ಮೋದಿ ಕಾಡು ಪ್ರಾಣಿಗಳನ್ನು ನೋಡಿದರೆ ಜನ ವೋಟು ಒತ್ತುತ್ತಾರಾ: ಹೆಚ್ಡಿಕೆ ವ್ಯಂಗ್ಯ

Public TV
1 Min Read
HD Kumaraswamy 5

ಬೆಂಗಳೂರು: ಮೋದಿ (Narendra Modi) ಕಾಡು ಪ್ರಾಣಿಗಳನ್ನು ನೋಡಲು ಬಂದ ತಕ್ಷಣ ಜನ ವೋಟು ಒತ್ತಿ ಬಿಡ್ತಾರಾ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (H.D.Kumaraswamy) ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸಂಕಷ್ಟದಲ್ಲಿ, ಪ್ರವಾಹದಿಂದ ಜನ ಬೀದಿಗೆ ಬಂದಾಗ ಮೋದಿ ಬರಲಿಲ್ಲ. ಈಗ ಚುನಾವಣೆ ಹೊತ್ತಿನಲ್ಲಿ ಸಫಾರಿಗೆ (Safari) ಬಂದಿದ್ದಾರೆ. ವನ್ಯಜೀವಿಗಳನ್ನು ರಕ್ಷಣೆ ಮಾಡಬೇಕು. ಆದರೆ ವನ್ಯ ಜೀವಿಗಳಿಂದ ಎಷ್ಟು ದಾಳಿ ಆಗಿದೆ ಎಂಬ ಮಾಹಿತಿ ಮೋದಿಯವರಿಗೆ ಇದೆಯೇ? ದಾಳಿಗೊಳಗಾದ ಒಂದು ಕುಟುಂಬಕ್ಕಾದರೂ ಮೋದಿ ಭೇಟಿ ಕೊಟ್ಟಿದ್ದಾರಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ವಿಕಲಚೇತನ ಕಾರ್ಯಕರ್ತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಮೋದಿ

ಅರಣ್ಯ ಪ್ರದೇಶಗಳಲ್ಲಿ ಆಹಾರದ ಕೊರತೆ ಇದೆ ಎಂಬ ವರದಿಯಿದೆ. ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ವಿಚಾರವಾಗಿ ಚರ್ಚೆಯಾಗಿದೆ. ಈ ಬಗ್ಗೆ ಮೋದಿಯವರು ಗಮನ ಹರಿಸಿದ್ದಾರಾ? ಕೇವಲ ಸೂಟು ಬೂಟು ಹಾಕಿಕೊಂಡು ಬಂದರೆ ಆಗುತ್ತದೆಯೇ? ನಾಡಿನ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ: ಕೋವಿಡ್ ಕೇಸ್ ತೀವ್ರ ಹೆಚ್ಚಳ – ಕೇರಳ, ಹರಿಯಾಣ, ಪುದುಚೇರಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

Share This Article