ಬೆಂಗಳೂರು: ಯಾವುದೇ ಕಾರಣಕ್ಕೂ ನಾನು ರಾಜ್ಯಸಭೆ ಸದಸ್ಯನಾಗಿ ರಾಜ್ಯಸಭೆ ಪ್ರವೇಶ ಮಾಡಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.
ಜೂನ್ ನಲ್ಲಿ ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳು ಖಾಲಿಯಾಗಲಿದ್ದು, ಅದರಲ್ಲಿ ಒಂದು ಸ್ಥಾನಕ್ಕೆ ಕಾಂಗ್ರೆಸ್ ನೆರವಿನೊಂದಿಗೆ ದೇವೇಗೌಡರು ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿತ್ತು. ಆದರೆ ಇಂದು ಜೆಪಿ ಭವನದಲ್ಲಿ ಪಕ್ಷದ ಮುಖಂಡರೊಂದಿಗೆ ಮಾತನಾಡಿ ಯಾವ ಕಾರಣಕ್ಕೂ ರಾಜ್ಯಸಭೆ ಪ್ರವೇಶ ಮಾಡಲ್ಲ ಎಂದಿದ್ದಾರೆ. ನಾನು ಬಡವರ ಪರ ಹೋರಾಡಲು ರಾಜ್ಯಸಭೆ ಸದಸ್ಯರಾಗಬೇಕಿಲ್ಲ. ಎಲ್ಲಿದ್ದರೂ ನಾನು ರೈತರ ಪರ ಹೋರಾಟ ಮಾಡುತ್ತೇನೆ. ನನ್ನ ಜೀವನವೇ ಹೋರಾಟ, ನನಗೆ ಅಧಿಕಾರದ ದಾಹ ಇಲ್ಲ ಎಂದರು.
Advertisement
ನಾನು ಫಿಟ್ & ಫೈನ್, ಮತ್ತೆ ಅಖಾಡಕ್ಕೆ ಇಳಿಯುತ್ತೇನೆ: ಹೆಚ್‍ಡಿಡಿ ಗುಡುಗುhttps://t.co/SWwpBCM7Oc#Bengaluru #JDS #HDDevegowda
— PublicTV (@publictvnews) January 11, 2020
Advertisement
ರಾಜ್ಯಸಭೆ ಸದಸ್ಯರಾಗುವ ಬಗ್ಗೆ ವದಂತಿ ಹರಡಿದೆ. ಅದರ ಮೇಲೆ ಮಾಧ್ಯಮಗಳು ವಿಶ್ಲೇಷಣೆ ಮಾಡುತ್ತಿವೆ. ದೇವೇಗೌಡರಿಗೆ ಅಧಿಕಾರ ದಾಹ ಇನ್ನೂ ಹೋಗಿಲ್ಲ ಅಂತಾರೆ. ನನ್ನ ಜೀವನದಲ್ಲಿ ನಾನೆಂದೂ ಅಧಿಕಾರಕ್ಕೆ ಅಂಟಿಕೊಂಡು ಕೂತವನಲ್ಲ. ನಾನು ರಾಜ್ಯಸಭೆ ಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement