ಹಾಸನ: ದೇವರಿಗೆ ಮೊಮ್ಮಗನ ಮುಡಿ ಕೊಡಲು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಸನ ಜಿಲ್ಲೆಗೆ ಭಾನುವಾರ ಆಗಮಿಸಿದ್ದರು. ಚನ್ನರಾಯಪಟ್ಟಣ ತಾಲೂಕಿನ, ಯಲಿಯೂರು ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀದೇವಿ ದೇವಾಲಯದಲ್ಲಿ ಮಗ ನಿಖಿಲ್ ಕುಮಾರಸ್ವಾಮಿ, ಸೊಸೆ ರೇವತಿ ಜೊತೆ ಮೊಮ್ಮಗ ಅವ್ಯಾನ್ ದೇವ್ ಮುಡಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದರು.
Advertisement
ಪೂಜೆಯ ಬಳಿಕ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಹುಟ್ಟೂರು ಹೊಳೆನರಸೀಪುರ ತಾಲೂಕಿನ, ಹರದನಹಳ್ಳಿಗೆ ಆಗಮಿಸಿದ ಹೆಚ್‌ಡಿಕೆ, ಅಲ್ಲಿನ ದೇವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಳೆ ಬಂದಿದ್ದು, ದೇವೇಶ್ವರನ ಆಶೀರ್ವಾದ ನಮಗೆ ಒಲಿದಿದೆ ಎಂದು ಕುಮಾರಸ್ವಾಮಿ ಪುತ್ರ ನಿಖಿಲ್ ಬಳಿ ದೇವಾಲಯದಲ್ಲಿ ಹೇಳಿದರು. ಇದನ್ನೂ ಓದಿ: ಸೆಪ್ಟೆಂಬರ್ 8ಕ್ಕೆ ಬಿಜೆಪಿ ಜನೋತ್ಸವ ಕಾರ್ಯಕ್ರಮ: ಸುಧಾಕರ್
Advertisement
Advertisement
ಪೂಜೆ ಮುಗಿದ ಬಳಿಕ ದೇವಾಲಯದಲ್ಲಿ ಮೊಮ್ಮಗನಿಗೆ ಬೆಣ್ಣೆ ತಿನ್ನಿಸಿ, ಪ್ರಸಾದ ಸ್ವೀಕರಿಸಿದರು. ನಂತರ ಮಾತನಾಡಿದ ಅವರು, ಇಂದು ನಮ್ಮ ದೇವರಾದ ಯಲಿಯೂರು ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀದೇವಿಗೆ ನನ್ನ ಮೊಮ್ಮಗನ ಮುಡಿ ಕೊಡಲು ಬಂದಿದ್ದೇನೆ. ನಮ್ಮ ತಂದೆಯವರ ಏಳಿಗೆಗೆ, ಬದುಕಿಗೆ ಸಂಪೂರ್ಣ ರಕ್ಷಣೆ ಕೊಟ್ಟು ಅವರ ಬದುಕನ್ನು ಹಳ್ಳಿಯಿಂದ ದೆಹಲಿ ಮಟ್ಟಕ್ಕೆ ತೆಗೆದುಕೊಂಡು ಹೋದಂತಹ ನಮ್ಮ ಕುಲ ದೇವರು ಹರದನಹಳ್ಳಿಯ ಶಿವನ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ ಎಂದರು. ಇದನ್ನೂ ಓದಿ: ಹೈಕಮಾಂಡ್ ಗಮನ ಸೆಳೆಯಲು ಕೆಜಿಎಫ್ ಬಾಬು ಹೊಸ ಪ್ಲ್ಯಾನ್!
Advertisement
ಹೆಚ್‌ಡಿಕೆ ಕುಟುಂಬ ದೇವಾಲಯಕ್ಕೆ ಆಗಮಿಸುವ ಮುನ್ನ ಮಾಜಿ ಸಚಿವ ಹೆಚ್.ಡಿ ರೇವಣ್ಣ ದೇವಾಲಯದ ಬಳಿ ಬಂದು ಚೆನ್ನಾಗಿ ಪೂಜೆ ಮಾಡಿ ಎಂದು ಅರ್ಚಕರಿಗೆ ಹೇಳಿ ಹೋದರು.