– ನಾನ್ಯಾಕೆ ಸಿದ್ದರಾಮಯ್ಯಗೆ ಭಯ ಪಡಲಿ? ನನ್ನ ಕಂಡ್ರೆ ಅವ್ರಿಗೆ ಭಯ
– ವಿಧಾನಸಭೆಯಲ್ಲಿ ನೀಲಿ ಚಿತ್ರ ನೋಡಿದವ್ರ ಬಗ್ಗೆ ಏನಂತ ಮಾತಾಡಲಿ?
ವಿಜಯಪುರ: ಆರ್‌ಎಸ್‌ಎಸ್ ಕಲಿಸಿಕೊಟ್ಟಿರೋದೇ ನೀಲಿಚಿತ್ರ ನೋಡೋದು, ಆ ಶಾಖೆಯಲ್ಲಿ ಕಲಿತವರೇ ನೀಲಿಚಿತ್ರ ನೋಡಿರೋದು ಎಂದು ಆರ್‌ಎಸ್‌ಎಸ್ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಸಿಂದಗಿಯ ಬೊಮ್ಮನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಶಾಖೆಗೆ ಕುಮಾರಸ್ವಾಮಿ ಬರಲಿ ಎಂದು ಕಟೀಲ್ ಹೇಳಿದ್ದಾರೆ. ಆರ್‍ಎಸ್‍ಎಸ್ ಕಲಿಸಿಕೊಟ್ಟಿರೋದೇ ನೀಲಿಚಿತ್ರ ನೋಡುವುದಾಗಿದೆ. ಆ ಶಾಖೆಯಲ್ಲಿ ಕಲಿತವರೇ ನೀಲಿಚಿತ್ರ ನೋಡಿರುವುದಾಗಿದೆ. ನಾನು ಆ ಶಾಖೆಯಲ್ಲಿ ಕಲಿಯೋದು ಬೇಕಿಲ್ಲ, ನಂಗೆ ಈ ಜನರ ಜೊತೆಗೆ ಕಲಿಯುವುದಷ್ಟೇ ಸಾಕು ಎಂದು ಹೆಚ್‍ಡಿಕೆ ತೀರುಗೇಟು ನೀಡಿದ್ದಾರೆ. ಇದನ್ನು ಓದಿ: ಶೇ.40 ರಷ್ಟು ಮಹಿಳೆಯರಿಗೆ ಟಿಕೆಟ್ – ಯುಪಿಯಲ್ಲಿ ಪ್ರಿಯಾಂಕಾ ಗಾಂಧಿ ಕ್ರಾಂತಿಕಾರಿ ನಿರ್ಧಾರ
ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಅನ್ನೋ ಕಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಯಾವಾಗ್ಲೂ ಅಂತಹ ಕೀಳು ಮಟ್ಟಕ್ಕೆ ಇಳಿಯಲ್ಲ, ಯಾರೂ ಅಂತಹ ಹೇಳಿಕೆಗಳನ್ನು ನೀಡಬಾರದು. ಯಾರೇ ಆಗಲಿ ಯಾರದ್ದೇ ವಯಕ್ತಿಕ ವಿಷಯಗಳ ಬಗ್ಗೆ ಮಾತನಾಡಬಾರದು. ಕಾಂಗ್ರೆಸ್, ಬಿಜೆಪಿಯ ಎರಡೂ ಪಕ್ಷಗಳ ನಾಯಕರೂ ಹೀಗೆ ಮಾಡಬಾರದು. ದೇಶದಲ್ಲಿ ಬಡತನ ಇದೆ, ಬಡತನ ಯಾವ ರೀತಿ ಓಡಿಸಬೇಕು ಅನ್ನೋ ಚರ್ಚೆ ಮಾಡಲಿ. ಆರ್‍ಎಸ್‍ಎಸ್‍ನಿಂದ ಬಂದವರ ಬಗ್ಗೆ ಮಾತನಾಡಬೇಕಂದ್ರೆ ದಿನಗಳೇ ಸಾಕಾಗಲ್ಲ. ದಯವಿಟ್ಟು ಯಾರೂ ವೈಯಕ್ತಿಕ ವಿಷಯಗಳ ಚರ್ಚೆ ಮಾಡುವುದು ಬೇಡ. ವಿಧಾನಸಭೆಯಲ್ಲಿ ನೀಲಿ ಚಿತ್ರ ನೋಡಿದವರ ಬಗ್ಗೆ ಏನಂತ ಮಾತಾಡಲಿ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನು ಓದಿ: ರಾಹುಲ್ ಗಾಂಧಿ ಡ್ರಗ್ ಪೆಡ್ಲರ್: ಕಟೀಲ್