ನಡೆಸಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಸೇರ್ಪಡೆ ಆಗ್ತಾರಾ ಕರಡಿ ಸಂಗಣ್ಣ?- ಲಕ್ಷ್ಮಣ ಸವದಿ ಭೇಟಿ ಬೆನ್ನಲ್ಲೇ ಕುತೂಹಲ
Advertisement
Advertisement
ಮಳವಳ್ಳಿಯ ಕನಕ ಕ್ರೀಡಾಂಗಣದಲ್ಲಿ ನಡೆಯುವ ಮೈತ್ರಿ ಚುನಾವಣಾ ಸಮಾವೇಶದಲ್ಲಿ ಒಕ್ಕಲಿಗ ಮತಗಳನ್ನು ಕುಮಾರಸ್ವಾಮಿ ಸೆಳೆದರೆ, ಲಿಂಗಾಯತ ಮತಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕುರುಬ ಸಮುದಾಯದ ಮತಗಳನ್ನು ಹೆಚ್.ವಿಶ್ವನಾಥ್ ಸೆಳೆಯಲಿದ್ದಾರೆ. ಇಲ್ಲದೇ ದಲಿತ ಸಮುದಾಯ ಮತಗಳಿಗಾಗಿ ಮಾಜಿ ಶಾಸಕ ಅನ್ನದಾನಿ ಸೇರಿದಂತೆ ಇತರ ದಲಿತ ಮುಖಂಡರು ಕುಮಾರಸ್ವಾಮಿ ಪರ ಮತಯಾಚನೆ ಮಾಡಲಿದ್ದಾರೆ. ಇದನ್ನೂ ಓದಿ: ಎಲ್ಲರೂ ಪಶ್ಚಾತ್ತಾಪ ಪಡುತ್ತಾರೆ- ಚುನಾವಣಾ ಬಾಂಡ್ ಸಮರ್ಥಿಸಿಕೊಂಡ ಪ್ರಧಾನಿ ಮೋದಿ
Advertisement
Advertisement
ಇಷ್ಟು ದಿನ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಬಿರುಸಿನ ಪ್ರಚಾರ ಮಾಡುತ್ತಿದ್ದರು. ಇದೀಗ ಸಕ್ಕರೆ ನಾಡಿಗೆ ಕುಮಾರಸ್ವಾಮಿ ಎಂಟ್ರಿ ಕೊಟ್ಟಿದ್ದು, ಅಬ್ಬರದ ಸಮಾವೇಶಗಳನ್ನು ನಡೆಸಲಿದ್ದಾರೆ. ಮತದಾರ ಪ್ರಭು ಯಾರ ಕಡೆ ಒಲವು ತೋರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: Lok sabha Elections 2024- ಅಸ್ಸಾಂನ ಈ ಕುಟುಂಬದಲ್ಲಿದ್ದಾರೆ 350 ಮಂದಿ ಮತದಾರರು!