– ಹೆಸರು ಬದಲಿಸಿ ಭೂಮಿ ಬೆಲೆ ಏರಿಸಬೇಕಾ? ಎಂದು ಪ್ರಶ್ನೆ
ನವದೆಹಲಿ: 2028ರ ಒಳಗೆ ಜಿಲ್ಲೆಯ ಹೆಸರು ಮತ್ತೆ ರಾಮನಗರ (Ramanagara) ಅಂತಲೇ ಹೆಸರು ಬರುತ್ತದೆ. ರಾಮನ ಹೆಸರಂತು ತೆಗೆಯಲು ಸಾಧ್ಯವಿಲ್ಲ. ಸ್ವಲ್ಪ ದಿನ ಅವರು ಖುಷಿಯಾಗಿರಲಿ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ತಿರುಗೇಟು ನೀಡಿದ್ದಾರೆ.
ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆಯಾಗಿ ಮರು ನಾಮಕರಣ ಮಾಡುವ ನಿರ್ಧಾರಕ್ಕೆ ಶುಕ್ರವಾರ ನಡೆದ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಈ ಸಂಬಂಧ ದೆಹಲಿಯಲ್ಲಿ ಮಾಧ್ಯಮಗಳಿಗೆ ಹೆಚ್‌ಡಿಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ರಾಮನಗರ ಜಿಲ್ಲೆ ಹೆಸರು ಬದಲಾವಣೆ- ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಮರು ನಾಮಕರಣ ಮಾಡಲು ಕ್ಯಾಬಿನೆಟ್ ಮಹತ್ವದ ನಿರ್ಧಾರ
ರಾಮನ ಹೆಸರಂತು ತೆಗೆಯಲು ಸಾಧ್ಯವಿಲ್ಲ, ರಾಮನಗರ ಇತಿಹಾಸ ಅವರಿಗೆ ಗೊತ್ತಿದ್ಯಾ? ಅದು ಗೊತ್ತಿದ್ದರೇ ತೆಗೆಯುತ್ತಿರಲಿಲ್ಲ. ಕಾಂಗ್ರೆಸ್‌ನ ರಾಜಕೀಯ ಪತನ ಆರಂಭವಾಗಿದೆ. ರಾಮನಗರ ಜಿಲ್ಲೆ ಹೆಸರು ಇಟ್ಟಾಗ ಯಾಕೆ ಪ್ರತಿಭಟನೆ ಮಾಡಿಲಿಲ್ಲ? ವಿಧಾನಸಭೆಯಲ್ಲೂ ಮಾತನಾಡಲಿಲ್ಲ. ಹೆಸರು ಬದಲಿಸಲು ಯಾರು ಅರ್ಜಿ ಕೊಟ್ಟಿದ್ದರು? ಅದರಿಂದ ಏನು ಸಿಗುತ್ತೆ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭೆಯಲ್ಲೂ ವಾಲ್ಮೀಕಿ ನಿಗಮದ ಹಗರಣ, ಮುಡಾ ಪ್ರಕರಣದ ಸದ್ದು – ಕೋಟಿ ಕೋಟಿ ಲೂಟಿ ಆರೋಪ
ರಾಮನಗರ ಈಗಾಗಲೇ ಅಭಿವೃದ್ಧಿಯಾಗಿದೆ. ಹೆಸರು ಬದಲಿಸಿ ಭೂಮಿ ಬೆಲೆ ಏರಿಸಬೇಕಾ? ಈಗೇನು ಇನ್ನು ಹೆಚ್ಚಿಗೆ ಏನ್ ಮಾಡ್ತಾರಂತೆ, ಹೆಸರು ಬದಲಾವಣೆ ಮಾಡಿದ್ರೆ ಬೆಲೆ ಏರುತ್ತಾ? ಕಾನೂನು ಸುವ್ಯವಸ್ಥಿತೆ ಹೇಗಿದೆ ನೋಡಬೇಕು? ಇದನ್ನು ಸರಿಯಾಗಿಡದೇ ಏನು ಅಭಿವೃದ್ಧಿ ಮಾಡಿದ್ರೆ ಏನು ಪ್ರಯೋಜನ? 2028ರೊಳಗೆ ಮತ್ತೆ ರಾಮನಗರ ಅಂತ ಬರುತ್ತೆ. ಸ್ವಲ್ಪ ದಿನ ಅವರು ಖುಷಿಯಾಗಿರಲಿ ಎಂದು ತಿರುಗೇಟು ನೀಡಿದ್ದಾರೆ.
ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆಯಾಗಿ ಮರು ನಾಮಕರಣ ಮಾಡುವ ನಿರ್ಧಾರಕ್ಕೆ ಶುಕ್ರವಾರ ನಡೆದ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಹೀಗಾಗಿ ಇನ್ನು ಮುಂದೆ ರಾಮನಗರ ಜಿಲ್ಲೆ ಬೆಂಗಳೂರು ದಕ್ಷಿಣ ಜಿಲ್ಲೆ ಅಂತಾ ಮರು ಹೆಸರು ಪಡೆಯಲಿದೆ. ಇದನ್ನೂ ಓದಿ: ಟಿಬಿ ಡ್ಯಾಂನ 30 ಕ್ರಸ್ಟ್ ಗೇಟ್ ಓಪನ್; 90,000 ಕ್ಯುಸೆಕ್ ನೀರು ನದಿಗೆ – ಹಂಪಿಯ ಹಲವು ಸ್ಮಾರಕಗಳು ಮುಳುಗಡೆ