ಬೆಂಗಳೂರು: ದೇವೇಗೌಡರು ಅಳಿಯ ಡಾ.ಮಂಜುನಾಥ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸುತ್ತಿರುವುದು ಜೆಡಿಎಸ್‍ಗೆ ಮೊದಲ ಆತ್ಮಹತ್ಯೆ ಯತ್ನದಂತಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಮೈತ್ರಿ ಬಗ್ಗೆ ಕುಮಾರಸ್ವಾಮಿ (HD Kumaraswamy) ಅಸಮಾಧಾನದ ಕುರಿತು ಮಾತನಾಡಿದ ಅವರು, ಮಾಜಿ ಪ್ರಧಾನಿ ಜೆಚ್.ಡಿ ದೇವೇಗೌಡರ ಅಳಿಯ ಡಾ. ಸಿ.ಎನ್ ಮಂಜುನಾಥ್ ಅವರು ಈ ಬಾರಿಯ ಲೋಕಸಭಾ ಚುನಾವಣೆಗೆ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ನಮಗೆ ಮೊದಲಿಂದಲೇ ಇದು ಗೊತ್ತಿರುವ ವಿಚಾರ. ಯಾವಾಗ ದೇವೆಗೌಡರು (HD Devegowda) ಯಾಕೆ ಅವರ ಅಳಿಯನನ್ನ ಬಿಜೆಪಿ ಚಿಹ್ನೆಯಿಂದ ನಿಲ್ಲಿಸಿದರೋ ಅದು ಫಸ್ಟ್ ಸುಸೈಡ್ ಅಟೆಂಪ್ಟ್ ಆಫ್ ಜೆಡಿಎಸ್ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಕೀಯವಾಗಿ ಡಿಕೆಶಿ ನನಗೆ ವಿಷ ಹಾಕಿದ್ದಾರೆ: ಹೆಚ್‍ಡಿಕೆ ಕಿಡಿ
- Advertisement
ನಾನು ನಿರೀಕ್ಷಿಸರಲಿಲ್ಲ. ಅಲಯನ್ಸ್ ಅಂದರೆ ಎಲ್ಲರೂ ವೋಟ್ ಹಾಕಬೇಕು. ಅವರ ಪಕ್ಷಕ್ಕೆ ಮುಜುಗರ ಉಂಟಾಗಿದೆ. ಅವರದ್ದೇ ಆದ ಸ್ಟ್ರೆಂತ್ ಇತ್ತು. ಕೆಲವು ಕಡೆ ಒಂದು ಎರಡು ಶಾಸಕರಿದ್ದರು, ಸಂಸದರಿದ್ದರು. ಬಿಜೆಪಿ ಸ್ಟೈಲೇ ಅದು ಇದೊಂದೇ ರಾಜ್ಯ ಅಲ್ಲ, ಬೇರೆ ರಾಜ್ಯದಲ್ಲೂ ಇದೇ ರೀತಿ ನಡೆದುಕೊಂಡು ಬರುತ್ತಿದೆ. ಇದು ಅವರವರ ಪಾರ್ಟಿ ವಿಚಾರ ಅದರ ಬಗ್ಗೆ ನಾನು ಹೆಚ್ಚು ಕಾಮೆಂಟ್ ಮಾಡುವುದಕ್ಕೆ ಹೋಗಲ್ಲ ಎಂದರು.
- Advertisement
ಡಾ.ಮಂಜುನಾಥ್ (Dr C.N Manjunath) ಬಿಜೆಪಿಯಿಂದ ಸ್ಪರ್ಧೆ ಕಾರಣಕ್ಕೆ ಜೆಡಿಎಸ್ ಪಕ್ಷವೆ ಅಸ್ತಿತ್ವ ಕಳೆದುಕೊಳ್ಳುವಂತಾಗಿದೆ ಎಂದು ಹೇಳುವ ಮೂಲಕ ಡಾ.ಮಂಜುನಾಥ್ ಬದಲು ಡಿಕೆಶಿ ನೇರವಾಗಿ ದೇವೇಗೌಡರು ಹಾಗೂ ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದರು. ಒಟ್ಟಾರೆ ಡಾ.ಮಂಜುನಾಥ್ ಸ್ಪರ್ಧೆ ಕಾರಣಕ್ಕೆ ಮತ್ತೊಮ್ಮೆ ದೇವೇಗೌಡರ ಕುಟುಂಬದ ವಿರುದ್ಧ ನೇರಾ ನೇರ ಯುದ್ದ ಸಾರಿದ್ದಾರೆ.