ರಾಮನಗರ: ಬಿಡದಿ ಟೌನ್‌ಶಿಪ್ (Bidadi Township) ವಿರುದ್ಧ ರೈತರ ಅಹೋರಾತ್ರಿ ಹೋರಾಟ ಹಿನ್ನೆಲೆ ಬಿಡದಿ ಹೋಬಳಿಯ ಭೈರಮಂಗಲ ಹಾಗೂ ಕಂಚುಗಾರನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ರೈತರ ಜೊತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಸಭೆ ನಡೆಸಿದ್ದಾರೆ.
ಭಾನುವಾರ ಸಂಜೆ ಬಿಡದಿ ತೋಟದ ಮನೆಯಲ್ಲಿ ರೈತರ ಜೊತೆ ಮಾತುಕತೆ ನಡೆಸಿ, ಹೋರಾಟಕ್ಕೆ ಸಾಥ್ ನೀಡುವುದಾಗಿ ಧೈರ್ಯ ತುಂಬಿದ್ದಾರೆ. ಕೃಷಿ ಭೂಮಿಯನ್ನ ಭೂಸ್ವಾಧೀನ ಮಾಡದಂತೆ ದೊಡ್ಡಮಟ್ಟದ ಹೋರಾಟದ ಅವಶ್ಯಕತೆ ಇದೆ. ವಿಧಾನಸೌಧ ಚಲೋ ಮಾಡುವ ಬಗ್ಗೆಯೂ ಚಿಂತನೆ ಮಾಡೋಣ ಎಂದು ಹೆಚ್‌ಡಿಕೆ ರೈತರಿಗೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಮೋಹನ್ ಭಾಗವತ್ ದೇಶದ ಸಮಸ್ಯೆ ಬಗ್ಗೆ ಮೊದಲು ಮಾತಾಡಲಿ: ಪ್ರದೀಪ್ ಈಶ್ವರ್
ಇನ್ನೂ ಕಾನೂನು ಹೋರಾಟಕ್ಕೂ ವಕೀಲರ ವ್ಯವಸ್ಥೆ ಮಾಡುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ. ಶೀಘ್ರದಲ್ಲೇ ಡಿಸಿ ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಸಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಜಂಟಿ ಸರ್ವೇ ಕಾರ್ಯಕ್ಕೆ ತಡೆ ನೀಡುವ ಬಗ್ಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದ್ದು, ಹೋರಾಟದಲ್ಲಿ ಸ್ವತಃ ಹೆಚ್‌ಡಿಕೆ ಭಾಗಿಯಾಗುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ದೇಶದ್ರೋಹಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ – ಸಿಎಂ ನಿವಾಸಕ್ಕೆ ಬಿಜೆಪಿಯಿಂದ ಮುತ್ತಿಗೆ ಯತ್ನ

