ರಾಮನಗರ: ಪಾದಯಾತ್ರೆಗೆ ಭಾಗವಹಿಸಿ ಏನು ಮಾಡಲಿ ಹೇಳಿ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಮನಗರದಲ್ಲಿ ಟಾಂಗ್ ಕೊಟ್ಟಿದ್ದಾರೆ.
ಮೇಕೆದಾಟುಗಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದ್ದು, ಅದಕ್ಕೆ ಕುಮಾರಸ್ವಾಮಿ ಅವರನ್ನು ಕರೆಯಲಾಗಿದೆ ಎಂದು ಡಿಕೆಶಿ ಹೇಳಿಕೆಯನ್ನು ನೀಡಿದ್ದರು. ಈ ವಿಚಾರವಾಗಿ ಬಿಡದಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಗೆ ಭಾಗವಹಿಸಿ ಏನು ಮಾಡೋದು ಹೇಳಿ? ಭಾಗವಹಿಸದರೆ ಕೆಲಸ ಪ್ರಾರಂಭ ಮಾಡಲು ಸಾಧ್ಯವಾ? ಮಾಜಿ ಪ್ರಧಾನಿ ದೇವೇಗೌಡರು ಹಲವು ಪಾದಯಾತ್ರೆ ಮಾಡಿದ್ದಾರೆ. ನಾನು ಕೂಡ ಹುಬ್ಬಳ್ಳಿವರೆಗೆ ಪಾದಯಾತ್ರೆ ಮಾಡಿದ್ದೆ. ಆ ಪಾದಯಾತ್ರೆಗೂ ಇದಕ್ಕೂ ಇದೆ. ಚನ್ನಪಟ್ಟಣದ ವಿಠಲೇನಹಳ್ಳಿಯಿಂದ ಬೆಂಗಳೂರಿನವರೆಗೆ ದೇವೇಗೌಡರು ಪಾದಯಾತ್ರೆ ಮಾಡಿದ್ದರು ಎಂದು ವಿವರಿಸಿದರು. ಇದನ್ನೂ ಓದಿ: ಸರ್ಕಾರಿ ನಿಯಂತ್ರಣದಿಂದ ದೇಗುಲಗಳಿಗೆ ಸ್ವಾತಂತ್ರ್ಯ: ಸಿಎಂ ನಿಲುವು ಸ್ವಾಗತಿಸಿದ ಮಂತ್ರಾಲಯ ಶ್ರೀ
Advertisement
Advertisement
ಗೋಲಿಬಾರ್ ನಲ್ಲಿ ಇಬ್ಬರು ರೈತರು ಸಾವನ್ನಪ್ಪಿದ್ದರು. ರೈತರ ಆತ್ಮಹತ್ಯೆ ತಡೆಗೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಪಾದಯಾತ್ರೆ ಮಾಡಿದ್ದರು. ಕುಣಿಗಲ್ ನಿಂದ ಬೆಂಗಳೂರುವರೆಗೆ ರೈತರ ವಿಚಾರವಾಗಿ ಪಾದಯಾತ್ರೆ ಮಾಡಿದ್ದರು. ರೈತ ಗೋಲಿಬಾರ್ ನಲ್ಲಿ ಸಾವನ್ನಪ್ಪಿದ್ದ ಎಂದು ಪಾದಯಾತ್ರೆ ಮಾಡಿದ್ದರು. ದೊಡ್ಡಳ್ಳಿ ಗೋಲಿಬಾರ್ ನಲ್ಲಿ ಕಾಂಗ್ರೆಸ್ ಸರ್ಕಾರ ಇಬ್ಬರು ರೈತರನ್ನು ಬಲಿ ಪಡೆದಿದೆ ಎಂದು ದೇವೇಗೌಡರು 9 ದಿನ ಉಪವಾಸ ಮಾಡಿದ್ದರು. ಈ ಪಾದಯಾತ್ರೆ ಜನತೆಯ ಒಳಿತಿಗಾಗಿ ಮಾಡಿದ್ದು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪಾದಯಾತ್ರೆ ಮಾಡುತ್ತಿದೆ ಅಷ್ಟೇ ಎಂದು ಕಿಡಿಕಾರಿದರು.
Advertisement
Advertisement
ಮೇಕೆದಾಟು ಡಿಪಿಆರ್ ಅನ್ನು ನಾನು ಕಳುಹಿಸಿದ್ದೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ನಾನು ಸಿಎಂ ಆಗಿದ್ದಾಗ ಯೋಜನೆಯ ಡಿಪಿಆರ್ ಕಳುಹಿಸಿರೋದು. ವಿಧಾನಸಭೆಯಲ್ಲಿ ನೀರಾವರಿ ಮಂತ್ರಿ ಪ್ರಶ್ನೋತ್ತರ ಕಾಲದಲ್ಲಿ ಉತ್ತರಿಸಿದ್ದಾರೆ. ಡಿಪಿಆರ್ ಸಿದ್ಧವಾಗಿದ್ದು, ನಮ್ಮ ಕಾಲದಲ್ಲಿ. ಇವರೇ 5 ವರ್ಷ ಅಧಿಕಾರದಲ್ಲಿದ್ದಾಗಲೇ ಮಾಡಬೇಕಿತ್ತು. ಇವರನ್ನು ಹಿಡಿದುಕೊಂಡಿದ್ದವರು ಯಾರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನೆಲಮಂಗಲದಲ್ಲಿ ಬೆಳ್ಳಂಬೆಳಗ್ಗೆ ಸರಣಿ ಅಪಘಾತ
ಇಲ್ಲಿ ಪಾದಯಾತ್ರೆ ಅವಶ್ಯಕತೆ ಇಲ್ಲ. ಇಲ್ಲೊಂದು ತಾಂತ್ರಿಕ ಸಮಸ್ಯೆ ಇದೆ. ಬಿಜೆಪಿ ಅವರಿಗೆ ದುಡ್ಡಿನ ಸಮಸ್ಯೆ ಇದೆ. ಯೋಜನೆಗೆ ಅನುಮತಿ ಸಿಕ್ಕಿದರೆ ಕೆಲಸ ಮಾಡಲು ದುಡ್ಡೆಲ್ಲಿ ತರೋದು ಅನ್ನೋ ಸಮಸ್ಯೆ ಇದೆ. ಪಾದಯಾತ್ರೆ ಮಾಡೋದ್ರಿಂದ ಇವರಿಗೆ ಅನುಮತಿ ಸಿಗುತ್ತಾ? ಇವರ ಪಾದಯಾತ್ರೆಯಿಂದಾಗಿ ಕೇಂದ್ರ ಸರ್ಕಾರ ಇನ್ನು ಬಿಗಿಯಾಗಲಿದೆ. ಒಪ್ಪಿಗೆ ಕೊಡೋದನ್ನು ನಿಲ್ಲಿಸುತ್ತಾರೆ. ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಮುಂದಿನ ಸಭೆಯಲ್ಲಿ ಕ್ಲಿಯರೆನ್ಸ್ ಸಿಗಲಿದೆ ಎಂದಿದ್ದರು. ಈಗ ಇವರ ಪಾದಯಾತ್ರೆಯಿಂದ ಮತ್ತೆ ಮುಂದೆ ಹೋಗಲಿದೆ ಎಂದರು.