ಹಾಸನ: ಕಾಂಗ್ರೆಸ್ (Congress), ಬಿಜೆಪಿಯವರೇ (BJP) ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಆಗುತ್ತಿಲ್ಲ, ಇನ್ನೂ ನಮ್ದೆನ್ರೀ. ನಾವೆಲ್ಲ ಸಿದ್ಧ ಮಾಡಿ ಇಟ್ಟುಕೊಂಡಿದ್ದೇವೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ (HD Revanna) ಹೇಳಿದರು.
ಹಾಸನ (Hassan) ಕ್ಷೇತ್ರಕ್ಕೆ ಜೆಡಿಎಸ್ (JDS) ಅಭ್ಯರ್ಥಿ ಆಯ್ಕೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳೇ ಒದ್ದಾಡುತ್ತಿವೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ನಮ್ಮದು ಯಾವ ನಿಖರವಾಗಿ ಯಾವುದೇ ದಿನಾಂಕವೂ ಇಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆ ನಡೆಸಿದ್ದರು. ಯಾರ‍್ಯಾರನ್ನು ಹೇಗೆ ಸಿದ್ಧ ಮಾಡಿ ರಾಷ್ಟ್ರೀಯ ಪಕ್ಷಗಳ ಮೇಲೆ ಯುದ್ಧಕ್ಕೆ ಬಿಡಬೇಕು ಬಿಡುತ್ತೇವೆ. ಈ ವಿಚಾರದಲ್ಲಿ ಯಾರೂ ತಲೆ ಕೆಡಿಸಿಕೊಳ್ಳಬೇಕಿಲ್ಲ. ರಾಷ್ಟ್ರೀಯ ಪಕ್ಷಗಳೇ ಏನು ಮಾಡುವುದು ಅಂತಾ ಯೋಚನೆ ಮಾಡ್ತಾ ಇದ್ದಾರೆ. ಅವರ ಪರಿಸ್ಥಿತಿನೇ ಹೀಗಿರುವಾಗ ನಮ್ಮ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ ಎಂದರು. ಇದನ್ನೂ ಓದಿ: ಗಾಂಧಿ ಕುಟುಂಬವನ್ನು ರಾಮನ ವಂಶಕ್ಕೆ ಹೋಲಿಸಿರುವುದು ಅಹಂಕಾರ : ಅನುರಾಗ್ ಠಾಕೂರ್
Advertisement
Advertisement
ಮೀಸಲಾತಿ ಹಂಚಿಕೆ ವಿಚಾರಕ್ಕೆ ಕಿಡಿಕಾರಿದ ಅವರು, ಇಷ್ಟು ದಿನ ಯಾಕೆ ಇವರು ಮೀಸಲಾತಿ ಬಗ್ಗೆ ಮಾತಾಡಿರಲಿಲ್ಲ. ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ದೇವೇಗೌಡರು, ಅದು ಈಗ ಎಲ್ಲರಿಗೂ ಗೊತ್ತಾಗ್ತಾ ಇದೆ. ದೇವೇಗೌಡರು ಕೊಟ್ಟ ಮೀಸಲಾತಿ ಯಾಕೆ ತೆಗೆದರು? ಚುನಾವಣೆ ವೇಳೆಯಲ್ಲಿ ಜಾತಿ ನಡುವೆ ಹೊಡೆದಾಡಲು ಮುಂದಾಗಿದ್ದಾರೆ. ಮುಸ್ಲಿಮರ ಮೀಸಲಾತಿ ಕಿತ್ತು ಒಕ್ಕಲಿಗರು ಮತ್ತು ಲಿಂಗಾಯಿತರಿಗೆ ನೀಡಿದ್ದಾರೆ. ನೈತಿಕತೆ ಇದ್ದರೆ ಕೂಡಲೇ ಮುಸ್ಲಿಂ ಸಮುದಾಯದ ಧರಣಿ ಮಾಡಬೇಕು. ಜಿಲ್ಲೆಯ ಎಲ್ಲಾ ಕಡೆ ಧರಣಿ ಕೂರಬೇಕು. ಬಿಜೆಪಿ ವಿರುದ್ಧ ಹೋರಾಟ ಮಾಡಿ ಎಂದು ಕರೆ ನೀಡಿದರು. ಇದನ್ನೂ ಓದಿ: ಬಿಎಸ್‍ವೈ ಮನೆ ಮೇಲೆ ದಾಳಿ ರಾಜಕೀಯ ಪ್ರೇರಿತವೂ ಇರಬಹುದು: ಸಚಿವ ಜೋಶಿ