Connect with us

Davanagere

ಶೌಚಾಲಯ ನಿರ್ಮಾಣ ವಿಚಾರಕ್ಕೆ ಯುವತಿ ಆತ್ಮಹತ್ಯೆ ಪ್ರಕರಣ- ಸಿಎಂಗೆ ಎಚ್‍ಡಿಕೆ ಟ್ವೀಟ್

Published

on

Share this

ದಾವಣಗೆರೆ: ಶೌಚಾಲಯ ನಿರ್ಮಾಣ ವಿಚಾರಕ್ಕೆ ನಡೆದ ಜಗಳದಲ್ಲಿ ಅನ್ನಪೂರ್ಣ ಎಂಬ ಯುವತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟ್ವೀಟ್ ಮಾಡಿದ್ದಾರೆ.

ಡಿಸೆಂಬರ್ 27 ರಂದು ಮತ್ತಿಹಳ್ಳಿಯಲ್ಲಿ ಗ್ರಾಮದಲ್ಲಿ ಗ್ರಾಮ ಪಂಜಾಯ್ತಿ ಅಧ್ಯಕ್ಷರಿಂದ ಶೌಚಾಲಯ ನಿರ್ಮಾಣಕ್ಕೆ ಅಡ್ಡಿಯಾಗಿದ್ದರಿಂದ ಮನನೊಂದು ಅನ್ನಪೂರ್ಣ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ತಪ್ಪಿತಸ್ತರನ್ನು ಕೂಡಲೆ ಬಂಧಿಸಬೇಕು ಎಂದು ಹೇಳಿದ್ದಾರೆ.

ಸ್ವಚ್ಛ ಭಾರತ ಯೋಜನೆ ಅನುಷ್ಟಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೀವ್ರ ಆಸಕ್ತಿ ವಹಿಸಿದ್ದರೂ, ಯೋಜನೆ ಜಾರಿಯಲ್ಲಿ ಲೋಪಗಳಾಗುತ್ತಿವೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆಯಾಗಿದೆ. ಆ ಕುಟುಂಬದ ಬಡತನ, ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ದಬ್ಬಾಳಿಕೆ ನಡೆಸಿದ ಮನುಷ್ಯತ್ವವಿಲ್ಲದ ವ್ಯಕ್ತಿಗಳನ್ನು ನಾಗರಿಕ ಸಮಾಜ ಕ್ಷಮಿಸಬಾರದು ಎಂದಿದ್ದಾರೆ.

ಗ್ರಾಮ ಪಂಚಾಯತಿ ಪಿಡಿಒ, ಸದಸ್ಯರು ಮತ್ತು ಅನ್ನಪೂರ್ಣ ಸಾವಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣರಾದವರನ್ನ ಬಂಧಿಸಬೇಕು ಎಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದು, ಟ್ವೀಟ್ ಮೂಲಕ ಕೂಡ ಸಿಎಂಗೆ ಆಗ್ರಹಿಸಿದ್ದಾರೆ.

ಇದನ್ನು ಓದಿ: ಟಾಯ್ಲೆಟ್ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಅಡ್ಡಿ-ಸೀಮೆಎಣ್ಣೆ ಸುರಿದುಕೊಂಡು ಯುವತಿ ಆತ್ಮಹತ್ಯೆ

https://www.youtube.com/watch?v=UI_oUomu2wI

#CMofKarnataka ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯವರೇ ಅಡ್ಡಿಪಡಿಸಿ,…

Posted by H D Kumaraswamy on Friday, December 1, 2017

 

Click to comment

Leave a Reply

Your email address will not be published. Required fields are marked *

Advertisement