ಹಾಸನ: ನಗರಸಭೆ ಸದಸ್ಯ ಪ್ರಶಾಂತ್ ಕೊಲೆಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ನೇರವಾಗಿ ಆರೋಪಿಸಿದ್ದಾರೆ.
ನಗರಸಭೆ ಸದಸ್ಯ ಪ್ರಶಾಂತ್ ಕೊಲೆ ಹಿನ್ನೆಲೆ ಸಂಸದರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಲ್ ಇನ್ಸ್‌ಪೆಕ್ಟರ್ ರೇಣುಕಾ ಪ್ರಸಾದ್ ಮೂರು ಕೋಟಿ ಮನೆ ಕಟ್ಟಿದ್ದಾರೆ ಅಂತಾರೆ. ಅವರಿಗೆ ಹಣ ಎಲ್ಲಿಂದ ಬಂತು? ರೌಡಿಗಳ ಹೆಗಲ ಮೇಲೆ ಕೈಹಾಕಿ ಫೋಸ್ ಕೊಡುತ್ತಾರೆ. ಒಂದು ಲಾರಿಗೆ ತಿಂಗಳಿಗೆ 40 ಸಾವಿರದಂತೆ ಕಮಿಷನ್ ತೆಗೆದುಕೊಳ್ಳುತ್ತಾರೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯುವ ನಂಬಿಕೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ರಾತ್ರಿ ಅರಸೀಕೆರೆ ಸರ್ಕಲ್ ಇನ್ಸ್‌ಪೆಕ್ಟರ್‌ನನ್ನು ವಿಚಾರಣಾ ಆಫೀಸರ್ ಆಗಿ ನೇಮಕ ಮಾಡುತ್ತಾರೆ. ಅವರೇ ಹೋಗಿ ಸ್ಟೇಟ್ ಮೆಂಟ್ ಮಾಡಿಸಿಕೊಂಡು ಬರುತ್ತಾರೆ. ಈ ಗಿರಾಕಿ ಉದಯ ಭಾಸ್ಕರ್ ಹಿಂಗೇ ಬರೆದು ಕೊಡಿ ಅಂತಾರೆ. ಅವರದ್ದೇ ಸರ್ಕಲ್ ಇನ್ಸ್‌ಪೆಕ್ಟರ್, ಅವರು ಹೇಗೆ ಬರೆಸಿಕೊಂಡಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಾಸನ ಕಟ್ಟಿನಕೆರೆ ಮಾರುಕಟ್ಟೆ ಬಂದ್ – 500ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್
Advertisement
ಹಾಸನ ನಗರ ಹಾಗೂ ಗ್ರಾಮೀಣ ಎರಡೂ ಠಾಣೆ ಇವೆರಡು ರೌಡಿ ಎಲಿಮೆಂಟ್ಸ್ ಇದ್ದಂಗೆ. ಬೆಳಗ್ಗೆ ಎದ್ದರೆ ಊಟ-ತಿಂಡಿ, ದಿನಕ್ಕೆ ಒಂದರಿಂದ ಎರಡು ಲಕ್ಷ ಕಲೆಕ್ಟ್ ಮಾಡುತ್ತಾರೆ. ಮರಳು ದಂಧೆ ಇತರೆ ದಂಧೆಗಳಿಂದ ಹಣ ವಸೂಲಿ ಮಾಡುತ್ತಾರೆ. ಯಾವುದಾದರೂ ಖಾಲಿ ಸೈಟ್‍ಗೆ ಬೇಲಿ ಹಾಕಿಸುವುದು ನಂತರ ಅವರನ್ನು ರಾಜಿಗೆ ಕರೆಸುವುದು. ಒಂದೆರಡು ಲಕ್ಷ ಪಡೆದು ಇಬ್ಬರು ಹಂಚಿ ಕೊಳ್ಳುವುದು ಮಾಡುತ್ತಾರೆ ಎಂದು ಹಾಸನ ಡಿವೈಎಸ್‍ಪಿ ಹಾಗೂ ಪಿಐ ರೇಣುಕಾ ಪ್ರಸಾದ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಮುಖಂಡನ ಭೀಕರ ಹತ್ಯೆ – ಹಾಸನದಲ್ಲಿ ಪೊಲೀಸ್ ಸರ್ಪಗಾವಲು
Advertisement
ಹಾಸನದ ಎರಡು ಠಾಣೆಗಳು ದಂಧೆ ಕೋರರ ಕೈಗೆ ಸೇರಿದೆ. ಅವರು ಇಲ್ಲಿಗೆ ಪೋಸ್ಟಿಂಗ್ ಬರುವಾಗಲೇ ಹೇಗೆ ಬಂದಿದ್ದಾರೆ ಎನ್ನುವುದಕ್ಕೆ ಆಡಿಯೋ ಇದೆ. ಓರ್ವ ಪೊಲೀಸ್ ಅಧಿಕಾರಿಯಾಗಿ 18 ಕೇಸ್ ಮುಚ್ಚಿಹಾಕಿದ್ದೇನೆ ಇಂತದೇ ಪೋಸ್ಟಿಂಗ್ ಕೊಡಿ ಎಂದು ಮಾತನಾಡಿದ್ದಾರೆ. ರೇಣುಕಾ ಪ್ರಸಾದ್ ನಾಲ್ಕು ಕೋಟಿ ಮನೆ ಕಟ್ಟಿದ್ದಾರೆ ಅಷ್ಟು ಹಣ ಎಲ್ಲಿಂದ ಬರುತ್ತದೆ? ಇವರಿಬ್ಬರೂ ಕೂಡ ನಾಲ್ಕು ಐದು ಕೋಟಿ ಹಣ ಖರ್ಚುಮಾಡಿ ಮನೆ ಕಟ್ಟಿದ್ದಾರೆ. ಇದು ಹಾಸನ ಜಿಲ್ಲೆಯ ಜನರ ದುಡ್ಡು, ಮರಳಿನ ಹಾಗೂ ಮಟ್ಕ ದುಡ್ಡು ಎಂದು ಕಿಡಿಕಾರಿದ್ದಾರೆ.
ಪಿಐ ಅರೋಕಿಯಪ್ಪ, ಪಿಐ ರೇಣುಕಾ ಪ್ರಸಾದ್, ಡಿವೈಎಸ್ಪಿ ಉದಯ ಭಾಸ್ಕರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿರುವುದಾಗಿ ಎಸ್‍ಪಿ ಹೇಳಿದ್ದಾರೆ. ಈ ಸಂಬಂಧ ಏನು ಕ್ರಮ ಕೈಗೊಳ್ಳುತ್ತಾರೆ ನೋಡುತ್ತೇವೆ. ನಂತರ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.