ಹಾಸನ: ಆಡಿಯೋದಲ್ಲಿ ಶಿವಲಿಂಗೇಗೌಡ (Shivalinge Gowda) ಹೇಳಿರುವುದು ಸತ್ಯ ಅಲ್ಲ ಎಂದು ಧರ್ಮಸ್ಥಳಕ್ಕೆ (Dharmasthala) ಬಂದು ಪ್ರಮಾಣ ಮಾಡಲಿ. ನಾನೇನಾದರು ಒಂದು ಪದ ಎಡಿಟ್ (Edit) ಮಾಡಿರುವುದನ್ನು ತೋರಿಸಿದರೆ ಆ ಧರ್ಮಸ್ಥಳದ ಮಂಜುನಾಥ ನನ್ನನ್ನು ನೋಡಿಕೊಳ್ಳಲಿ ಎಂದು ಮಾಜಿಸಚಿವ ಎಚ್.ಡಿ.ರೇವಣ್ಣ (H.D.Revanna) ಶಾಸಕ ಶಿವಲಿಂಗೇಗೌಡರಿಗೆ ಸವಾಲೆಸದರು.
ಇತ್ತೀಚೆಗೆ ವೈರಲ್ (Viral) ಆಗಿದ್ದ ಎಚ್.ಡಿ.ರೇವಣ್ಣ ಹಾಗೂ ಅರಸೀಕೆರೆ (Arasikere) ಶಾಸಕ ಕೆ.ಎಂ.ಶಿವಲಿಂಗೇಗೌಡ ನಡುವಿನ ಸಂಭಾಷಣೆ ಆಡಿಯೋ ಕುರಿತು ಅರಸೀಕೆರೆಯಲ್ಲಿ ಮಾತನಾಡಿದ ಅವರು, ಆ ಹುಡುಗ ಆಡಿಯೋ ರೆಕಾರ್ಡ್ ಮಾಡಿಕೊಂಡಿರುವುದು ನನಗೆ ಗೊತ್ತಿಲ್ಲ. ರಾಗಿ ಕಳ್ಳ ಅಂದ ಕೂಡಲೇ ಧರ್ಮಸ್ಥಳಕ್ಕೆ ಹೋಗಿ ಸತ್ಯ ಮಾಡಲಿಲ್ವಾ? ಕಳೆದ ಒಂದು ವರ್ಷದಿಂದ ಇದು ನಡೆಯುತ್ತಿದೆ. ಕುರುಬರು, ಲಿಂಗಾಯತರು, ಒಕ್ಕಲಿಗರು ನನಗೆ ಓಟು ಹಾಕುವುದಿಲ್ಲ ಎಂದು ಆ ಆಡಿಯೋದಲ್ಲೇ ಹೇಳಿದ್ದಾರೆ. ನಾನೇನಾದರು ಒಂದು ಪದ ಎಡಿಟ್ ಮಾಡಿರುವುದನ್ನು ತೋರಿಸಿದರೆ ಆ ಧರ್ಮಸ್ಥಳದ ಮಂಜುನಾಥ ನನ್ನನ್ನು ನೋಡಿಕೊಳ್ಳಲಿ. ಇಲ್ಲವಾದರೆ ಆ ದೇವರು ಅವರನ್ನು ನೋಡಿಕೊಳ್ಳಲಿ. ಧರ್ಮಸ್ಥಳಕ್ಕೆ ಬಂದು ದೇವರ ಮೇಲೆ ಪ್ರಮಾಣ ಮಾಡಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಮೋದಿಯ ಅತಿದೊಡ್ಡ TRP: ಮಮತಾ ಬ್ಯಾನರ್ಜಿ
Advertisement
Advertisement
ದೇವೇಗೌಡರು (H.D.Deve Gowda) ಅರಸೀಕೆರೆ ಜನ ದುಡ್ಡು ಇಲ್ಲದೆ ಓಟು ಹಾಕವುದಿಲ್ಲ ಎನ್ನುತ್ತಾರೆ. ಹಾಗಿದ್ದರೆ ಹದಿನೈದು ವರ್ಷ ಅರಸೀಕೆರೆ ಜನ ದುಡ್ಡು ತೆಗೆದುಕೊಂಡು ಓಟು ಹಾಕಿದ್ದಾರಾ? ನಾವು ಹದಿನಾಲ್ಕು ತಿಂಗಳಿನಲ್ಲಿ 250 ಕೋಟಿ ರೂ. ಕೊಟ್ಟಿದ್ದೇವೆ. ಯಾರೂ ಕಂಟ್ರಾಕ್ಟರ್ ಮಾಡಿದ್ದು ಎಂದು ಹೇಳಲಿ. ನಾನು ಒಂದು ಬಿಡಗಾಸು ತೆಗೆದುಕೊಂಡಿದ್ದೇನೆ ಎಂದರೆ ರಾಜಕೀಯ (Politics) ಬಿಟ್ಟು ಹೋಗುತ್ತೇನೆ. ದೇವರು ಎನ್ನುವವನು ಇದ್ದರೆ ಇದೆಲ್ಲಾ ನೋಡಿಕೊಳ್ಳಲಿ. ದೇವೇಗೌಡರನ್ನು ರಾಜಕೀಯವಾಗಿ ಮುಗಿಸಲೇಬೇಕು ಅಂತ ಹೊರಟರು. ಆದರೆ ಏನಾಯಿತು? ಈತ ಗಂಡಸಿಯಲ್ಲಿ ಹದಿನೇಳು ಓಟಲ್ಲಿ ಸೋತಿದ್ದ. ರಾಜಕೀಯ ವಿದ್ಯಾಮಾನ ಏನಾಯ್ತು ಎಂದು ಸಮಯ ಬಂದಾಗ ಹೇಳುತ್ತೇನೆ. ಇನ್ನೊಂದು ಸ್ವಲ್ಪ ಬಿಚ್ಚೋದಿದೆ. ಎಳೆಎಳೆಯಾಗಿ ಬಿಚ್ಚುತ್ತೇನೆ. ಹದಿನೈದು ವರ್ಷದಲ್ಲಿ ನಮ್ಮದು ಬಿಚ್ಚಿಡಲು ಏನೇನಿದೆ ಹೇಳಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ರೆಡ್ ಸಿಗ್ನಲ್ – ಕೋಲಾರ ಕಾಂಗ್ರೆಸ್‌ನಲ್ಲಿ ಮತ್ತೆ ಆರಂಭವಾಯ್ತು ಗುಂಪುಗಾರಿಕೆ
Advertisement
Advertisement
ಕೌಶಿಕ್ ಮುಖರ್ಜಿ ಹತ್ತಿರ ಕರೆದುಕೊಂಡು ಹೋಗಿ 360 ಹಳ್ಳಿಗೆ ಕುಡಿಯುವ ನೀರು ಮಂಜೂರು ಮಾಡಿಸಿಕೊಟ್ಟೆ. ಆಗ ಬಿಜೆಪಿ (BJP) ಸರ್ಕಾರ ಆಡಳಿತದಲ್ಲಿ ಇತ್ತು. ಇದೇ ಈಶ್ವರಪ್ಪ ಬಂದು ಅಡಿಗಲ್ಲು ಹಾಕಿದ್ದರು. ಸುಳ್ಳು ಜಾಸ್ತಿ ದಿನ ನಡೆಯುವುದಿಲ್ಲ. ಜನರ ಮೆಚ್ಚಿಗೆಗೋಸ್ಕರ ಇವರು ನಾಟಕ ಆಡುತ್ತಿದ್ದಾರೆ. ಸುಳ್ಳು ಯಾವತ್ತಾದರೂ ಒಂದು ದಿನ ಅಂತ್ಯವಾಗುತ್ತದೆ. ಈಗ ನಾನು ಚಿಕ್ಕ ವಿಷಯವನ್ನು ಬಿಚ್ಚಿಟ್ಟಿದ್ದೇನೆ. ನನ್ನ ಕೈಯಲ್ಲಿ ಆದದ್ದನ್ನು ಮಾಡಿದ್ದೇನೆ. ಈತನನ್ನು ರಾಜಕೀಯವಾಗಿ ಮೇಲೆ ತರಲು ಏನೇನು ಶಕ್ತಿ ತುಂಬಬೇಕೋ ಅದನ್ನು ತುಂಬಿದ್ದೇನೆ. ಈಗ ಅವರು ಸ್ವಲ್ಪ ದೃಢವಾಗಿದ್ದಾರೆ. ಅವರ ಬಳಿ ಹಣಕಾಸಿದೆ. ನೀನೆ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ ಎನ್ನುವ ಪರಿಸ್ಥಿತಿ ಈಗ ನಮಗೆ ಬಂದಿದೆ. ಇನ್ನೂ 45 ದಿನ ಪರದೆ ಇದೆ, ಅದರ ಮೇಲೆ ಎಳೆಎಳೆಯಾಗಿ ಆಚೆ ತರುತ್ತೇನೆ. ಅರಸೀಕೆರೆ ಮಹಾಜನತೆ ಸ್ವಾಭಿಮಾನದವರು. ನೀವು ದುಡ್ಡು ತಗೆದುಕೊಂಡು ಹದಿನೈದು ಓಟು ಹಾಕಿದ್ದೀರಾ ಎಂದು ಕೇಳುತ್ತೇನೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಬಿಜೆಪಿಯ ಮಿಷನ್ ಬೆಂಗಳೂರು ಟಾಸ್ಕ್‌ಗೆ ಜೀವ – ಮೋದಿ ಮೆಟ್ರೋ ಅಜೆಂಡಾ ಏನು?
ಅರಸೀಕೆರೆ ನಗರಸಭೆಯ ಏಳು ಜನ ಅನರ್ಹ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ರೇವಣ್ಣ, ಅವರು ಪಾಪದವರು, ಅದರಲ್ಲಿ ನಂದೇ ತಪ್ಪಿದೆ. ನನ್ನದೇ ತಪ್ಪು, ನಾನು ಅವರ ಬಳಿ ಕ್ಷಮೆ ಕೇಳುತ್ತೇನೆ. ನಮ್ಮ ಪಕ್ಷದ ಅಧ್ಯಕ್ಷರಿಗೆ ಸರಿಯಾದ ಮಾಹಿತಿ ನೀಡಲಿಲ್ಲ. ಕೋರ್ಟ್‌ನಲ್ಲಿ ಕೇಸ್ ಇದೆ ಎಂದು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ ಎಂದರು. ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಇಂದು ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ಆಟೋ ಮುಷ್ಕರ
ಎರಡು ವರ್ಷದಿಂದ ಶಿವಲಿಂಗೇಗೌಡರು ಕಾಂಗ್ರೆಸ್ (Congress) ಮನೆ ಬಾಗಿಲು ತಟ್ಟುತ್ತಲೇ ಇದ್ದರು. ಇನ್ನೊಂದು ದಿನ ದೇವೇಗೌಡರ ಮುಂದೆ ಎಲ್ಲಾ ಕುಳಿತಿದ್ದರು. ಆಗ ಒಬ್ಬರು ಫೋನ್ ಮಾಡಿ ಏನು ಸಾರ್ ರಾಮಸ್ವಾಮಿ ಇಲ್ಲೇ ಉಳಿದುಕೊಳ್ಳತ್ತಾರೆ ಎಂದರು. ಕಾಂಗ್ರೆಸ್‌ನವರು ಅವನನ್ನು ಒದ್ದು ಓಡಿಸಿದ್ದಾರೆ, ಅದಕ್ಕೆ ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ ಎಂದು ಇದೇ ಶಿವಲಿಂಗೇಗೌಡ ಹೇಳಿದ. ಶಿವಲಿಂಗೇಗೌಡರಿಗೆ ಭಗವಂತ ಒಳ್ಳೆಯದು ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ಉರಿಗೌಡ-ನಂಜೇಗೌಡ ಸಿನಿಮಾ : ಇಂದು ಮಹತ್ವದ ನಿರ್ಧಾರ