– ಮ್ಯಾಚ್ ನೋಡೋಕೆ ಸಮಯ ಇದೆ, ಕರೆಂಟ್ ಸಮಸ್ಯೆ ಪರಿಹಾರ ಮಾಡೋಕಾಗಲ್ವಾ ಎಂದ ಮಾಜಿ ಸಿಎಂ
ಬೆಂಗಳೂರು: ರಾಜ್ಯದಲ್ಲಿ ಜನ ಸಮಸ್ಯೆಯಿಂದ ಬಳಲುತ್ತಿದ್ದರೆ ಇವರು ಕ್ರಿಕೆಟ್ ಮ್ಯಾಚ್ (Cricket Match) ನೋಡೊಕೆ ಹೋಗಿದ್ದಾರೆ. ಅಲ್ಲೇನು ಪಾಕಿಸ್ತಾನಕ್ಕೆ (Pakistan) ಬೆಂಬಲ ಕೊಡೋಕೆ ಹೋಗಿದ್ರಾ? ಅಥವಾ ಆಸ್ಟ್ರೇಲಿಯಾಗೆ ಬೆಂಬಲ ಕೊಡೋಕೆ ಹೋಗಿದ್ರಾ? ಅಂತಾ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದ್ದಾರೆ.
Advertisement
ಜೆಪಿ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜನ ಸಮಸ್ಯೆಯಿಂದ ಬಳಲುತ್ತಿದ್ದರೆ ಇವರು ಕ್ರಿಕೆಟ್ ಮ್ಯಾಚ್ ನೋಡೊಕೆ ಹೋಗಿದ್ದಾರೆ. ಭಾರತ ತಂಡ (Team India) ಆಡುವಾಗ ಬೆಂಬಲ ಕೊಡುತ್ತಿದ್ದರೆ ಪರವಾಗಿಲ್ಲ. ಆದ್ರೆ ಬೇರೆ ಮ್ಯಾಚ್ ನೋಡೋದಕ್ಕೆ ಇಡೀ ಸಿಎಂ, ಡಿಸಿಎಂ, ಪಟಾಲಂ ಹೋಗಿದೆ. ಬರದ ಸಮಸ್ಯೆ ಇದ್ದರು ಮ್ಯಾಚ್ ನೋಡೋಕೆ ಹೋಗೋದು ಎಷ್ಟು ಸರಿ? ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ್ ಜಿಂದಾಬಾದ್ ಅನ್ನದೇ ಇನ್ನೇನು ಹೇಳ್ಬೇಕು? – ಪೊಲೀಸ್ ಅಧಿಕಾರಿ ಜೊತೆ ಪಾಕ್ ಅಭಿಮಾನಿ ವಾಗ್ವಾದ
Advertisement
Advertisement
ರಾತ್ರಿ 8 ಗಂಟೆ ಮ್ಯಾಚ್ ನೋಡೊಕೆ ನಿಮಗೆ ಸಮಯ ಇದೆ. ಜನರ ಕರೆಂಟ್ ಸಮಸ್ಯೆಗೆ ಪರಿಹಾರ ಮಾಡೋಕೆ ಆಗುತ್ತಿಲ್ವಾ..? ಮೊಸಳೆಯನ್ನ ತಂದು ಪ್ರತಿಭಟನೆ ಮಾಡ್ತಿದ್ದಾರೆ. ಇಂತಹ ಸಮಯದಲ್ಲಿ ಮ್ಯಾಚ್ ನೋಡೋ ಅವಶ್ಯಕತೆ ಇತ್ತಾ? ಎಂದು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ. ಇದನ್ನೂ ಓದಿ: World Cup 2023: ಒಂದೇ ಓವರ್‌ನಲ್ಲಿ 24 ರನ್ ಚಚ್ಚಿಸಿಕೊಂಡು ಕೆಟ್ಟ ದಾಖಲೆ ಬರೆದ ಹ್ಯಾರಿಸ್ ರೌಫ್
Advertisement
ಶುಕ್ರವಾರ (ಅ.20) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಮ್ಯಾಚ್ ವೀಕ್ಷಣೆ ಮಾಡಿದ್ದರು. ಸಿಎಂ ಜೊತೆಗೆ VIP ವಿಂಗ್‌ನಲ್ಲಿ ಕುಳಿತು ಸಚಿವ ಬೈರತಿ ಸುರೇಶ್, ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಮತ್ತು ನಸೀರ್ ಅಹಮದ್ ಕ್ರಿಕೆಟ್ ವೀಕ್ಷಿಸಿದ್ದರು. 2023 ಐಪಿಎಲ್ ಟೂರ್ನಿ ವೇಳೆಯಲ್ಲೂ ಸಿದ್ದರಾಮಯ್ಯ ಅವರು ಆರ್‌ಸಿಬಿ ಮ್ಯಾಚ್ ವೀಕ್ಷಣೆ ಮಾಡಿದ್ದರು. ಇದನ್ನೂ ಓದಿ: World Cup 2023: ಸ್ಪಿನ್ ದಾಳಿಗೆ ಮಕಾಡೆ ಮಲಗಿದ ಪಾಕ್ – ಆಸೀಸ್‌ಗೆ 62 ರನ್ ಭರ್ಜರಿ ಜಯ, ಪಾಕ್‌ಗೆ ಹೀನಾಯ ಸೋಲು
Web Stories