ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಮತದಾನ ಮುಗಿದಂತೆ ಸಿಂಗಾಪುರಕ್ಕೆ (Singapore) ಹಾರಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಆಪ್ತರ ಜೊತೆ ವಿಶ್ರಾಂತಿ ಪಡೆಯುತ್ತಿದ್ದಾರೆ.
ಆಪ್ತರೊಂದಿಗೆ ಉಪಾಹಾರ ಸೇವಿಸಿ ಹೆಚ್‌ಡಿಕೆ ವಿಶ್ರಾಂತಿ ಪಡೆಯುತ್ತಿರುವ ಸಂಬಂಧದ ಫೋಟೋಗಳನ್ನು ಪಕ್ಷದ ಮುಖಂಡರು ಹಂಚಿಕೊಂಡಿದ್ದಾರೆ. ವಿಶ್ರಾಂತಿ ಪಡೆಯುತ್ತಿರುವ ಕುಮಾರಸ್ವಾಮಿ ಅವರು ಅಭ್ಯರ್ಥಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಇದನ್ನೂ ಓದಿ: ಮತ್ತೆ ಕರ್ನಾಟಕದಲ್ಲಿ ರೆಸಾರ್ಟ್ ರಾಜಕೀಯ? – ಶಾಸಕರು, ಪಕ್ಷೇತರರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ತಂತ್ರ
ಈ ಬಾರಿ ಅತಂತ್ರ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ಹೀಗಾಗಿ ಗೆಲ್ಲುವ ಸಂಭವವಿರುವ ಅಭ್ಯರ್ಥಿಗಳ ಜೊತೆ ಹೆಚ್‌ಡಿಕೆ ಸಂಪರ್ಕದಲ್ಲಿದ್ದಾರೆ.
ರಾಜ್ಯ ವಿಧಾನಸಭೆಗೆ ಮೇ 10 ರಂದು ಮತದಾನ ನಡೆಯಿತು. ಮತದಾನದ ಬೆನ್ನಲ್ಲೇ ನಡೆದ ಮತಗಟ್ಟೆ ಸಮೀಕ್ಷೆಗಳಲ್ಲಿ ಅತಂತ್ರ ಪರಿಸ್ಥಿತಿ ಎದುರಾಗುವ ಸಾಧ್ಯತೆಯ ಸೂಚನೆ ಸಿಕ್ಕಿದೆ. ಈ ಹಿನ್ನಲೆಯಲ್ಲಿ ಪ್ರಮುಖ ಮೂರು ಪಕ್ಷಗಳು ಅಲರ್ಟ್ ಆಗಿವೆ. ಮೇ 13 ರಂದು ಫಲಿತಾಂಶ ಹೊರಬೀಳಲಿದ್ದು, ಸ್ವತಂತ್ರ ಸರ್ಕಾರ ರಚನೆಯಾಗುತ್ತೋ ಇಲ್ಲ ಅತಂತ್ರ ಪರಿಸ್ಥಿತಿ ತಲೆದೋರುತ್ತೋ ಎಂಬುದು ಕುತೂಹಲ ಮೂಡಿಸಿದೆ. ಮೂರು ಪಕ್ಷಗಳ ನಾಯಕರು ಹೈವೋಲ್ಟೇಜ್ ಸಭೆ ನಡೆಸುತ್ತಿದ್ದು, ರಾಜಕೀಯ ಲೆಕ್ಕಾಚಾರ ಹಾಕುತ್ತಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಜೆಡಿಎಸ್ ಬೆಂಬಲ ಕೊಟ್ರೆ ಒಳ್ಳೆಯದಾಗುತ್ತೆ: ಸತೀಶ್ ಜಾರಕಿಹೊಳಿ