ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಬಂದ್ಮೇಲೆ ದೇಶ ಅಭಿವೃದ್ಧಿಯಾಗಿಲ್ಲ. ನಾವು ಹುಟ್ಟೋಕೆ ಮುಂಚೆಯೇ ದೇಶ ಅಭಿವೃದ್ಧಿಯಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಹುಟ್ಟುವ ಮುಂಚೆಯೇ ಅಭಿವೃದ್ಧಿಯಾಗಿದೆ, ನೆಹರೂ ಕಾಲದಲ್ಲಿ ಸವಾಲಾಗಿತ್ತು ಅಷ್ಟೇ. ಗುಜರಾತ್‌ಗೆ (Gujarat) ಹೋಗಿ ನೋಡಿದ್ರೆ ಅಲ್ಲಿನ ಪರಿಸ್ಥಿತಿ ಹೇಗಿದೆ ಅಂತಾ ಗೊತ್ತಿದೆ. ರಾಜ್ಯದಲ್ಲಿ 73 ಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ. ಗುಜರಾತ್ ಫೈಲ್ಸ್ ಓದಿದ್ದೇನೆ, ಅವರನ್ನ ಹೇಗೆ ಓಡಿಸಿದರೂ ಗೊತ್ತಿದೆ ಎಂದು ಕುಟುಕಿದ್ದಾರೆ.
Advertisement
Advertisement
ಮೈಸೂರು-ಬೆಂಗಳೂರು ದಶಪಥ (Bengaluru Mysuru ExpressWay) ರಸ್ತೆ ಧರ್ಮಕ್ಕೆ ಕೊಟ್ಟಿಲ್ಲ, ನಾನು 14 ತಿಂಗಳಲ್ಲಿ 9 ಮೀಟಿಂಗ್ ಮಾಡಿದ್ದೇನೆ. ಆಗ ನಾನು ಏನು ಮಾಡಿದೆ ಅಂತಾ ಜನಕ್ಕೆ ಗೊತ್ತು, ರೇವಣ್ಣನ ಕೆಲಸವೂ ಗೊತ್ತು ಎಂದಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಹಾಡಹಗಲೇ ಶೂಟೌಟ್ – ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು
Advertisement
Advertisement
ಜೆಡಿಎಸ್ (JDS) ಈ ಬಾರಿ 123 ಸ್ಥಾನಗಳ ಗುರಿ ಹೊಂದಿದ್ದು, ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಯಾವುದೇ ಗೊಂದಲವಿಲ್ಲ. ಆದ್ರೆ ಬಿಜೆಪಿ-ಕಾಂಗ್ರೆಸ್ (BJP-Congress) ಇನ್ನೂ ಪಟ್ಟಿಯೇ ಬಿಡುಗಡೆ ಮಾಡಿಲ್ಲ. ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಅಲೆ ಇದೆ. ನಮ್ಮ ಪಕ್ಷದ ಬಗೆ ಯಾರೇ ಮಾತನಾಡಿದರೂ ಈ ಬಾರಿ ನಡೆಯಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅರ್ಕಾವತಿ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ: ನಳಿನ್ ಕುಮಾರ್ ಕಟೀಲ್
I have read your article carefully and I agree with you very much. This has provided a great help for my thesis writing, and I will seriously improve it. However, I don’t know much about a certain place. Can you help me? https://www.gate.io/zh-tw/signup/XwNAU
Your point of view caught my eye and was very interesting. Thanks. I have a question for you. https://www.binance.com/bg/join?ref=IJFGOAID