ಬೆಂಗಳೂರು: ಕಿಡ್ನ್ಯಾಪ್ ಕೇಸ್‌ನಲ್ಲಿ (Kidnap Case) ಪರಪ್ಪನ ಅಗ್ರಹಾರ (Parappana Agrahara) ಜೈಲು ಸೇರಿರುವ ಮಾಜಿ ಸಚಿವ ಹೆಚ್‌ಡಿ ರೇವಣ್ಣ (HD Revanna) ಜೈಲಿನಲ್ಲಿ ಮೊದಲ ದಿನ ಕಳೆದಿದ್ದಾರೆ.
ಬುಧವಾರ ಸಂಜೆ 04:30ರ ಸುಮಾರಿಗೆ ಮುಖ್ಯದ್ವಾರದ ಮೂಲಕ ರೇವಣ್ಣ ಜೈಲಿನ ಒಳಗೆ ಪ್ರವೇಶಿಸಿದ್ದರು. ಜೈಲಿನ ಒಳಗೆ ಹೋದ ರೇವಣ್ಣಗೆ ಮೊದಲು ಪ್ರಾಥಮಿಕ ಆರೋಗ್ಯ ತಪಾಸಣೆ ಮಾಡಲಾಯಿತು. ವಿಚಾರಣಾಧೀನ ಕೈದಿ ನಂಬರ್ 4567 ನಂಬರ್ ನೀಡಿ ವಿಐಪಿ ಸೆಲ್‌ನಲ್ಲಿ ಇರಿಸಲಾಯಿತು. ಇದನ್ನೂ ಓದಿ: ಇಂದು ಜೆಡಿಎಸ್ ಕೋರ್ ಕಮಿಟಿ ಸಭೆ – ಪಕ್ಷದಿಂದ ಪ್ರಜ್ವಲ್ ಉಚ್ಚಾಟನೆ ಬಗ್ಗೆ ಚರ್ಚೆ ಸಾಧ್ಯತೆ
ರಾತ್ರಿ ಊಟಕ್ಕೆ ಮುದ್ದೆ, ಚಪಾತಿ, ಅನ್ನ ಮತ್ತು ಸಾಂಬರ್ ನೀಡಲಾಯಿತು. ಆದರೆ ರೇವಣ್ಣ ಮುದ್ದೆ ಮತ್ತು ಅನ್ನ ಸೇವಿಸಿದ್ದಾರೆ ಎನ್ನಲಾಗಿದೆ. ವಿಐಪಿ ಸೆಲ್‌ನಲ್ಲಿ ಓರ್ವ ಸಿಬ್ಬಂದಿ ಭದ್ರತೆ ಜೊತೆಗೆ ಇರಿಸಲಾಗಿದೆ. ಜೈಲು ಮೊದಲ ದಿನವಾಗಿದ್ದರಿಂದ ಬಹಳ ಸೈಲೆಂಟ್ ಆಗಿದ್ದ ರೇವಣ್ಣ ತಡರಾತ್ರಿವರೆಗೂ ಕೂತಿದ್ದು ನಂತರ ನಿದ್ದೆಗೆ ಜಾರಿದ್ದಾರೆ. ಬೆಳಗಿನ ಜಾವ ಬೇಗನೆ ಎದ್ದು ಎಂದಿನಂತೆ ಜೈಲಿನಲ್ಲೇ ವಾಕ್ ಮಾಡಿ, ಜೈಲಿನಲ್ಲೇ ಇದ್ದ ಪೇಪರ್ ನೋಡಿ, ಪುಳಿಯೊಗರೆ ಸೇವಿಸಿದ್ದಾರೆ. ಇದನ್ನೂ ಓದಿ: ಅನ್ಯಕೋಮಿನ ಯುವತಿಯೊಂದಿಗೆ ಯುವಕ ಲವ್ ಮ್ಯಾರೇಜ್ – ಹಿಂದೂ ಕಾರ್ಯಕರ್ತರು, ಪೊಲೀಸರ ನಡುವೆ ಘರ್ಷಣೆ!