ನಾವು ಯಾವ ಪಾರ್ಟಿಗೆ ಹೋದರೆ ಇವರಿಗೇನು ಹೊಟ್ಟೆ ಉರಿ: ರೇವಣ್ಣ ಕಿಡಿ

Public TV
2 Min Read
HD Revanna

ಹಾಸನ: ನಾವು ಯಾವ ಪಾರ್ಟಿ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಇವರಿಗೇನು ಹೊಟ್ಟೆ ಉರಿ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಕಾಂಗ್ರೆಸ್ (Congress) ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಜಾತ್ಯಾತೀತ ನಿಲುವಿನ ಬಗ್ಗೆ ಏಷ್ಟೆಲ್ಲಾ ಮಾತನಾಡುತ್ತಾರೆ. ಆದರೆ ಮುಸಲ್ಮಾನರಿಗೆ ಅವರು ನೀಡಿರುವ ಕೊಡುಗೆ ಏನು ಎಂದು ಹೇಳಲಿ? ಮುಸಲ್ಮಾನರಿಗೆ ಮೀಸಲಾತಿ, ರಾಜಕೀಯ ಅಧಿಕಾರ, ಎಲ್ಲಾ ರೀತಿಯ ಸವಲತ್ತು ಕೊಟ್ಟಿರುವುದು ಮಾಜಿ ಪ್ರಧಾನಿ ದೇವೇಗೌಡರು. ಅಲ್ಲದೇ ರಾಜ್ಯದಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟವರು ಅವರು. ಈ ರಾಷ್ಟ್ರದಲ್ಲಿ ಪ್ರಧಾನಿ ಹುದ್ದೆಯನ್ನೇ ತೊರೆದು ಬಂದ ಯಾವುದಾದರೂ ನಾಯಕ ಇದ್ದರೆ ಅದು ದೇವೇಗೌಡ್ರು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಐಟಿ ಭರ್ಜರಿ ಬೇಟೆ- 60 ಕಡೆ ದಾಳಿ; 2,500 ಕೋಟಿ ಅಕ್ರಮ ಬಯಲಿಗೆ

ಕಾಂಗ್ರೆಸ್‍ನವರಿಗೆ ಭಯ ಶುರುವಾಗಿದೆ. ಜನಕ್ಕೆ ಎಷ್ಟು ದಿನ ಸುಳ್ಳು ಹೇಳೋದಕ್ಕೆ ಆಗುತ್ತದೆ. ಇವರಿಗೆ ಮುಸಲ್ಮಾನರ ಬಗ್ಗೆ ಮತಾಡೋಕ್ಕೆ ಯಾವ ನೈತಿಕತೆ ಇದೆ? ಈ ದೇಶದಲ್ಲಿ ಕಾಂಗ್ರೆಸ್ ಈ ಸ್ಥಿತಿಗೆ ಬರಲು ಹಲವಾರು ಕಾರಣಗಳಿವೆ. ಗಾಂಧೀಜಿ ಅವರು ಕಟ್ಟಿದ ಕಾಂಗ್ರೆಸ್ ಆಗಿ ಈಗ ಉಳಿದಿಲ್ಲ. ಒಂದಲ್ಲ ಒಂದು ದಿನ ಮುಸಲ್ಮಾನರು ಕಾಂಗ್ರೆಸ್‍ನ್ನು ತಿರಸ್ಕಾರ ಮಾಡುವ ದಿನ ಬರುತ್ತದೆ ಎಂದಿದ್ದಾರೆ.

ಕಾಂಗ್ರೆಸ್‍ನವರು ಬೆಳಗ್ಗೆ ಎದ್ದರೆ ದೇವೇಗೌಡ್ರು, ಕುಮಾರಣ್ಣ ಎನ್ನುತ್ತಾರೆ. ಇವರಿಗ್ಯಾಕೆ ಉಸಾಬರಿ, ನಿಮ್ಮದು ಏನಿದೆ ಅನ್ನೋದನ್ನು ನೋಡಿಕೊಳ್ಳಿ. ಕಳೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಿಮ್ಮ ಸ್ಥಾನ 45ಕ್ಕೆ ಬಂದಿದೆ. ಹಾಗಾಗಿಯೇ ಈಗ ಎಲ್ಲರನ್ನೂ ಹೋಗಿ ತಬ್ಬಿಕೊಳ್ತಾರೆ. ಅದೆನೋ ಐಎನ್‍ಡಿಐಎ ಎಂದು ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ನಾನು ಬದುಕಿರುವವರೆಗೂ ಹಾಸನ ಜಿಲ್ಲೆಯ ಅಲ್ಪಸಂಖ್ಯಾತರ ಜೊತೆ ಇರುತ್ತೇನೆ. ಈ ಜಿಲ್ಲೆಯೊಳಗೆ ಕಾಂಗ್ರೆಸ್‍ನವರು ವೀರಶೈವ ಸಮಾಜಕ್ಕೆ ಒಂದು ಸೀಟ್ ಕೊಡಲಿಲ್ಲ. ಶಾಮನೂರು ಶಿವಶಂಕರಪ್ಪ ಅವರು ಸುಮ್ಮನೆ ಏನೂ ಇಲ್ಲದೇ ಹೇಳ್ತಾರಾ? ಅವರು ಎಷ್ಟು ನೋವನ್ನು ನುಂಗಿಕೊಂಡಿದ್ದಾರೆ. ಅವರು ಮನಸ್ಸು ಮಾಡಿದ್ದರೆ ಇಷ್ಟರೊಳಗೆ ಕೇಂದ್ರ ಸಚಿವರಾಗುತ್ತಿದ್ದರು ಎಂದಿದ್ದಾರೆ. ಇದನ್ನೂ ಓದಿ: ಇದು ಪ್ರಿ ಅರೇಂಜ್ ಮ್ಯಾರೇಜ್- ಬಿಜೆಪಿ ದೋಸ್ತಿಗೆ ಮತ್ತೆ ಸಿಎಂ ಇಬ್ರಾಹಿಂ ವಿರೋಧ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article