ರಾಯಚೂರು: ಪಾಪ ಹೆಚ್‌ಡಿ ಕುಮಾರಸ್ವಾಮಿ (HD Kumaswamy) ಅವರು ಬರಗಾಲ ಹಿನ್ನೆಲೆ ಯಾತ್ರೆ ಮಾಡಲೇಬೇಕು. ಅವರು ಅಧಿಕಾರದಲ್ಲಿದ್ದಾಗ ಏನೂ ಮಾಡಲು ಆಗಲಿಲ್ಲ. ಲೋಕಸಭಾ ಚುನಾವಣೆ ಸಮಯದಲ್ಲಿ ಯಜಮಾನ್ರು ಫ್ರೀಯಾಗಿದ್ದಾರಲ್ಲಾ, ಸುತ್ತಾಡಲಿ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ (Chaluvaraya Swamy) ಲೇವಡಿ ಮಾಡಿದ್ದಾರೆ.
ರಾಯಚೂರಿನಲ್ಲಿ (Raichur) ಮಾತನಾಡಿದ ಚೆಲುವರಾಯಸ್ವಾಮಿ, ಹೆಚ್‌ಡಿಕೆ ಸಿಎಂ ಆಗಿದ್ದಾಗ ಕೋಆಪರೇಟಿವ್‌ನಲ್ಲಿ ಸಾಲ ಮನ್ನಾ ಎಂದು ಹಲವಾರು ಕಂಡೀಷನ್ ಹಾಕಿದ್ರು. ಹಣಕಾಸು ಇಲಾಖೆಯಿಂದ ಒಂದು ರೂಪಾಯಿ ಬಿಡುಗಡೆ ಆಗಲಿಲ್ಲ. ಬೊಮ್ಮಾಯಿ ಬಂದಾಗ ಏನೋ ಸ್ವಲ್ಪ ಮಾಡಿದ್ದಾರೆ ಎಂದು ಹೇಳಿದರು.
ರೈತರು ಯಾರು ಸಾಲ ತಗೊಳಂಗಿಲ್ಲಾ ಅವರೆಲ್ಲಾ ಸುಸ್ತಿಯಲ್ಲಿದ್ದಾರೆ. ರೈತರ ಸಮಸ್ಯೆಗಳೆಲ್ಲಾ ಹೆಚ್‌ಡಿಕೆಗೆ ಗೊತ್ತಿದೆ. ಲೋಕಸಭಾ ಚುನಾವಣೆ ಬಂದಿದೆ, ಓಡಾಡಲಿ. ಅವರು ಒಳ್ಳೆಯ ಸಲಹೆಗಳನ್ನು ಕೊಟ್ಟರೆ ತೆಗೆದುಕೊಳ್ಳೋಣ. ಹಿಂದೆ 2 ಬಾರಿ ಅಧಿಕಾರದಲ್ಲಿದ್ದಾಗ ಯಜಮಾನ್ರು ಏನು ಮಾಡಿದ್ದಾರೆ ಅನ್ನೋದನ್ನು ನೋಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಅಧಿಕಾರಿ ಹತ್ಯೆಗೆ ಸರ್ಕಾರದ ವೈಫಲ್ಯವೇ ಕಾರಣ: ಹೆಚ್‌ಡಿಕೆ
ಸಿಎಂ ಕುರ್ಚಿ ವಿಚಾರದ ಬಗ್ಗೆ ಯಾರು ಯಾವಾಗ ಏನು ಅಂತ ನಿರ್ಧಾರ ಮಾಡೋದಕ್ಕೆ ಕಾಂಗ್ರೆಸ್ ಪಕ್ಷವಿದೆ. ಕುಮಾರಸ್ವಾಮಿಯವರಿಗೆ ಚಿಂತೆ ಬೇಡ. ಹೆಚ್‌ಡಿಕೆ ಹೇಳಿಕೆಗೆ ಕಾಂಗ್ರೆಸ್ ಸೇರ್ಪಡೆಯಾಗಿ ಅಂತ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕುಮಾರಸ್ವಾಮಿ ಈಗಾಗಲೇ ಬಿಜೆಪಿಗೆ ಹೋಗಿದ್ದಾರೆ. ಬಿಜೆಪಿಯಲ್ಲಿ ಅವರಿಗೆ ಸರಿಯಾದ ಮಾನ್ಯತೆ ಸಿಗದೇ ಇದ್ದರೆ ಈ ಕಡೆ ತಿರುಗಿ ನೋಡ್ತಾರೆ ಅಂತ ಕಾಣುತ್ತೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು. ಇದನ್ನೂ ಓದಿ: ಗೋಮಾಂಸ ರಫ್ತು ಮಾಡುವುದರಲ್ಲಿ ಭಾರತಕ್ಕೆ 2ನೇ ಸ್ಥಾನ, ಇದರ ಶ್ರೇಯಸ್ಸು ಮೋದಿಗೆ ಸಲ್ಲಬೇಕು: ಲಾಡ್ ಟೀಕೆ