ಬೆಂಗಳೂರು: ಸೂರಜ್ ರೇವಣ್ಣ (Suraj Revanna Case) ವಿಚಾರವಾಗಿ ನನಗ್ಯಾಕೆ ಪ್ರಶ್ನೆ ಕೇಳ್ತೀರಿ? ನೀವು ನನಗೆ ಬೆದರಿಕೆ ಹಾಕುತ್ತಿದ್ದೀರಿ? ಈ ರೀತಿಯ ವಿಚಾರಗಳಿಗೆ ನಾನು ಪ್ರತಿಕ್ರಿಯಿಸುವ ಅಗತ್ಯ ಇಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸೂರಜ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ನನಗೆ ಯಾಕೆ ಈ ಬಗ್ಗೆ ಪ್ರಶ್ನೆ ಕೇಳ್ತೀರಾ? ಕಾನೂನು ಅದರ ಬಗ್ಗೆ ಕ್ರಮ ತೆಗೆದುಕೊಳ್ಳಲಿದೆ ಎಂದಿದ್ದಾರೆ. ಇದನ್ನೂ ಓದಿ: ಇಳಿವಯಸ್ಸಲ್ಲೂ ದೇವೇಗೌಡರಿಗೆ ಕೊಡಬಾರದ ನೋವು ಕೊಡ್ತಿದ್ದಾರೆ: ಹೆಚ್‍ಡಿಕೆ
ಚನ್ನಪಟ್ಟಣಕ್ಕೆ (Channapatna) ಭೇಟಿ ಹಾಗೂ ಅಭ್ಯರ್ಥಿ ಆಯ್ಕೆ ವಿಚಾರವಾಗಿ, ಯಾವ ಅಭ್ಯರ್ಥಿ ಬಗ್ಗೆಯೂ ಚರ್ಚೆ ಮಾಡಲ್ಲ. ನಿಧಾನವಾಗಿ ಆಯ್ಕೆ ಮಾಡೋಣ ನನಗೇನು ಆತುರ ಇಲ್ಲ ಎಂದಿದ್ದಾರೆ.
ಡಿ.ಕೆ ಶಿವಕುಮಾರ್ ಚನ್ನಪಟ್ಟಣಕ್ಕೆ ಭೇಟಿಕೊಡುವ ವಿಚಾರವಾಗಿ, ಅವರನ್ನು ಹಿಡಿದುಕೊಂಡಿರುವವರು ಯಾರು? ಹೋದರೆ ತಪ್ಪೇನಿದೆ? ಅವರೊಬ್ಬ ಮಂತ್ರಿಗಳಿದ್ದಾರೆ, ಉಪಮುಖ್ಯಮಂತ್ರಿಗಳು ಬೇರೆ, ಅಲ್ಲದೇ ಡಿಫ್ಯಾಕ್ಟೊ ಚೀಫ್ ಮಿನಿಸ್ಟರ್ ಬೇರೆ. ಅವರನ್ನ ಹೋಗಬೇಡಿ ಅಂತ ಹೇಳೋಕೆ ಆಗುತ್ತಾ? ಚನ್ನಪಟ್ಟಣದ ಬಗ್ಗೆ ಈಗಲಾದ್ರೂ ಗಮನಹರಿಸಿದ್ದಕ್ಕೆ ಅವರಿಗೆ ಅಭಿನಂದಿಸೋಣ. ಇನ್ನೂ ಬೆಂಗಳೂರು ಗ್ರಾಮಾಂತರ ಸೋಲಿಗೆ ಚನ್ನಪಟ್ಟಣ ಗೆದ್ದು ಸೋಲು ತೀರಿಸುಕೊಳ್ಳುವ ವಿಚಾರವಾಗಿ, ಅವರು ರಾಜಕಾರಣ ಮಾಡಲಿ ಎಂದಿದ್ದಾರೆ.
ಹೆಚ್‍ಎಂಟಿ ಕಂಪನಿಯ ವಿಚಾರವಾಗಿ, ಅದು ಅತ್ಯಂತ ಪ್ರತಿಷ್ಠಿತ ಉದ್ಯಮ. ಸಾವಿರಾರು ಕುಟುಂಬಗಳು ಇದರಿಂದ ಜೀವನ ನಡೆಸುತ್ತಿವೆ. ಅದನ್ನು ಸಂಪೂರ್ಣವಾಗಿ ಸರ್ವನಾಶ ಮಾಡಿದ್ದಾರೆ. ಅದರ ಅಂಗ ಸಂಸ್ಥೆಗಳಿಗೆ ಒಂದು ತಿಂಗಳು ಸಮಯ ಕೊಟ್ಟಿದ್ದೇನೆ. ಒಂದು ಕಾಲದಲ್ಲಿ ಎನ್‍ಜಿಇಎಫ್, ಹೆಚ್‍ಎಂಟಿ, ಐಟಿಐ ಮುಂತಾದ ಕಂಪನಿಗಳಿಗೆ ಬಸ್‍ಗಳಲ್ಲಿ ಕೆಲಸಗಾರರು ಬರುತ್ತಿದ್ದರು. ಈ ಸರ್ಕಾರ ಇದಕ್ಕೆ (ಕಂಪನಿಗಳ ಪನರುಜ್ಜೀವನಕ್ಕೆ) ಸಹಕಾರ ಕೊಡುವ ನಂಬಿಕೆ ಇಲ್ಲ. ಸಾರ್ವಜನಿಕ ಉದ್ದಿಮೆಗಳ ಆಸ್ತಿ ಮಾರಾಟ ಮಾಡುವುದು ಅವರ ಜೇಬು ತುಂಬಿಸಿಕೊಳ್ಳುವುದನ್ನು ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗಣಿಗಾರಿಕೆಗೆ ಸಹಿ ಹಾಕಿರೋದು ಸರ್ಕಾರದ ಸಂಸ್ಥೆ, ಅವರು ಕಿಕ್‌ಬ್ಯಾಕ್ ನೀಡಲ್ಲ: ರಾಜ್ಯ ಸರ್ಕಾರದ ವಿರುದ್ಧ ಸಿಟಿ ರವಿ ಕಿಡಿ