– ಸಿದ್ದರಾಮಯ್ಯ ತಮ್ಮ ಹೆಸರಿಗೆ ಕಳಂಕ ಬರುವಂತೆ ಮಾಡಿಕೊಂಡಿದ್ದಾರೆ
– ಯಡಿಯೂರಪ್ಪ ಕಾಲದಲ್ಲೂ ನನ್ನ ವಿರುದ್ಧ ತನಿಖೆ ಆಗಿತ್ತು ಎಂದ ಸಚಿವ
ನವದೆಹಲಿ: ಮುಖ್ಯಮಂತ್ರಿಗಳು (Chief Minister) ಈ ಮಟ್ಟಿಗೆ ಇಳಿಯುತ್ತಾರೆ ಅಂದುಕೊಂಡಿರಲಿಲ್ಲ. ತಮ್ಮ ಹೆಸರಿಗೆ ಕಳಂಕ ಬರುವಂತೆ ಮಾಡಿಕೊಂಡಿದ್ದಾರೆ. ಕಳಂಕ ತೊಳೆದುಕೊಳ್ಳಲು ಹಿಂದುಳಿದ ನಾಯಕ, ಬಡವರ ಪರ ಹೋರಾಟ ಮಾಡಿದವರು ಅಂತ ಹೇಳಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮುಡಾ ಹಗರಣ ಆರೋಪ ಕುರಿತು ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಈ ಮಟ್ಟಿಗೆ ಇಳಿಯುತ್ತಾರೆ ಅಂದುಕೊಂಡಿರಲಿಲ್ಲ. ಹೆಸರಿಗೆ ಕಳಂಕ ಬರುವಂತೆ ಮಾಡಿಕೊಂಡಿದ್ದಾರೆ. ಕಳಂಕ ತೊಳೆದುಕೊಳ್ಳಲು ಹಿಂದುಳಿದ ನಾಯಕ, ಬಡವರ ಪರ ಹೋರಾಟ ಮಾಡಿದವರು ಅಂತ ಹೇಳಿಕೊಳ್ಳುತ್ತಿದ್ದಾರೆ. ಇದನ್ನೆಲ್ಲ ಮುಂದಿಟ್ಟುಕೊಂಡು ರಕ್ಷಿಸಿಕೊಳ್ಳಬೇಕಾದ ದಯನೀಯ ಸ್ಥಿತಿ ಬಂದಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: 2028ರೊಳಗೆ ಮತ್ತೆ ರಾಮನಗರ ಅಂತ ಬರುತ್ತೆ – ರಾಮನ ಹೆಸರು ತೆಗೆಯಲು ಸಾಧ್ಯವಿಲ್ಲ: ಹೆಚ್‌ಡಿಕೆ ತಿರುಗೇಟು
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Corporation) ಅಕ್ರಮವಾಗಿದೆ ಅಂತ ಅವರೇ ಒಪ್ಪಿಕೊಂಡಿದ್ದಾರೆ. ಮೊದಲು ವೀರಾವೇಷದಲ್ಲಿ ವಿಧಾನಸಭೆಯಲ್ಲಿ ಮಾತನಾಡುತ್ತಿದ್ದರು. ಈಗ ವೀರಾವೇಷ ಏನಾಗಿದೆ? ನೈತಿಕತೆ ಏನಾಗಿದೆ? ಪಾರದರ್ಶಕ ಆಡಳಿತ ಅಂತಾರೆ, ಮಗ ಏನೇಲ್ಲ ಮಾಡಿದರು? ಇವರಿಗೆ ಮಾತನಾಡಲು ಶಕ್ತಿಯಿಲ್ಲದೇ ಮಂತ್ರಿ ಕೈಯಲ್ಲಿ ಹೇಳಿಕೆ ಕೊಡಿಸ್ತಿದ್ದಾರೆ. 1984 ರಲ್ಲಿ ನಾನು ಸಿನಿಮಾ ಹಂಚಿಕೆದಾರನಾಗಿ ವ್ಯವಹಾರ ಮಾಡ್ತಿದ್ದೆ. ಮೈಸೂರಿನಲ್ಲಿ ಕಚೇರಿ ಇಟ್ಟುಕೊಂಡಿದ್ದೆ. ಆ ವೇಳೆ ಸಿಐಟಿಬಿಯಿಂದ ಅರ್ಜಿ ಹಾಕಿದ್ದೆ. ಇಂಡಸ್ಟ್ರಿಯಲ್ ಸೈಟ್ ಕೇಳಿ ಅರ್ಜಿ ಹಾಕಿದ್ದೆ, ಸರ್ಕಾರದ ಭೂಮಿಯನ್ನು ಧರ್ಮಕ್ಕೆ ಬರೆಸಿಕೊಂಡಿಲ್ಲ. ಆದ್ರೆ ಇವರು 14 ಸೈಟು ತಗೊಂಡ್ರಲ್ಲ ಯಾವ ಆಧಾರದ ಮೇಲೆ ತಗೊಂಡ್ರು? 21 ಸಾವಿರ ಚದರಡಿ ಸೈಟನ್ನು ನೀಡಿದ್ದರು? ರಾಜಕೀಯಕ್ಕೆ ಬರುವ ಮುನ್ನ 15 ವರ್ಷ ಮೈಸೂರಿನಲ್ಲಿ ಕಚೇರಿ ಹೊಂದಿದ್ದೆ. ಆದರೂ ಸೈಟ್ ಕೊಟ್ಟಿಲ್ಲ, ಕೇವಲ ಲೆಟರ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಫ್ಯಾಂಟಸಿ ಪಾರ್ಕ್ ಮಾದರಿಯಲ್ಲಿ ಬೃಂದಾವನ ಗಾರ್ಡನ್ ಅಭಿವೃದ್ಧಿಪಡಿಸಲು ಸಂಪುಟ ಅಸ್ತು – 2,633 ಕೋಟಿ ರೂ. ಯೋಜನೆಗೆ ಒಪ್ಪಿಗೆ
ಈ ಹಿಂದೆ ನಮ್ಮ ವಿರುದ್ಧವೂ ಸಿಐಡಿ, ಲೋಕಾಯುಕ್ತ ತನಿಖೆ ನಡೆದಿದೆ. ದೇವೇಗೌಡರ ಕುಟುಂಬ 500ಕ್ಕೂ ಹೆಚ್ಚಿನ ನಿವೇಶನ ಪಡೆದಿದೆ ಅಂತ ಆರೋಪ ಮಾಡಿದ್ದರು. ಎಲ್ಲ ತನಿಖೆ ಮಾಡಿದ ಬಳಿಕವೂ ಸಾಬೀತಾಗಿಲ್ಲ. ಆಗ ಹೆಚ್.ಡಿ ದೇವೇಗೌಡರು ಒಂದು ಸೈಟಿಗೆ ಮನವಿ ಮಾಡಿದ್ದರು. ನಮ್ಮ ಚಿಕ್ಕಮ್ಮನಿಗೆ ಸೈಟು ಕೊಡಿ ಎಂದು ಮನವಿ ಮಾಡಿದ್ದರು. ಯಡಿಯೂರಪ್ಪ ಕಾಲದಲ್ಲೂ ತನಿಖೆ ಆಯ್ತು, ಏನು ಆಗಲಿಲ್ಲ. 70*280 ಸೈಟ್ ನೀಡಿದ ಪತ್ರ ನೀಡಿದ್ದೀರಿ, ಆದರೆ ಹಕ್ಕು ಪತ್ರ ನೀಡಿಲ್ಲ ಅಂತ 2,000 ಇಸವಿಯಲ್ಲಿ ರಲ್ಲಿ ನಾನು ಒಂದು ಪತ್ರ ಬರೆದಿದ್ದೆ. 2006 ರಲ್ಲಿ ಸಿಎಂ ಆಗಿದ್ದೆ ಮುಖ್ಯಮಂತ್ರಿಯಾಗಿ ಈ ಸೈಟು ತಗೊಳ್ಳಲು ಆಗ್ತಿರಲಿಲ್ವ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: Women’s Asia Cup: ಸ್ಮೃತಿ, ರೇಣುಕಾ ಶೈನ್ – ಬಾಂಗ್ಲಾ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ; ಫೈನಲ್ ಪ್ರವೇಶಿಸಿದ ಭಾರತ!
ಬದಲಿ ನಿವೇಶನ ಸಿಕ್ಕಿಲ್ಲ:
ಬೆಂಗಳೂರಿನಲ್ಲಿ ಏನೇಲ್ಲ ನಡೆದಿದೆ ತೆಗೆದ್ರೆ ಬ್ರಹ್ಮಾಂಡ ಇದೆ. 2017 ರಲ್ಲಿ ಮತ್ತೊಂದು ಪತ್ರ ಬರೆದೆ. ಸಾ.ರಾ ಮಹೇಶ ನ್ಯಾಯವಾದ ಸೈಟ್ ಪಡೆದುಕೊಳ್ಳಿ ಎಂದು ಮನವಿ ಮಾಡಿದರು, ಅದಕ್ಕಾಗಿ ಪತ್ರ ಬರೆದಿದ್ದೆ. 40 ವರ್ಷ ಆದರೂ ನನಗೆ ಬದಲಿ ನಿವೇಶನ ನೀಡಿಲ್ಲ. ದುಡ್ಡು ಕೊಟ್ಟರೂ ನನಗೆ ಈವರೆಗೂ ನಿವೇಶನ ನೀಡಿಲ್ಲ. 2017ರಲ್ಲಿ ಹಂಚಿಕೆಯಾದ ನಿವೇಶನದಲ್ಲಿ 8,000 ಚದರಾಡಿ ಕಡಿಮೆಯಾಗಿದೆ ಎಂದು ಮೂಡಾ ಹೇಳಿತ್ತು. ಕುಮಾರಸ್ವಾಮಿ ನಾನು ಸಾಮಾನ್ಯ ಪ್ರಜೆ, ಪ್ರಜೆಯಾಗಿ ಒಂದು ಅರ್ಜಿ ಹಾಕಲು ಅಧಿಕಾರ ಇಲ್ವ? ನನ್ನ ಪರಿಸ್ಥಿತಿಯೇ ಹೀಗೆ ಆದರೆ ಬಡವರ ಪರಿಸ್ಥಿತಿ ಏನು? ಯಾವ ತನಿಖೆ ಮಾಡ್ತೀರಿ, ಇದನ್ನು ನಿಮ್ಮ ಮಗ ಅಥವಾ ಹೆಂಡ್ತಿ ಹೆಸರಿಗೆ ಅಥಾವ ಬೈರತಿ ಸುರೇಶ್ ಹೆಸರಿಗೆ ಬರೆಯುತ್ತೇನೆ ಬಿಡಿ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: 15 ತಿಂಗಳಲ್ಲಿ 1,200 ರೈತರ ಆತ್ಮಹತ್ಯೆ – ಕಾಂಗ್ರೆಸ್ ಸರ್ಕಾರದಲ್ಲಿ ರೈತರಿಗಿಲ್ಲ ಉಜ್ವಲ ಭವಿಷ್ಯ: ಜೋಶಿ