– ನಾಡಿನ ಸಂಪತ್ತು ವಾಮಮಾರ್ಗದಲ್ಲಿ ದುರ್ಬಳಕೆ ಮಾಡಿಕೊಳ್ತಿದ್ದಾರೆ
– ಬಲ್ಡೋಟಾ ಫ್ಯಾಕ್ಟರಿ ಪ್ರಸ್ತಾಪ ಕೇಂದ್ರದ ಮುಂದಿಲ್ಲ ಎಂದ ಸಚಿವ
ಕೊಪ್ಪಳ: ಸರ್ಕಾರದ ಖಜಾನೆ ಖಾಲಿಯಾಗಿದೆ. ಅಭಿವೃದ್ಧಿಯಲ್ಲಿ ಹೆಚ್ಚಿನ ಹಣ ಸೋರಿಕೆಯಾಗುತ್ತಿದೆ. ನಾಡಿನ ಜನತೆ ಸರ್ಕಾರದ ಖಜಾನೆ ತುಂಬಿಸಲು ಸಹಕಾರ ನೀಡಿದ್ದಾರೆ. ಗ್ಯಾರಂಟಿ (Guarantee scheme) ಹೆಸರಲ್ಲಿ ಹೆಚ್ಚಿನ ತೆರಿಗೆ ಹಾಕಿದ್ದಾರೆ. ಆದ್ರೆ ಈ ಹಣ ಎಲ್ಲಿ ಹೋಗುತ್ತಿದೆ? ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ರಾಜ್ಯ ಸರ್ಕಾರವನ್ನ ಪ್ರಶ್ನಿಸಿದ್ದಾರೆ.
ಕೊಪ್ಪಳದಲ್ಲಿಂದು (Koppala) ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್‌ಡಿಕೆ, ಪ್ರತಿನಿತ್ಯ ಗ್ಯಾರಂಟಿ ಭಜನೆ ಮಾಡೋದು, ಕೇಂದ್ರ ಸರ್ಕಾರವನ್ನ ದೂಷಣೆ ಮಾಡೋದು ಬಿಟ್ಟು ಬೇರೆ ಏನನ್ನೂ ಈ ಸರ್ಕಾರದಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಕೆಕೆಆರ್‌ಡಿಬಿಗೆ 5,000 ಕೋಟಿ ರೂ. ಕೊಡ್ತೇವೆ ಅಂತ ಹೇಳಿದ್ರು. ಈವರೆಗೆ ನಯಾಪೈಸೆ ಬಿಡುಗಡೆ ಆಗಿಲ್ಲ. ಸರ್ಕಾರದ ಖಜಾನೆ ಖಾಲಿಯಾಗಿದೆ. ಅಭಿವೃದ್ಧಿಯಲ್ಲಿ ಹೆಚ್ಚಿನ ಹಣ ಸೋರಿಕೆಯಾಗುತ್ತಿದೆ. ನಾಡಿನ ಜನತೆ ಸರ್ಕಾಕದ ಖಜಾನೆ ತುಂಬಿಸಲು ಸಹಕಾರ ನೀಡಿದ್ದಾರೆ. ಗ್ಯಾರಂಟಿ ಹೆಸರಲ್ಲಿ ಹೆಚ್ಚಿನ ತೆರಿಗೆ ಹಾಕಿದ್ದಾರೆ. ಆದ್ರೆ ಈ ಹಣ ಎಲ್ಲಿ ಹೋಗುತ್ತಿದೆ? ನಾಡಿನ ಸಂಪತ್ತನ್ನು ವಾಮಮಾರ್ಗದಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಡಿ.ಕೆ ಶಿವಕುಮಾರ್ ಬೆದರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ಮಾತನಾಡೋ ಅವಶ್ಯಕತೆ ಇಲ್ಲ. ರಾಜ್ಯದ ಜನ ಅವರ ಪಕ್ಷಕ್ಕೆ 138 ಸ್ಥಾನ ಕೊಟ್ಟಿದ್ದಾರೆ. ನಟ್ಟು ಬೋಲ್ಟ್ ಸರಿಮಾಡಲು ಅಧಿಕಾರ ಕೊಟ್ಟಿದ್ದಾರಾ? ಆ ಕೆಲಸ ಮಾಡಲು ಬೇರೆಯವರು ಇದ್ದಾರೆ. ರಾಜ್ಯದಲ್ಲಿ ಅನೇಕ ಬೆಳವಣಿಗೆ ನಡೆಯುತ್ತಿವೆ. ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡದೇ ಇವರ ಬಗ್ಗೆ ಅವರು, ಅವರ ಬಗ್ಗೆ ಇವರು ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಕಿಚನ್‌ನಲ್ಲಿ ಕಪ್ಪು ಪ್ಲಾಸ್ಟಿಕ್ ಕಂಟೇನರ್ ಬಳಸೋ ಮುನ್ನ ಎಚ್ಚರ! – ಇದು ಎಷ್ಟು ಸುರಕ್ಷಿತ?
ಇನ್ನೂ ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಅನ್ನೋ ಸಚಿವ ಜಮಿರ್ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಸಚಿವರು, ಯಾರು ಏನೆಲ್ಲಾ ಆಗ್ತಾರೆ ಅಂತ ಕಾಲ ನಿರ್ಧಾರ ಮಾಡುತ್ತದೆ ಎಂದು ಕುಟುಕಿದರು. ಇದನ್ನೂ ಓದಿ: ಆಸ್ತಿ ತೆರಿಗೆ ಬಾಕಿ – ವಿಧಾನಸೌಧ, ರಾಜಭವನ ಸೇರಿ 258 ಸರ್ಕಾರಿ ಕಟ್ಟಡಗಳಿಗೆ ಬಿಬಿಎಂಪಿ ನೋಟೀಸ್
ಇದೇ ವೇಳೆ ಕೊಪ್ಪಳದಲ್ಲಿ ಬಿಎಸ್‌ಪಿಎಲ್ ಕಾರ್ಖಾನೆ ನಿರ್ಮಾಣ ವಿರೋಧಿಸಿ ಕೇಂದ್ರ ಸಚಿವರಿಗೆ ಹೋರಾಟಗಾರರು ಮನವಿ ಸಲ್ಲಿಸಿದರು. ನಗರಕ್ಕೆ ಬಿಎಸ್‌ಪಿಎಲ್ ಕಾರ್ಖಾನೆ ಬೇಡವೇ ಬೇಡ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಬಲ್ಟೋಡಾ ಫ್ಯಾಕ್ಟರಿ ಸ್ಥಾಪಿಸುವ ಯಾವುದೇ ಪ್ರಸ್ತಾವನೆ ಕೇಂದ್ರ ಮುಂದೆ ಇಲ್ಲ. ಇದು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಕಂಪನಿ ನಡುವಿನ ಒಪ್ಪಂದ ಎಂದು ಹೇಳಿದ್ರು. ಇದನ್ನೂ ಓದಿ: ಪರ ವಿರೋಧ ಬೆನ್ನಲ್ಲೇ ಡಿಸಿಎಂ ಟೆಂಪಲ್ ರನ್ – ಕಾಪು ಹೊಸ ಮಾರಿಗುಡಿ ಬ್ರಹ್ಮ ಕಲಶೋತ್ಸವದಲ್ಲಿ ಭಾಗಿಯಾಗಲಿರುವ ಡಿಕೆಶಿ