ಬೆಂಗಳೂರು: ರಾಜ್ಯ ಸರ್ಕಾರ ಜಿಎಸ್‍ಟಿಯನ್ನು ಸಮರ್ಪಕವಾಗಿ ಜಾರಿಗೆ ತರದೆ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣ ತಮ್ಮ ಫೇಸ್ ಬುಕ್ ಖಾತೆಯಲ್ಲಿ, ರಾಜ್ಯ ಸರ್ಕಾರ ಮುಂದಿನ ಚುನಾವಣೆಗಾಗಿ ಭರಪೂರ ಯೋಜನೆಗಳ ಮೂಲಕ ಮತ ಬೇಟೆಯಾಡುವ ಕಡೆ ಗಮನವರಿಸುತ್ತಿದೆ. ಆದರೆ ಜಿಎಸ್‍ಟಿ ಸಮರ್ಪಕವಾಗಿ ಜಾರಿಯಾಗದೆ ರಾಜ್ಯದ 30 ಲಕ್ಷಕ್ಕೂ ಅಧಿಕ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಎಚ್ಚರಿಸಿದ್ದಾರೆ.
Advertisement
ರಾಜ್ಯ ಸರ್ಕಾರದ ಮುಂದೆ ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಆದರೆ ರಾಜ್ಯ ಸರ್ಕಾರ ಈ ವಿಚಾರವಾಗಿ ಜಿಎಸ್‍ಟಿ ನಿರ್ವಹಣ ಮಂಡಳಿಯ ಮುಂದೆ ಸಮರ್ಥ ವಾದವನ್ನು ಮಂಡಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಎಪಿಎಂಸಿ, ಟ್ರಾವೆಲ್, ಹೋಟೆಲ್, ಟೆಕ್ಸ್ಟೈಲ್ಸ್, ಸಾರಿಗೆ, ಕಟ್ಟಡ ನಿರ್ಮಾಣ ಇನ್ನೂ ಮುಂತಾದ ವ್ಯಾಪಾರ ಉದ್ಯಮಗಳು ತೊಂದರೆಗೆ ಸಿಲುಕಿದ್ದಾರೆಂದು ಅಸಮಧಾನ ಹೊರಹಾಕಿದ್ದಾರೆ.