Connect with us

ಕುಮಾರಸ್ವಾಮಿ ದುರ್ಯೋಧನ ಇದ್ದಂತೆ, ರಣರಂಗದಲ್ಲೇ ತೊಡೆ ತಟ್ಟುತ್ತೇವೆ: ತೇಜಸ್ವಿನಿ ರಮೇಶ್

ಕುಮಾರಸ್ವಾಮಿ ದುರ್ಯೋಧನ ಇದ್ದಂತೆ, ರಣರಂಗದಲ್ಲೇ ತೊಡೆ ತಟ್ಟುತ್ತೇವೆ: ತೇಜಸ್ವಿನಿ ರಮೇಶ್

ರಾಮನಗರ: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿಯವರನ್ನ ದುರ್ಯೋಧನ ಎಂದು ಸಂಭೋಧಿಸಿದ್ದಲ್ಲದೇ, ಅವರಿಗೆ ಮಾತಿನಲ್ಲಿ ಉತ್ತರವನ್ನ ನೀಡುವುದಿಲ್ಲ ರಣರಂಗದಲ್ಲೇ ದುರ್ಯೋಧನನಿಗೆ ತೊಡೆ ತಟ್ಟುತ್ತೇವೆ ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ತಿರುಗೇಟು ನೀಡಿದ್ದಾರೆ.

ಇಂದು ರಾಮನಗರದ ಪರಿವೀಕ್ಷಣ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ತನ್ನನ್ನು ಕ್ರ್ಯಾಕ್ ಎಂದು ಕರೆದಿದ್ದಾರೆ. ಅದಕ್ಕೆ ನಾನು ಪರ್ವರ್ಟ್ ಎಂದು ಹೇಳಬೇಕಾಗುತ್ತೆ, ಅದನ್ನ ಹೇಳುವುದಕ್ಕೆ ಇಷ್ಟವಿಲ್ಲ. ಜನ ಅದನ್ನ ಅರ್ಥ ಕೂಡಾ ಮಾಡಿಕೊಳ್ಳಲ್ಲ. ಮಾಜಿ ಸಿಎಂ ಎಂಬ ಅಹಂಕಾರ ಬಿಟ್ಟು ಸರಳ ಸಜ್ಜನ ರಾಜಕಾರಣಿಯಂತೆ ಇರಲಿ. ಅವರ ಮಾತುಗಳೇ ಅವರ ಸಂಸ್ಕøತಿಯನ್ನ ತೋರಿಸುತ್ತೆ ಅಂದ್ರು.

ನಾನು ಇಬ್ಬರನ್ನ ಕೌರವರು ಅಂತಾ ಹೇಳಿದ್ದೆ, ಅದರಲ್ಲಿ ತಪ್ಪೇನಿದೆ? ಹೊಂದಾಣಿಕೆ ರಾಜಕಾರಣ ಮಾಡ್ತಾ ಇರೋದಕ್ಕೆ ಕೌರವರು ಅಂತಾ ಹೇಳಿದ್ದು ಅಂದ್ರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಕೌರವ ಪಾಳಯವಿದ್ದಂತೆ. ಹೆಚ್‍ಡಿಕೆ ಹಾಗೂ ಡಿಕೆ ಶಿವಕುಮಾರ್ ದುರ್ಯೋಧನ- ದುಶ್ಯಾಸನರಿದ್ದಂತೆ ಎಂದು ಕಳೆದ ವಾರ ತೇಜಸ್ವಿನಿ ರಮೇಶ್ ಹೇಳಿಕೆ ನೀಡಿದ್ದರು.

Advertisement
Advertisement