ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆದ ಮಳೆ ಅನಾಹುತಗಳ ವಿಚಾರದಲ್ಲಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವ ರಾಜಕೀಯ ನಾಯಕರ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ವಿಚಾರ ಪ್ರಕಟಿಸಿರುವ ಅವರು, ಈ ಅನಾಹುತಗಳಲ್ಲಿ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪಾಲಿದೆ. ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಕರೆ ನೀಡಿದ್ದಾರೆ. ಪಾಪ ಪ್ರಜ್ಞೆ ಇದ್ದರೆ ಹಾಗೂ ನಿಮ್ಮ ಕುಟುಂಬದಲ್ಲಿ ಈ ರೀತಿ ಘಟನೆ ನಡೆದಿದ್ದರೆ, ಅದರ ನೋವು ಏನು ಅನ್ನುವುದನ್ನು ಯೋಚನೆ ಮಾಡಿ. ಎಲ್ಲಿ ತಪ್ಪು ಮಾಡುತ್ತಿದ್ದೀರಿ ಅದನ್ನು ಹೇಗೆ ಸರಿಪಡಿಸುಕೊಳ್ಳುತ್ತೀರಿ ಅದರ ಬಗ್ಗೆ ಚಿಂತನೆ ಮಾಡುವುದು ಸೂಕ್ತ ಎಂದು ಕೂಡಾ ಅವರು ಫೇಸ್ ಬುಕ್ ಪೋಸ್ಟ್ ನಲ್ಲಿ ಅವರು ಕಿಡಿಕಾರಿದ್ದಾರೆ. ಇದೇ ವಿಚಾರವನ್ನು ಎಚ್.ಡಿ.ಕೆ ಅವರು ತಮ್ಮ ಟ್ವಿಟ್ಟರ್ ಖಾತೆಯ ಮೂಲಕವೂ ಹಂಚಿಕೊಂಡಿದ್ದಾರೆ.
Advertisement
Advertisement
ಎಚ್.ಡಿ.ಕೆ ಫೇಸ್ ಬುಕ್ ಪೋಸ್ಟ್ ಸಂಪೂರ್ಣ ರೂಪ ಇಲ್ಲಿದೆ ಓದಿ..
Advertisement
ಸತತ ಮಳೆಯಿಂದ ಬೆಂಗಳೂರಿನ ನಾಗರಿಕರಿಗೆ ಆಗುತ್ತಿರುವ ಅನಾಹುತಗಳಿಗೆ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪಾಲು ಇದೆ. ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
Advertisement
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಹಣದ ದಾಹದಲ್ಲಿ ಜನಸಾಮಾನ್ಯರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಪಾಪ ಪ್ರಜ್ಞೆ ಇದ್ದರೆ ಹಾಗೂ ನಿಮ್ಮ ಕುಟುಂಬದಲ್ಲಿ ಈ ರೀತಿ ಘಟನೆ ನಡೆದಿದ್ದರೆ, ಅದರ ನೋವು ಏನು ಅನ್ನುವುದನ್ನು ಯೋಚನೆ ಮಾಡಲಿ,ಎಲ್ಲಿ ತಪ್ಪು ಮಾಡುತ್ತಿದ್ದೀರಿ, ಅದನ್ನು ಹೇಗೆ ಸರಿಪಡಿಸಿಕೊಳ್ಳುತ್ತೀರಿ ಅದರ ಬಗ್ಗೆ ಚಿಂತನೆ ಮಾಡುವುದು ಸೂಕ್ತ. ಬೆಂಗಳೂರಿನ ಅಭಿವೃದ್ಧಿಗೆ ಸಹಸ್ರಾರು ಕೋಟಿ ವೆಚ್ಚ ಮಾಡಲಾಗಿದೆ, ಆದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಲೋಪಕ್ಕೆ ಕಾರಣರಾದ ಒಬ್ಬ ಅಧಿಕಾರಿಯ ಮೇಲೆಯೂ ಕ್ರಮ ಕೈಗೊಂಡಿಲ್ಲವೇಕೆ.??
ಮುಖ್ಯಮಂತ್ರಿಗಳು ನನ್ನ ಆರೋಗ್ಯದ ವಿಚಾರಿಸಲು ತೋರಿದ ಔದಾರ್ಯವನ್ನು ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಜನತೆಯ ಸಮಸ್ಯೆ ಪರಿಹರಿಸುವಲ್ಲಿಯೂ ತೋರಬೇಕೆಂಬುದು ನನ್ನ ವಿನಮ್ರ ಮನವಿ.
ಸತತ ಮಳೆಯಿಂದ ಬೆಂಗಳೂರಿನ ನಾಗರಿಕರಿಗೆ ಆಗುತ್ತಿರುವ ಅನಾಹುತಗಳಿಗೆ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ… https://t.co/uxYJerIPTE
— H D Kumaraswamy (@hd_kumaraswamy) October 14, 2017