ಹಾಸನ: ಉಪಚುನಾವಣೆಯಲ್ಲಿ ಬಿಜೆಪಿ ಅವರು ಕಾಂಗ್ರೆಸ್‍ನ ಬೈಯಲಿಲ್ಲ, ಕಾಂಗ್ರೆಸ್ಸಿಗೆ ಬಿಜೆಪಿ ಬೈಯಲಿಲ್ಲ. ಆದರೆ ಎರಡು ರಾಷ್ಟ್ರೀಯ ಪಕ್ಷಗಳು, ಜೆಡಿಎಸ್ ಟಾರ್ಗೆಟ್ ಮಾಡಿದರು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕಿಡಿಕಾರಿದರು.
ಸಿಂಧಗಿ, ಹಾನಗಲ್ ಉಪಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋಲಿನ ವಿಚಾರದ ಬಗ್ಗೆ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳು, ಜೆಡಿಎಸ್ ಟಾರ್ಗೆಟ್ ಮಾಡಿದರು. ಈ ಪ್ರಾದೇಶಿಕ ಪಕ್ಷ ಮುಗಿಸಲು ಯಾರಿಂದಲೂ ಆಗಲ್ಲ. ಕಾಂಗ್ರೆಸ್ ಅವರು ಕೆಲವು ಬಟ್ಟಂಗಿಗಳನ್ನು ಇಟ್ಟುಕೊಂಡಿದ್ದರು ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ನನಗೆ ಅರ್ಥ ಮಾಡಿಕೊಳ್ಳಲು, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ: ರಾಮ್ ಚರಣ್ ತೇಜಾ
Advertisement
Advertisement
ಬೆಳಗ್ಗೆ ಎದ್ದರೆ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಬೈಯುತ್ತಿದ್ದರು. ಇದರಿಂದಲೇ ಸಿಂಧಗಿಯಲ್ಲಿ ಕಾಂಗ್ರೆಸ್ ಹೋಯ್ತು. ಅದು ನಮ್ಮ ಪಕ್ಷದವರನ್ನು ಕರೆದುಕೊಂಡು ಹೋಗಿ 31 ಸಾವಿರ ಮತಗಳಿಂದ ಸೋತರು. ಒಂದು ರಾಷ್ಟ್ರೀಯ ಪಕ್ಷ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ನಾಲ್ಕರಲ್ಲಿ ಮೂರು ಕಡೆ ಠೇವಣಿ ಕಳೆದುಕೊಂಡಿದೆ. ಒಂದು ರಾಷ್ಟ್ರೀಯ ಪಕ್ಷವೇ ಠೇವಣಿ ಕಳೆದುಕೊಂಡ ಮೇಲೆ ಜೆಡಿಎಸ್ ಏನಿದೆ? ಎಂದು ಪ್ರಶ್ನೆ ಹೇಳಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 300 ಸರ್ಕಾರಿ ಶಾಲೆಗಳ 600 ಕೊಠಡಿಗಳಿಗೆ ಹಾನಿ
Advertisement
Advertisement
ಸಿಂಧಗಿಯಲ್ಲಿ ಬಿಜೆಪಿ ಗೆಲ್ಲಲು ಕಾಂಗ್ರೆಸ್ ಕಾರಣ. ಬಿಜೆಪಿಯ ಒಳಜಗಳದಿಂದ ಕಾಂಗ್ರೆಸ್ ಗೆದ್ದಿದೆ. ಮತದಾರರು ಪ್ರೀತಿಯಿಂದ ಮತ ಹಾಕಿಲ್ಲ, ಮುಖಂಡರಿಂದಲೂ ಗೆದ್ದಿಲ್ಲ. ಜೆಡಿಎಸ್ ಮುಗಿಸಬೇಕೆಂಬುದೇ ಕಾಂಗ್ರೆಸ್ಸಿನ ಮೊದಲ ಪ್ರಿಯಾರಿಟಿ. ಎರಡು ರಾಷ್ಟ್ರೀಯ ಪಕ್ಷಗಳಿಂದ ದುಡ್ಡು ಚೆಲ್ಲಾಟ ಆಗಿದೆ. ಕಾಂಗ್ರೆಸ್ ಅವರು ಎಲ್ಲ ಕಡೆ ಇದೇ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲ ಧೃತಿಗೆಡಬೇಕಿಲ್ಲ, ಚುನಾವಣೆಯಲ್ಲಿ ಸೋಲು-ಗೆಲುವು ಸರ್ವೆ ಸಾಮಾನ್ಯ ಎಂದು ಕಿಡಿಕಾರಿದರು.