ಬೆಂಗಳೂರು: ಇಲ್ಲಿನ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಭವಾನಿ ರೇವಣ್ಣ (Bhavani Revanna) ಅವರ ಪ್ರಕರಣದ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ನೋಟಿಸ್ ಕೊಟ್ಟರೂ ಎಸ್‌ಐಟಿ ವಿಚಾರಣೆಗೆ (SIT Investigation) ಹಾಜರಾಗಿಲ್ಲ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಜವಾಬ್ದಾರಿ ಮುಗಿದಿದೆ. ಇನ್ನುಳಿದ ಜವಾಬ್ದಾರಿ ಎಸ್‌ಐಟಿ ಹಾಗೂ ನ್ಯಾಯಾಲಯದ ಹೆಗಲ ಮೇಲಿದೆ. ನಾವು ಯಾವುದಕ್ಕೂ ಹಸ್ತಕ್ಷೇಪ ಮಾಡಲ್ಲ ಎಂದಿದ್ದಾರೆ. ಪ್ರಜ್ವಲ್ ರೇವಣ್ಣ ವಿಚಾರದಲ್ಲೂ ನಮ್ಮ ಜವಾಬ್ದಾರಿ ಮುಗಿದಿದೆ. ವಿದೇಶದಿಂದ ಬಂದು ತನಿಖೆ ಎದುರಿಸುವಂತೆ ನಾನೂ ಹೇಳಿದ್ದೆ, ದೇವೇಗೌಡರೂ ಸಹ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಇನ್ನೇನಿದ್ದರು ಅದರ ಜವಾಬ್ದಾರಿ ಎಸ್‌ಐಟಿ ಮತ್ತು ಕೋರ್ಟ್‌ಗೆ ಸೇರಿದ್ದು ಎಂದು ನುಡಿದಿದ್ದಾರೆ.
ಕೆ.ಆರ್ ನಗರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ (KR Nagara Victim Kidnap Case) ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು (Anticipatory Bail) ಅರ್ಜಿ ಇತ್ತೀಚೆಗಷ್ಟೇ ವಜಾಗೊಂಡಿದ್ದು ಯಾವುದೇ ಕ್ಷಣದಲ್ಲಿ ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಭವಾನಿ ರೇವಣ್ಣ ಜಾಮೀನು ಅರ್ಜಿ ವಜಾ – ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ
ಎಲ್ಲ ಮಂಡಳಿ ಹಗರಣಗಳ ತನಿಖೆ ಮಾಡಿಸಲಿ:
ಇದೇ ವೇಳೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಕುರಿತು ಮಾತನಾಡಿದ ಅವರು, ಎಸ್ಟಿ ಸಮುದಾಯದ ಹಣವನ್ನ ತೆಲಂಗಾಣದ ಚುನಾವನೆಗೆ ಬಳಸಿದ್ದೀರಾ? ಯಾವ ತನಿಖೆ ಮಾಡಿ ಯಾರ ಮೇಲೆ ಆಕ್ಷನ್ ತಗೊತೀರಾ ಸಿದ್ದರಾಮಯ್ಯ ಅವರೇ? ನಾಚಿಕೆ ಆಗಬೇಕು, ದುಡ್ಡು ದರೋಡೆ ಮಾಡಿ ಹೆಗ್ಗಣ ತಿನ್ನೋ ಕೆಲಸ ಮಾಡ್ತಿದ್ದೀರಿ ಎಂದು ಲೇವಡಿ ಮಾಡಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ, ಎಲ್ಲಾ ಬೋರ್ಡ್‌ಗಳಲ್ಲಿ ನಡೆದಿರುವ ಹಗರಣಗಳ ಬಗ್ಗೆ ತನಿಖೆ ಮಾಡಿಸಲಿ ಎಂದು ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ದೆಹಲಿ ಮದ್ಯ ಹಗರಣ – ಬಿಆರ್‌ಎಸ್ ನಾಯಕಿ ಕವಿತಾ ನ್ಯಾಯಾಂಗ ಬಂಧನ ವಿಸ್ತರಣೆ
ಪ್ರಧಾನಿಗಳ ಶ್ರಮ ಅಪಾರ:
ಎಕ್ಸಿಟ್ ಪೋಲ್ ಅಂಕಿ ಅಂಶಗಳ ಕುರಿತು ಮಾತನಾಡಿದ ಹೆಚ್‌ಡಿಕೆ, ಈ ಚುನಾವಣೆಯಲ್ಲಿ ಪ್ರಧಾನಿಗಳು 200 ಸಭೆ ಮಾಡಿದ್ದಾರೆ. ಕರ್ನಾಟಕದಲ್ಲಿ ಸಮಯ ಕೊಟ್ಟು ಪ್ರಚಾರ ಮಾಡಿದ್ದಾರೆ. ಮೋದಿ ಅವರ ಶ್ರಮ ಅಪಾರವಾಗಿದೆ. ಮೈತ್ರಿಗೆ ಒಲವು ತೋರಿದ ಅಮಿತ್ ಶಾ ಮತ್ತು ಜೆ.ಪಿ ನಡ್ಡಾ ಅವರ ಸಹಕಾರದಲ್ಲಿ ಕರ್ನಾಟಕದ ಫಲಿತಾಂಶ ಉತ್ತಮವಾಗಿ ಬರುತ್ತದೆ ಅನ್ನೋ ನಿರೀಕ್ಷೆಯಿದೆ. ಮೈತ್ರಿ ಪಕ್ಷಕ್ಕೆ 25 ಸ್ಥಾನ ಬರುವ ವಿಶ್ವಾಸವಿದೆ, ಜೆಡಿಎಸ್ ಮೂರು ಕ್ಷೇತ್ರಗಳಲ್ಲೂ ಗೆಲ್ಲಲಿದೆ. 295 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿರುವ ಕಾಂಗ್ರೆಸ್ ನಾಯಕರು ಇದೊಂದು ದಿನ ಖುಷಿ ಪಡಲಿ. ಮಂಗಳವಾರ ಎಲ್ಲವೂ ಗೊತ್ತಾಗುತ್ತದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಜೈಲಿಗೆ ಶರಣಾದ ಕೇಜ್ರಿವಾಲ್‌ಗೆ ಜೂನ್ 5 ರವರೆಗೆ ನ್ಯಾಯಾಂಗ ಬಂಧನ