ಬೆಂಗಳೂರು: ವಿಧಾನಸೌಧದಲ್ಲೇ ಟೆರೆರಿಸ್ಟ್‌ಗಳನ್ನ ಇಟ್ಕೊಂಡು ಪರಪ್ಪನ ಅಗ್ರಹಾರದ (Parappana Agrahara) ಟೆರೆರಿಸ್ಟ್‌ಗಳ ಬಗ್ಗೆ ಏನ್ ಚರ್ಚೆ ಮಾಡ್ತೀರಾ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಬಗ್ಗೆ ಮಾತನಾಡಿದ ಅವರು, ಪರಪ್ಪನ ಅಗ್ರಹಾರದಲ್ಲಿ ಅಪರಾಧ ಮಾಡಿರುವವರ ರಕ್ಷಣೆಗೆ ಎಲ್ಲಾ ರೀತಿ ಸೌಲಭ್ಯಗಳನ್ನ ಕೊಡ್ತಿದ್ದಾರೆ. 3-4 ದಿನಗಳಿಂದ ವಿಡಿಯೋ ಹರಿದಾಡುತ್ತಿದೆ. ಸೆಂಟ್ರಲ್ ಜೈಲ್‌ನಲ್ಲಿ ಇದೇನು ಹೊಸದಲ್ಲ. ಹಿಂದೆ ಹಿರಿಯ ಅಧಿಕಾರಿಗಳ ನಡುವೆ ಘರ್ಷಣೆ ಆದಾಗ ದೊಡ್ಡ ರಾಜಕೀಯ ಆಗಿತ್ತು. ವಿಧಾನಸೌಧದಲ್ಲೇ ಟೆರೆರಿಸ್ಟ್‌ಗಳನ್ನ ಇಟ್ಕೊಂಡು ಪರಪ್ಪನ ಅಗ್ರಹಾರದ ಟೆರೆರಿಸ್ಟ್‌ಗಳ ಬಗ್ಗೆ ಏನು ಚರ್ಚೆ ಮಾಡ್ತೀರಾ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ಇದನ್ನೂ ಓದಿ: ಸರ್ಕಾರಿ ಕೆಲಸದ ಆಮಿಷ – ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಗೆಳೆಯನಿಂದ ಯುವತಿಗೆ 26 ಲಕ್ಷ ವಂಚನೆ
ಈ ಕುರಿತು ಗೃಹ ಸಚಿವರು ತನಿಖೆ ಮಾಡಿ, ಸತ್ಯಾಸತ್ಯತೆ ತಿಳಿದುಕೊಳ್ತೀನಿ ಅಂದಿದ್ದಾರೆ. ಜೈಲಿನಲ್ಲಿ ಏನ್ ನಡೆಯುತ್ತೆ ಅನ್ನೋದು ಪರಮೇಶ್ವರ್ ಅವರಿಗೆ ಗೊತ್ತಿಲ್ಲವಾ? ಮಾಧ್ಯಮಗಳಲ್ಲಿ ಯಾವ ರೀತಿ ಖೈದಿಗಳಿಗೆ ಸೌಲಭ್ಯ ಕೊಟ್ಟಿದ್ದಾರೆ ಅಂತ ವಿಡಿಯೋ ಬರ್ತಿದೆ. ರಾಜ್ಯದ ಜನತೆ ಮುಂದೆ ಎಲ್ಲವನ್ನು ತೋರಿಸಿದ್ದಾರೆ. ಹೀಗೆ ಇರೋವಾಗ ಯಾರ ಬಗ್ಗೆ ಯಾವ ವಿಷಯಕ್ಕೆ ತನಿಖೆ ಮಾಡ್ತೀರಾ ನೀವು? ನಿಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆ. ತನಿಖೆ ಮತ್ತೆ ಮಾಡಿ ಏನ್ ಮಾಡ್ತೀರಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ವ್ಯವಸ್ಥೆ ಯಾಕೆ ಹದಗೆಟ್ಟಿದೆ ಅಂತ ಸಿಎಂ ಮತ್ತು ಗೃಹ ಸಚಿವರನ್ನ ಕೇಳಬೇಕು. ಈ ಸರ್ಕಾರದ ವೈಫಲ್ಯ ಪ್ರತಿನಿತ್ಯ ಕಾಣ್ತಿದೆ. ಈ ಸರ್ಕಾರ ಸರಿಯಾದ ರೀತಿಯಲ್ಲಿ ನಡೆದಿದ್ದರೆ, ಸರ್ಕಾರವನ್ನು ಸರಿಯಾಗಿ ನಡೆಸಿದ್ದರೆ ಏನು ಆಗ್ತಿರಲಿಲ್ಲ. ಸಿಎಂ ಅವರು ಬಿಜೆಪಿ ಅವರಿಗೆ ಮಾನ ಇಲ್ಲ ಅಂತ ಹೇಳಿದ್ದಾರೆ. ಹಾಗಾದರೆ ಇವರಿಗೆ ಏನಿದೆ? ಸಿಎಂ ಅವರಿಗೆ ಏನಿದೆ? ರಾಜ್ಯದ ಸಿಎಂ ಆಗಿ ಅನುಭವ ಎಷ್ಟಿದೆ ನಿಮಗೆ. ಇಂತಹ ಅನುಭವ ಇಟ್ಟುಕೊಂಡು ಈ ರೀತಿ ನಡೆಯುವುದನ್ನು ಇಷ್ಟೊಂದು ಲೈಟ್ ಆಗಿ ತಗೊಂಡಿದ್ದೀರಾ. ಏನು ನಡೆದೇ ಇಲ್ಲದಂತೆ ಸಿಎಂ ಮಾತಾಡ್ತಾರೆ. ತಿಳಿದುಕೊಳ್ತೀನಿ ಅಂತ ಹೇಳ್ತಾರೆ. ನನಗೇನು ವಿಷಯ ಗೊತ್ತಿಲ್ಲ. ಸಿಎಂಗೆ ಇಂಟಲಿಜೆನ್ಸ್ ಇಲ್ಲವಾ. ಪ್ರತಿದಿನ ಬೆಳಗ್ಗೆ ಸಿಎಂ ಹತ್ತಿರ ಬರೋರು ಏನ್ ಮಾಹಿತಿ ಕೊಡ್ತಾರೆ? ಈ ರೀತಿ ಲಘುವಾಗಿ ಮಾತಾಡಿಕೊಂಡು ಕಾಲ ಹರಣ ಮಾಡ್ತಿದ್ದಾರೆ. ಇದೆಲ್ಲವನ್ನು ನೋಡಿದ್ರೆ ಇದೆಲ್ಲದ್ದಕ್ಕೂ ಇವರೇ ಪ್ರೋತ್ಸಾಹ ಕೊಡ್ತಾರೇನೋ ಅಂತ ಜನರ ಅಭಿಪ್ರಾಯ ಇದೆ ಎಂದಿದ್ದಾರೆ.
ಪರಮೇಶ್ವರ್ ರಾಜೀನಾಮೆಗೆ ಬಿಜೆಪಿ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜೀನಾಮೆ ಕೊಡಿ ಅಂತ ಒತ್ತಡ ಹಾಕಿದ ಕೂಡಲೇ ರಾಜೀನಾಮೆ ಕೊಡೋ ಕಾಲನಾ ಇದು? ಯಾವುದೇ ಕಾರಣಕ್ಕೂ ಈ ಸರ್ಕಾರದಲ್ಲಿ ರಾಜೀನಾಮೆ ಕೊಡುವ ಪಾವಿತ್ರ್ಯತೆ, ನೈತಿಕತೆ ಉಳಿಸಿಕೊಂಡವರು ಯಾರು ಇಲ್ಲ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಟೆರೆರಿಸ್ಟ್‌ಗಳು ಇದ್ದಾರೆ ಎಂಬ ತಮ್ಮ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಅವರು, ವಿಧಾನಸೌಧದ ಟೆರೆರಿಸ್ಟ್ ಗಳಿಗೂ, ವಿಧಾನಸೌಧದಲ್ಲಿ ಇರೋ ಟೆರೆರಿಸ್ಟ್‌ಗಳಿಗೆ ವ್ಯತ್ಯಾಸ ಇದೆ. ವಿಧಾನಸೌಧದಲ್ಲಿ ಇರೋ ಟೆರೆರಿಸ್ಟ್‌ಗಳು ಯಾರು ಅಂತ ಮಾಧ್ಯಮಗಳಿಗೆ ಗೊತ್ತಿದೆ. ಜನರೂ ಅ ಟೆರೆರಿಸ್ಟ್‌ಗಳ ಬಗ್ಗೆ ಮಾತಾಡ್ತಾರೆ. ಭಯವೂ ಬೀಳ್ತಾರೆ. ಪರಪ್ಪನ ಅಗ್ರಹಾರದ ಟೆರೆರಿಸ್ಟ್‌ಗಳಿಗಿಂತ ವಿಧಾನಸೌಧದಲ್ಲಿ ಇರೋ ಟೆರೆರಿಸ್ಟ್‌ಗಳು ಇನ್ನು ಡೇಂಜರ್ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸ್‌ಗೆ ಟ್ವಿಸ್ಟ್| ಫ್ಯಾಶನ್ ಡಿಸೈನರ್ ವಿರುದ್ಧ ಮೊದಲೇ ದೂರು ದಾಖಲಿಸಿದ್ದ ಇವಿಪಿ ಮಾಲೀಕ ಸಂತೋಷ್ ರೆಡ್ಡಿ

