ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೆಂಪಲ್ ರನ್ ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ನಯವಾಗಿಯೇ ತಿವಿದಿದ್ದಾರೆ.
ರಾಹುಲ್ ಗಾಂಧಿ ಮೈಸೂರು ಪ್ರವಾಸದ ವೇಳೆಯಲ್ಲಿಯೇ ಎಚ್‍ಡಿಕೆ ಟಾಂಗ್ ನೀಡಿರುವುದು ವಿಶೇಷ. ಎಚ್.ಡಿ.ಕುಮಾರಸ್ವಾಮಿ ಅವರು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ ಪೋಸ್ಟ್ ನ ಪೂರ್ಣರೂಪ ಇಲ್ಲಿದೆ.
Advertisement
ರಾಹುಲ್ ಗಾಂಧಿ ಅವರೇ ಚಾಮುಂಡಿತಾಯಿಯ ನಾಡು ಮೈಸೂರಿಗೆ ಬಂದಿದ್ದೀರಿ. ಚಾಮುಂಡಿ ಸನ್ನಿಧಿಗೆ ಹೊಗುತ್ತಿದ್ದೀರಿ ಎಂದು ತಿಳಿಯಿತು. ನೀವು ನಂಬಿದ ಡೋಂಗಿ ಸಿದ್ಧಾಂತಗಳು ದೇಶಾದ್ಯಂತ ನಿಮಗೆ ಕೊಟ್ಟ ಹೊಡೆತಕ್ಕೆ ನಲುಗಿ ಹಿಂದಿನ ನಾಸ್ತಿಕತೆಯನ್ನು ಬಿಟ್ಟು ಈಗ… https://t.co/Mvvagsi9qv
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 24, 2018
Advertisement
ರಾಹುಲ್ ಗಾಂಧಿ ಅವರೇ ಚಾಮುಂಡಿತಾಯಿಯ ನಾಡು ಮೈಸೂರಿಗೆ ಬಂದಿದ್ದೀರಿ. ಚಾಮುಂಡಿ ಸನ್ನಿಧಿಗೆ ಹೊಗುತ್ತಿದ್ದೀರಿ ಎಂದು ತಿಳಿಯಿತು. ನೀವು ನಂಬಿದ ಡೋಂಗಿ ಸಿದ್ಧಾಂತಗಳು ದೇಶಾದ್ಯಂತ ನಿಮಗೆ ಕೊಟ್ಟ ಹೊಡೆತಕ್ಕೆ ನಲುಗಿ ಹಿಂದಿನ ನಾಸ್ತಿಕತೆಯನ್ನು ಬಿಟ್ಟು ಈಗ ಬಿಜೆಪಿಯವರಂತೆ ಕಪಟ ಭಕ್ತಿ ಪ್ರದರ್ಶಿಸುತ್ತಾ #ಟೆಂಪಲ್_ರನ್ ಕೈಗೊಂಡಿದ್ದೀರಿ. ಆಗಲಿ.
Advertisement
ನನಗಾದ ಶಸ್ತ್ರ ಚಿಕಿತ್ಸೆ ನಂತರ ನಾನು ಪುನಃ ರಾಜಕೀಯ ಆರಂಭಿಸಲು ಪ್ರೇರಣೆ ನೀಡಿದ ಆ ತಾಯಿ ಚಾಮುಂಡಿಯು ನಿಮಗೆ ಅಪ್ರಬುದ್ಧತೆಯನ್ನು ನೀಗಲಿ ಎಂದು ಆಶಿಸುತ್ತೇನೆ.
Advertisement
ಎಲ್ಲಕ್ಕಿಂತ ಪ್ರಮುಖವಾಗಿ ಕಳೆದ ಬಾರಿ ನೀವು ಕರ್ನಾಟಕಕ್ಕೆ ಬಂದಾಗ ಜೆಡಿಎಸ್ ವಿರುದ್ಧ ಬಾಲಿಶ ಹೇಳಿಕೆ ಕೊಟ್ಟು ಹೋಗಿದ್ದಿರಿ. ಅದಕ್ಕೆ ನಾನು ಸೂಕ್ತ ಉತ್ತರ ಕೊಟ್ಟಿದ್ದೇನೆ. ನಾನು ಹೇಳಿದ್ದಕ್ಕೆ ನಿಮ್ಮ ಪ್ರತಿಕ್ರಿಯೆ ನಿರೀಕ್ಷೆಯಲ್ಲಿದ್ದೇನೆ. ಆ ಮೂಲಕ ಜನರ ಸಂಶಯವನ್ನು ನಾನು ನಿವಾರಿಸಬೇಕಿದೆ. ನೀವು ಉತ್ತರ ಕೊಡದಿದ್ದರೆ ನನ್ನ ವಾದ ಒಪ್ಪಿದಂತೆ ಮತ್ತು #ಹಿಟ್_ಆಂಡ್_ರನ್ ಮಾಡಿದಂತೆ. ಆನಂತರ ನೀವು ಕೇವಲ #ಟೆಂಪಲ್_ರನ್_ರಾಹುಲ್ ಆಗಿ ಉಳಿದಿರುವುದಿಲ್ಲ. ಬದಲಿಗೆ #ಹಿಟ್_ಆಂಡ್_ರನ್_ರಾಹುಲ್ ಆಗಲಿದ್ದೀರಿ.