– ಗ್ಯಾರಂಟಿಯಿಂದ ಕಾಂಗ್ರೆಸ್ ದಿವಾಳಿಯಾಗಿಲ್ಲ ಎಂದ ಕೇಂದ್ರ ಸಚಿವ
ಕೋಲಾರ: ಸರ್ಕಾರದ ಮೇಲಿನ ಹೊರೆ ತಪ್ಪಿಸಲು 11 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನ ಎಪಿಎಲ್‌ಗೆ (BPL APL Card) ಬದಲಾವಣೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಬಾಂಬ್ ಸಿಡಿಸಿದ್ದಾರೆ.
Advertisement
ಕೋಲಾರದಲ್ಲಿಂದು (Kolara) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 11 ಲಕ್ಷ ಬಿಪಿಎಲ್ ಕಾರ್ಡ್ ಗಳು ಎಪಿಎಲ್ ಗೆ ಬದಲಾವಣೆ ಆಗ್ತಿದೆ. ಬದಲಾವಣೆಗೆ ಕೈ ಹಾಕಿರುವ ಸರ್ಕಾರದ ಬಗ್ಗೆ ಜನರು ಪ್ರಶ್ನೆ ಮಾಡ್ತಿದ್ದಾರೆ. ಕೇಂದ್ರ ಸರ್ಕಾರ ಎಲ್ಲೂ ಅಕ್ಕಿ ಕಡಿತ ಮಾಡ್ತಿಲ್ಲ. ಬಿಪಿಎಲ್‌ನಿಂದ ನಿಂದ ಎಪಿಎಲ್‌ಗೆ ಬದಲಾವಣೆ ಬಗ್ಗೆ ಯೋಚನೆ ಮಾಡಿದಿರಾ? ಎಪಿಎಲ್ ಕಾರ್ಡ್‌ನವರು ದುಡ್ಡು ಕೊಡಬೇಕಲ್ವಾ? ಸರ್ಕಾರದ ಮೇಲೆ ಹೊರೆ ತಪ್ಪಿಸಲು ಈ ರೀತಿ ಮಾಡ್ತಿದ್ದಾರೆ. ಗ್ಯಾರಂಟಿ ಯೋಜನೆಗೆ (Guarantee Scheme) 52 ಸಾವಿರ ಕೋಟಿ ರೂ. ಕೊಡ್ತಿದ್ದಾರೆ. ಗ್ಯಾರಂಟಿ ಕಾರ್ಯಕ್ರಮಕ್ಕೆ ಉಪಯೋಗ ಮಾಡೋದು ಬೇರೆ. ಗ್ಯಾರಂಟಿ ಸ್ಕೀಮ್ ನಿಂದ ಸರ್ಕಾರಕ್ಕೆ ಏನೂ ಹೊರೆ ಇಲ್ಲ. ಹಾಗಾದ್ರೆ ತೆರಿಗೆ ಹೆಚ್ಚಿಗೆ ಮಾಡಿ ಸಂಗ್ರಹ ಮಾಡಿರುವ ಹಣ ಏನಾಯ್ತು? ಎಂದು ಪ್ರಶ್ನೆ ಮಾಡಿದ್ದಾರೆ.
Advertisement
Advertisement
ಗ್ಯಾರಂಟಿ ಸ್ಕೀಮ್ ಪರಿಶೀಲನೆ ಮಾಡಲು ಮೋದಿ (PM Modi) ಅವರಿಗೆ ಫ್ಲೈಟ್ ಮಾಡಿಕೊಡ್ತೀವಿ ಅಂತ ಸಿಎಂ ಹಾಗೂ ಡಿಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಈಗ ರಾಜ್ಯ ಸರ್ಕಾರ 1.5 ಲಕ್ಷ ಕೋಟಿ ರೂ. ಸಾಲ ಮಾಡ್ತಿದೀರಿ, ಗ್ಯಾರಂಟಿ ಸ್ಕೀಮ್‌ನಿಂದ ಖಜಾನೆ ಏನೂ ಖಾಲಿ ಆಗಿಲ್ಲ. ಮೋದಿ ಅವರು ಬಂದು ನೋಡಬೇಕಿಲ್ಲ, ನಾವೇ ಇಲ್ಲಿ ನೋಡ್ತಿದ್ದೇವೆ. ಸಿಎಂ ಹೇಳಿದಂತೆ ಕೇಸ್ ಹಾಕಲಿ ಬಿಡಿ ನೋಡೋಣ ಎಂದಿದ್ದಾರೆ. ಇದನ್ನೂ ಓದಿ: Mangaluru| ಬೀಚ್ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರ ದುರ್ಮರಣ
Advertisement
ವಕ್ಫ್ ಆಸ್ತಿ ವಿವಾದ ಕುರಿತು ಮಾತನಾಡಿದ ಹೆಚ್‌ಡಿಕೆ, ವಕ್ಫ್ ಆಸ್ತಿ ವಿವಾದಕ್ಕೆ ಸರ್ಕಾರವೇ ತೆರೆ ಎಳೆಯನೇಕು ಎಂದರು. ನೋಟಿಸ್ ಹಿಂಪಡೆಯಲು ಸಿಎಂ ಸೂಚನೆ ಕೊಟ್ಟಿದ್ದಾರೆ ಅಂತ ಮಂತ್ರಿನೇ ಹೇಳ್ತಿದ್ದಾರೆ. ಸರ್ಕಾರದ ಕೆಲವೂ ತೀರ್ಮಾನದಿಂದ ಗೊಂದಲ ಸೃಷ್ಟಿಯಾಗಿದೆ. ಉಳ್ಳವರು ವಕ್ಫ್ ಆಸ್ತಿ ವಶಕ್ಕೆ ಪಡೆದಿರುವ ಬಗ್ಗೆ ಏನೂ ಕ್ರಮ ಆಗಿಲ್ಲ. ರೈತರ ಜಮೀನು ಮಾತ್ರ ವಕ್ಫ್ ಆಸ್ತಿ ಮಾಡಲಾಗ್ತಿದೆ. ಅಶಾಂತಿ ಉಂಟು ಮಾಡಲು ಸರ್ಕಾರ ಮಾಡಿರುವ ಮಹಾ ಅಪರಾಧ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದು – ಕಲಬುರಗಿಯಲ್ಲಿ ಹೆಚ್ಚು, ಉಡುಪಿಯಲ್ಲಿ ಅತಿ ಕಡಿಮೆ
ಕೋಲಾರ ಜಿಲ್ಲೆಯಲ್ಲೂ ಅಮಾಯಕ ರೈತರ ಜಮೀನುಗಳ ಬಗ್ಗೆ ಅರಣ್ಯ ಇಲಾಖೆ ಒಕ್ಕಲೆಬ್ಬಿಸಿದ್ದಾರೆ. ಆಮೂಲಕ ರೈತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಊರಿಗೆಲ್ಲಾ ಬುದ್ದಿ ಹೃಳುವವರದ್ದು ತೆರವುಗೊಳಿಸಿಲ್ಲ. ಆದೇಶ ಮಾಡಿದ್ರು ಕೇಂದ್ರ ಸೂಚನೆ ನೀಡಿದ್ರು ತೆರವುಗೊಳಿಸುತ್ತಿಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವಕ್ಫ್ ಅಭಿಯಾನ ಮಾಡ್ತಿದ್ದಾರೆ: ಪ್ರಿಯಾಂಕ್ ಖರ್ಗೆ
ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಅರಣ್ಯ ಒತ್ತುವರಿ ಆರೋಪದ ಸರ್ವೇ ಸ್ಥಗಿತ ಕುರಿತು ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಅಮಾಯಕ ರೈತರ ಭೂಮಿಯನ್ನು ಅರಣ್ಯ ಹಾಗೂ ಕಂದಾಯ ಅಧಿಕಾರಿಗಳು ತೆರವು ಮಾಡಿದ್ದಾರೆ. ಶ್ರೀನಿವಾಸಪುರದಲ್ಲಿ ರೈತರನ್ನು ಒಕ್ಕಲೆಬ್ಬಿಸಿ ಖಾಲಿ ಮಾಡಿಸಿದ್ದಾರೆ. 126 ಎಕರೆ ಒತ್ತುವರಿ ಸರ್ವೇ ಬಗ್ಗೆ ಕೋರ್ಟ್ ಸೂಚನೆ ನೀಡಿದೆ. ಹಾಗಾದ್ರೆ ಬಡವರಿಗೆ ಒಂದು ನ್ಯಾಯ ಇವರಿಗೆ ಒಂದು ನ್ಯಾಯನಾ? ಇದೇ ತಿಂಗಳ 6ನೇ ತಾರೀಖು ಸರ್ವೇ ಮಾಡಲು ನಿಗಧಿ ಆಗಿದ್ದು ಏನಾಯ್ತು? ಅದ್ಯಾವುದೋ ಹೆಚ್‌ಎಂಟಿ ಬಗ್ಗೆ ಇಡ್ಕೊಂಡು ಅರಣ್ಯ ಮಂತ್ರಿ ಮಾತಾಡುತ್ತಿದ್ದಾರೆ. ದೇಶಕ್ಕೆ ಬುದ್ದಿ ಹೇಳೋರು ಇವರೊಬ್ಬರೂ ಅಲ್ವೇ ಅಂತ ಸಚಿವ ಕೃಷ್ಣಭೈರೆಗೌಡ ಹಾಗೂ ರಮೇಶ್ ಕುಮಾರ್‌ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.