ಬೆಳಗ್ಗೆ ನಮ್ಮ ತೋಟದಲ್ಲಿ ಜೋರು ಶಬ್ಧದ ಅನುಭವ ಆಯ್ತು: ಎಚ್‍ಡಿಕೆ

Public TV
1 Min Read
HD KUMARASWAMY 3

ಚಿಕ್ಕಬಳ್ಳಾಪುರ: ಇಂದು ಬೆಳಗ್ಗೆ ನಮ್ಮ ತೋಟದಲ್ಲಿ ಜೋರು ಶಬ್ಧವಾಗಿ ಕಂಪಿಸಿದಂತಹ ಅನುಭವ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

earthquake 1 2

ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. ನಾನು ರಾಮನಗರದಿಂದ ಚಿಕ್ಕಬಳ್ಳಾಪುರಕ್ಕೆ ಹೊರಡಬೇಕಾದರೆ ಶಬ್ಧ ಮತ್ತು ಕಂಪಿಸಿದ ಅನುಭವ ಆಯಿತು. ನಾನು ಸಹ ಮೊದಲು ಗಣಿಗಾರಿಕೆಯ ಶಬ್ದ ಅಂತಲೇ ಅಂದುಕೊಂಡಿದ್ದೆ. ಬಳಿಕ ಎಲ್ಲಾ ಕಡೆ ಈ ರೀತಿ ಶಬ್ಧ ಮತ್ತು ಭೂಮಿ ಕಂಪಿಸಿದ ಅನುಭವದ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದೆ ಎಂದರು. ಇದನ್ನೂ ಓದಿ: ಬೆಂಗಳೂರು, ಮಂಡ್ಯದ ಹಲವೆಡೆ ಕೇಳಿಸಿತು ದೊಡ್ಡ ಸದ್ದು- ಭಯಗೊಂಡು ಹೊರಬಂದ ಜನತೆ

ನಮ್ಮ ತೋಟದ ಸುತ್ತಮುತ್ತಲು ಕಲ್ಲು ಕ್ವಾರೆ ನಡೆಸುತ್ತಾರೆ ಅದನ್ನು ಬ್ಲಾಸ್ಟ್ ಮಾಡಲು ಮದ್ದು ಹೊಡಿಸಿರಬಹುದು ಅಂದುಕೊಂಡಿದ್ದೆ. ಅಷ್ಟು ದೊಡ್ಡ ಮಟ್ಟದಲ್ಲಿ ಶಬ್ಧ ಬಂದಿರುವುದನ್ನು ನಾನು ಗಮನಿಸಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಭಾರತ-ಮ್ಯಾನ್ಮಾರ್ ಗಡಿಯಲ್ಲಿ 6.1 ತೀವ್ರತೆಯ ಭೂಕಂಪ

ಇಂದು ಮಧ್ಯಾಹ್ನ 12:15ರ ಸುಮಾರಿಗೆ 10 ರಿಂದ 15 ನಿಮಿಷಗಳ ಅಂತರದಲ್ಲಿ 2 ಭಾರೀ ಬೆಂಗಳೂರಿನ ಆರ್.ಆರ್ ನಗರ, ನಾಗರಭಾವಿ, ಕೆಂಗೇರಿ, ಯಶವಂತಪುರ, ಕಗ್ಗಲಿಪುರ, ಹೆಮ್ಮಿಗೆಪುರ, ಜ್ಞಾನಭಾರತಿ, ಉಲ್ಲಾಳ ಸೇರಿದಂತೆ ಹಲವೆಡೆ ದೊಡ್ಡ ಶಬ್ಧ ಕೇಳಿ ಬಂದಿದೆ. ಇದರಿಂದಾಗಿ ಬೆಂಗಳೂರಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯಾವುದೇ ಭೂಕಂಪನ ಆಗಿಲ್ಲ – ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದಿಂದ ಸ್ಪಷ್ಟನೆ

ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಭೂಗರ್ಭ ತಜ್ಞ ಪ್ರಕಾಶ್ ಅವರು, ಬಾಂಗ್ಲಾದೇಶದ ಚಿತ್ತಂಗಾಂಗ್‍ನಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ. ಅಲ್ಲಿನ ತೀವ್ರತೆ ಇಲ್ಲಿ ಆಗಿದೆ. ಬೆಂಗಳೂರಿನಲ್ಲಿ ಕಂಪಿಸಿದರ ಬಗ್ಗೆ ರಿಕ್ಟರ್ ಮಾಪಕದಲ್ಲಿ ಕಂಪನ ದಾಖಲಾಗಿಲ್ಲ. ಹೀಗಾಗಿ ಯಾರೂ ಆತಂಕ ಪಡುವ ಅವಶ್ಯಕತೆ ಅಗತ್ಯವಿಲ್ಲ ಎಂದು  ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *