Connect with us

Districts

ಹೆಚ್‍ಡಿಕೆ ವಿಕಾಸ ಯಾತ್ರೆ ಆರಂಭ- ಸಿಎಂ ಸ್ಪರ್ಧಿಸಲಿರುವ ಕ್ಷೇತ್ರದಿಂದ ರಣಕಹಳೆ

Published

on

ಮೈಸೂರು: ಇಂದಿನಿಂದ ಕುಮಾರಪರ್ವ ಮತ್ತು ವಿಕಾಸ ಯಾತ್ರೆ ಶುರುವಾಗಿದೆ. ಚಾಮುಂಡಿಬೆಟ್ಟದಲ್ಲಿ ಪತ್ನಿ ಅನಿತಾ ಜೊತೆಯಲ್ಲಿ ವಿಕಾಸ ವಾಹಿನಿ ಬಸ್ ಏರಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ವಿಕಾಸಯಾತ್ರೆ ಆರಂಭಿಸಿ ಸಿಎಂ ಸ್ಪರ್ಧಿಸಲಿರುವ ಚಾಮುಂಡೇಶ್ವರಿ ಕ್ಷೇತ್ರದತ್ತ ಹೊರಟರು.

ಇದಕ್ಕೂ ಮುನ್ನ ಬೆಳ್ಳಂಬೆಳಗ್ಗೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಮಾಜಿ ಪ್ರಧಾನಿ ದೇವೇಗೌಡ ದಂಪತಿ ಮತ್ತು ಕುಮಾರಸ್ವಾಮಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ರು. ಮಾಜಿ ಪ್ರಧಾನಿಗೆ ಎಂಎಲ್‍ಸಿ ಶರವಣ, ಜೆಡಿಎಸ್ ಕಾರ್ಯಕರ್ತರು ಸಾಥ್ ನೀಡಿದ್ರು. ನಂತರ ಮೈಸೂರಿನ ಉತ್ತನಹಳ್ಳಿ ದೇವಾಲಯಲ್ಲಿ ದೊಡ್ಡಗೌಡರ ಕುಟುಂಬ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ರೆಬೆಲ್ ಶಾಸಕರು ನನಗೆ ಸವಾಲೇ ಅಲ್ಲ ಅಂದ್ರು. ಕೊನೆ ಕ್ಷಣದಲ್ಲಿ ಪಕ್ಷಕ್ಕೆ ಬರುವವರಿಗೆ ರೆಡ್ ಕಾರ್ಪೆಟ್ ಹಾಕಲ್ಲ. ಅವಕಾಶವಾದಿ ರಾಜಕಾರಣಕ್ಕೆ ಅವಕಾಶ ಕೊಡಲ್ಲ ಎಂದು ಸ್ಪಷ್ಟಪಡಿಸಿದ್ರು.

Click to comment

Leave a Reply

Your email address will not be published. Required fields are marked *