ಮೈಸೂರು: ನಾನು ಯಾವ ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಕಾರ್ಯಕರ್ತನ ಮೇಲೆ ಕಪಾಳ ಮೋಕ್ಷ ಮಾಡಿಲ್ಲ. ಬದಲಿಗೆ ಕಾರ್ಯಕರ್ತನನ್ನ ಮೇಲೆತ್ತಿ ಬುದ್ಧಿ ಹೇಳಿದೆ ಅಷ್ಟೇ. ನಾನು ಎಂದಿಗೂ ಕಾರ್ಯಕರ್ತರ ವಿಚಾರದಲ್ಲಿ ತಾಳ್ಮೆ ಕಳೆದುಕೊಳ್ಳುವುದಿಲ್ಲ ಎಂದು ಹೇಳಿದರು.
Advertisement
ಪ್ರೇಮ್ ಕುಮಾರ್ ಅವರು ಅವರು ಕಾಲಿಗೆ ಬಿದ್ದು ಟಿಕೆಟ್ ಕೇಳಿದರು. ನಾನೇನು ಬಿ.ಫಾರಂ ನೀಡಲು ಬಂದಿಲ್ಲ ಅಂತ ಬುದ್ಧಿ ಹೇಳಿದ್ದೇನೆ. ಅವರೆಲ್ಲರೂ ನನ್ನ ಪರಿಚಿತ ಕಾರ್ಯಕರ್ತರು. ಗಲಾಟೆ ಗೊಂದಲ ಏನೂ ಆಗಿಲ್ಲ. ಟಿಕೆಟ್ ಕೇಳುವ ಉತ್ಸಹದಿಂದ ಈ ಘಟನೆ ಆಗಿದೆ. ಕಪಾಳಮೋಕ್ಷ ಮಾಡುವಂತ ಯಾವ ಘಟನೆಯೂ ಅಲ್ಲಿ ಆಗಿಲ್ಲ. ಇಂತಹ ಘಟನೆಯಿಂದ ಪಕ್ಷ ಸಂಘಟನೆಗೆ ಸಮಸ್ಯೆ ಆಗುವುದಿಲ್ಲ. ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ತಿಳಿಸಿದರು.
Advertisement
ನಡೆದಿದ್ದು ಏನು? ಸಾರಾ ಕನ್ವೆನ್ಷನ್ ಹಾಲ್ ನಲ್ಲಿ ಇಂದು ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಹೆಚ್‍ಡಿಕೆ ಸಮ್ಮುಖದಲ್ಲಿ ಹುಣಸೂರು ಕ್ಷೇತ್ರದಿಂದ ಜಿ.ಟಿ.ದೇವೆಗೌಡ ಪುತ್ರ ಹರೀಶ್‍ಗೌಡಗೆ ಟಿಕೆಟ್ ನೀಡುವಂತೆ ಏರುಧ್ವನಿಯಲ್ಲಿ ಕಾರ್ಯಕರ್ತರು ಕೂಗಾಡಿದ್ದರು. ಈ ಕೂಗಾಟದಿಂದಾಗಿ ಕೆಲ ಕಾಲ ಅಲ್ಲಿ ಗೊಂದಲ ಉಂಟಾಗಿತ್ತು.
Advertisement
ನಾನು ಉದ್ವೇಗದಲ್ಲಿದ್ದೆ:
ಈ ಘಟನೆಯ ಬಳಿಕ ಮೈಸೂರಿನ ಜಯನಗರದಲ್ಲಿ ಕುಮಾರಸ್ವಾಮಿ ಅವರನ್ನು ಪ್ರೇಮ್ ಕುಮಾರ್ ಭೇಟಿಯಾಗಿದ್ದರು. ಪ್ರೇಮ್ ಕುಮಾರ್ ರನ್ನ ಪಕ್ಕದಲ್ಲೇ ಕುರಿಸಿಕೊಂಡು ಹೆಚ್‍ಡಿಕೆ ಮಾತನಾಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರೇಮ್ ಕುಮಾರ್, ಹೆಚ್‍ಡಿಕೆ ನನ್ನ ಮೇಲೆ ಕಪಾಳ ಮೋಕ್ಷ ಮಾಡಿಲ್ಲ. ನಾನು ಜಿಟಿಡಿ ಪುತ್ರನಿಗೆ ಟಿಕೆಟ್ ಕೇಳಿದ್ದು ನಿಜ. ನಂತರ ಟಿಕೆಟ್ ಬಗ್ಗೆ ಈಗಲೇ ಚರ್ಚಿಸಿಲ್ಲ ಅಂತ ಹೇಳಿ ಮನವರಿಕೆ ಮಾಡಿಕೊಟ್ಟರು. ಉದ್ವೇಗದಲ್ಲಿದ್ದ ನನ್ನನ್ನು ಕುಮಾರಣ್ಣ ಸಮಾಧಾನ ಮಾಡಿದರು.ಅವರು ಯಾವುದೇ ಕಾರಣಕ್ಕೂ ನನಗೆ ಕಪಾಳ ಮೋಕ್ಷ ಮಾಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.