ಬೆಳಗಾವಿ: ಹಿಂದಿನ ಚುನಾವಣೆಯಲ್ಲಿ ಬಿಜೆಪಿ (BJP) ಗೆಲ್ಲಿಸುವ ಸುಪಾರಿಯನ್ನು ಸಿದ್ದರಾಮಯ್ಯ (Siddaramaiah) ಪಡೆದಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದರು.
ಬೈಲಹೊಂಗಲ ತಾಲೂಕಿನ ತಡಸಲೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕೋಲಾರದಲ್ಲಿ (Kolar) ಸ್ಪರ್ಧಿಸಲ್ಲ ಎಂಬ ಯಡಿಯೂರಪ್ಪ (BS Yediyurappa) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಅವರಿಬ್ಬರು ಆಂತರಿಕವಾಗಿ ಒಬ್ಬರಿಗೊಬ್ಬರು ವಿಶ್ವಾಸದಲ್ಲಿ ಇದ್ದಾರೆ. ಸಿದ್ದರಾಮಯ್ಯ ಕೆಣಕಿ, ಕೆಣಕಿ ಮನೆಗೆ ಹೋಗುವ ಕಾಲ ಬಂದಿದೆ. ಜೆಡಿಎಸ್ (JDS) ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಈ ಚುನಾವಣೆ ನೋಡೋಣ ಏನಾಗುತ್ತದೆ. ಕೋಲಾರದಲ್ಲಿ ಏನಾಗುತ್ತದೆ ಎಂದು ಕಾದು ನೋಡಿ ಎಂದರು.
Advertisement
Advertisement
2008ರಲ್ಲಿ ಉಪಚುನಾವಣೆಯಲ್ಲಿ ಆಪರೇಷನ್ ಕಮಲ ಮಾಡಿದ್ದರು. ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಸಿದ್ದರಾಮಯ್ಯ ಸುಪಾರಿ ತೆಗೆದುಕೊಂಡರು. ಸುಪಾರಿಗೆ ಎಷ್ಟು ತಗೊಂಡಿದ್ದಾರೆ ಎಂದು ನಾನು ಸಾವಿರ ಸಲ ಕೇಳಿದ್ದೇನೆ. ಈವರೆಗೂ ಉತ್ತರ ಸಿಕ್ಕಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕುಮಾರಸ್ವಾಮಿ ಕಾರಣ ಎನ್ನುತ್ತಾರೆ. ರಾಜ್ಯದಲ್ಲಿ ಬಿಜೆಪಿ ಸಧೃಢವಾಗಿ ಬೆಳೆಯಲು ಸಿದ್ದರಾಮಯ್ಯ ನಡವಳಿಕೆ ಕಾರಣರಾಗಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸವಾರರಿಗೆ ಗುಡ್ ನ್ಯೂಸ್ – ಟ್ರಾಫಿಕ್ ಫೈನ್ ಡಿಸ್ಕೌಂಟ್ ಸಮಯ ವಿಸ್ತರಣೆ
Advertisement
Advertisement
ಸಿದ್ದರಾಮಯ್ಯ ಅವರು ಮೊದಲು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಈಗಲೂ ಬಿಜೆಪಿ ಗೆಲ್ಲಿಸುವ ಸುಪಾರಿಯನ್ನು ಸಿದ್ದರಾಮಯ್ಯ ಪಡೆದಿದ್ದಾರೆ. ಅವರು ಸಿಎಂ ಆದರೆ ಮಾತ್ರ ಕಾಂಗ್ರೆಸ್. ಇಲ್ಲವೇ ಪಕ್ಷ ಸಂಪೂರ್ಣವಾಗಿ ನಿರ್ಣಾಮ ಆಗಬೇಕು ಎನ್ನುವ ಉದ್ದೇಶ ಅಷ್ಟೇ ಅವರದ್ದಿದೆ. ಸೂರ್ಯ, ಚಂದ್ರ ಇರೋದು ಎಷ್ಟು ನಿಜವೋ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನಿಜ ಎನ್ನುತ್ತಾರೆ. ನೀವು ಅಲ್ಲೇ ಅರ್ಥ ಮಾಡಿಕೊಳ್ಳಬಹುದು ಕಾಂಗ್ರೆಸ್ ಈ ಬಾರಿ ನೆಲ ಕಚ್ಚಲಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: 2ನೇ ಹಂತದ ಆಯ್ಕೆಯಲ್ಲಿ 10 ಅಭ್ಯರ್ಥಿಗಳ ನೇಮಕ ಮಾಡ್ತೇನೆ: ಹೆಚ್‌ಡಿಕೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k