ರಾಮನಗರ: ಸರ್ಕಾರಿ ಶಾಲೆಗೆ 25 ಎಕರೆ ದಾನ ಮಾಡಲು ದೊಡ್ಡ ಮಹಾರಾಜರ ವಂಶಸ್ಥರ? ಜನರ ಮುಂದೆ ಎಲ್ಲವನ್ನೂ ಇಡಲಿ. ಸುಳ್ಳು ಹೇಳಲು ಇತಿಮಿತಿ ಇರಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.
ಸರ್ಕಾರಿ ಶಾಲೆಗೆ 25 ಎಕರೆ ದಾನ ನೀಡೀದ್ದೇನೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಂಕುಂದ ಗ್ರಾಮದಲ್ಲಿ ಮಾತನಾಡಿದ ಅವರು, ನಾನು ದುಡ್ಡು ಕೊಟ್ಟಿಲ್ಲ, ಆದರೆ ರಾಜ್ಯಕ್ಕೆ ಶಿಕ್ಷಣ ಇಲಾಖೆ ಕಾರ್ಯಕ್ರಮ ಕೊಟ್ಟಿದ್ದೇನೆ. ನಾನು ಸಿಎಂ ಆಗುವ ಮೊದಲು ಕಾಲೇಜು, ಹೈಸ್ಕೂಲ್ ಎಷ್ಟಿತ್ತು? 20 ತಿಂಗಳು ಸಿಎಂ ಆದಾಗ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ಏನು? 20 ವರ್ಷ ರಾಜ್ಯ ಆಳಿ ಇವರ ಕೊಡುಗೆ ಏನು? ಜನರು ದೊಡ್ಡಾಲಹಳ್ಳಿಯಲ್ಲಿ ಮತ ಕೊಡಲ್ಲ ಯಾಕೆ? ಇವರು 25 ಎಕರೆ ಕೊಟ್ಟಿದ್ದಾರೋ, 25 ಗುಂಟೆ ಕೊಟ್ಟಿದ್ದಾರೋ ಗೊತ್ತಿಲ್ಲ. ನಾನು ಜನ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‌ನವರ ಗೊಡ್ಡು ಬೆದರಿಕೆಗೆ ನಾವು ಜಗ್ಗಲ್ಲ: ಶ್ರೀರಾಮುಲು
ಸರ್ಕಾರ ಕಿತ್ತೊಗೆಯಲು ಕಡಲೆಕಾಯಿ ಗಿಡ ಅಲ್ಲ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಕಡಲೆಕಾಯಿ ಗಿಡ ಕೀಳುತ್ತೇವೆ ಎಂದಿಲ್ಲ. ಸರ್ಕಾರವನ್ನೆ ಕಿತ್ತೊಗೆಯುತ್ತೇವೆ ಎಂದಿರೋದು. ಈ ಭ್ರಷ್ಟ ಸರ್ಕಾರ ಕಿತ್ತೊಗೆಯಬೇಕು ಎಂಬುದು ಜನರ ಆಸೆ. ಜನರ ಭಾವನೆಯನ್ನ ದೇವೇಗೌಡರು ಹೇಳಿದ್ದಾರೆ ಎಂದರು. ಇದನ್ನೂ ಓದಿ: ಕಾರವಾರ| ಜೆಸಿಬಿ ಆಪರೇಟರ್ ಮೇಲೆ ಕಾಡುಹಂದಿ ದಾಳಿ
ಮೈಸೂರಿನಲ್ಲಿ ಚಲುವರಾಯಸ್ವಾಮಿ ಕಿತ್ತಾಟದ ವಿಚಾರವಾಗಿ ಮಾತನಾಡಿದ ಅವರು, ಟ್ರಾನ್ಸಫರ್‌ನ ದುಡ್ಡಿನ ವ್ಯವಹಾರಕ್ಕೆ ಕಿತ್ತಾಡಿಕೊಂಡಿದ್ದಾರೆ. ಇದರ ಬಗ್ಗೆ ಸರ್ಕಾರವೇ ಹೇಳಬೇಕು ಅಷ್ಟೇ. ಓಪನ್ ಆಗಿ ಮಂತ್ರಿಯನ್ನ ಹೊಡೆಯುತ್ತಾರೆ ಅಂದರೆ ರಾಜ್ಯ ಎಲ್ಲಿಗೆ ಬಂದಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: `ಭಾಗ್ಯಲಕ್ಷ್ಮಿ’ ಯೋಜನೆಗೆ ಹಣ ಕೊಡಲಾರದಷ್ಟೂ ಸರ್ಕಾರ ದಿವಾಳಿಯಾಗಿದೆ: ಬಿಎಸ್‌ವೈ ಕಿಡಿ
ಮೇಕೆದಾಟಿಗೆ ಪರ್ಮಿಷನ್ ಕೊಟ್ಟರೆ ಮೂರೇ ವರ್ಷದಲ್ಲಿ ಅಣೆಕಟ್ಟು ನಿರ್ಮಾಣ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಮೊದಲು ಅವರ ಅಂಗ ಪಕ್ಷ ತಮಿಳುನಾಡಿನಲ್ಲಿ ಪರ್ಮಿಷನ್ ತೆಗೆದುಕೊಳ್ಳಬೇಕು. ತಮಿಳುನಾಡಿನಲ್ಲಿ ಪರ್ಮಿಷನ್ ತೆಗೆದುಕೊಂಡು ಬರಲಿ. ನಂತರ ನಾನು ಡೆಲ್ಲಿಯಲ್ಲಿ ಪರ್ಮಿಷನ್ ಕೊಡಿಸುತ್ತೇನೆ ಎಂದರು. ಇದನ್ನೂ ಓದಿ: ವಕ್ಫ್ ವಿಚಾರವಾಗಿ ಅಧಿಕಾರಿಗಳ ಪತ್ರ ವ್ಯವಹಾರ – ದಾಖಲೆ ಬಿಡುಗಡೆ ಮಾಡಿದ ಅಶೋಕ್